ಶುಕ್ರವಾರ, ಜೂನ್ 25, 2021
22 °C
ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ

‘ಭ್ರಷ್ಟ ರಾಜಕಾರಣಿಗಳ ರಕ್ಷಿಸುವ ತಂತ್ರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತಂದು ಲೋಕಾ ಯುಕ್ತ ಸಂಸ್ಥೆಗೆ ಬಲ ನೀಡುತ್ತೆವೆ ಎಂದು ರಾಜ್ಯ ಸರ್ಕಾರ ಹೇಳುತ್ತಿರುವುದು, ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳನ್ನು ರಕ್ಷಿಸಲು ರೂಪಿಸಿದ ಕುಟಿಲ ತಂತ್ರವಾಗಿದೆ ಎಂದು ಪ್ರಜಾ ಪ್ರಭುತ್ವ ಉಳಿಸಿ ಆಂದೋಲನಾ ವೇದಿಕೆಯ ನಾಗೇಶ ಅಂಗಿರಸ ಟೀಕಿಸಿದರು.ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿ, ಲೋಕಾಯುಕ್ತ ನ್ಯಾಯಮೂರ್ತಿಗಳು ರಾಜ್ಯ ಪಾಲರನ್ನು ಭೇಟಿಯಾಗಿ ಈ ತಿದ್ದುಪಡಿ ಮಸೂದೆಗೆ ಅಂಗೀಕಾರ ಹಾಕದಂತೆ ತಡೆಯಲು ಯತ್ನಿಸಿದ್ದು, ಸರ್ಕಾರದ ನಿಜ ಬಣ್ಣಬಯಲಾಗಿದೆ ಎಂದು ತಿಳಿಸಿದರು.

ನ್ಯಾಯಮೂರ್ತಿಗಳಾದ ವೆಂಕಟಾಚಲಯ್ಯ ಮತ್ತು ಸಂತೋಷ್ ಹೆಗ್ಡೆ ಲೋಕಾಯುಕ್ತ ಸಂಸ್ಥೆಯ ಜವಾ ಬ್ದಾರಿ ಮತ್ತು ಅಧಿಕಾರ ಮಹತ್ವವನ್ನು ಜನತೆಗೆ ತಿಳಿಸಿ ದರು. ಈಗಿನ ಸರ್ಕಾರ ಲೋಕಾಯುಕ್ತವನ್ನು ಹಲ್ಲಿ ಲ್ಲದ ಹಾವಾಗಿಸಲು ಮುಂದಾಗಿದೆ ಎಂದರು.ಲೋಕಾಯುಕ್ತ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತವಾಗಿದ್ದರಿಂದ ತಾತ್ಕಾಲಿಕ ತಡೆಯಾಗಿದ್ದರೂ ಸರ್ಕಾರ ಕೆಲವು ತಂತ್ರಗಳನ್ನು ಬಳಸಿ ಮುಂದೆ ಇದನ್ನು ಜಾರಿಗೊಳಿಸುವ ಸಾಧ್ಯತೆಗಳಿವೆ. ಹೊಸ ಲೋಕಾ ಯುಕ್ತ ಕಾಯ್ದೆ ಜಾರಿಯಾದರೆ ಲೋಕಾಯುಕ್ತ ಸಂಸ್ಥೆ ಮೇಲುಸ್ತುವಾರಿಗೆ ಪ್ರತ್ಯೇಕ ವಿಚಕ್ಷಣ ದಳ ಸ್ಥಾಪನೆ ಯಾಗಲಿದೆ. ಇದುವರೆಗೆ ಲೋಕಾಯುಕ್ತ ಪೊಲೀಸರು ಹೊಂದಿದ್ದ ಸೀಮಿತ ಅಧಿಕಾರ ಕಳೆದು ಕೊಳ್ಳಲಿದ್ದು, ಈ ಸಂಸ್ಥೆ ಮೇಲೆ ಸರ್ಕಾರ ಹೊಸದಾಗಿ ಸ್ಥಾಪಿಸಲು ಉದ್ದೇಶಿಸಿರುವ ಆಡಳಿತಾತ್ಮಕ ಆಯೋಗ ತನ್ನ ಹಿಡಿತ ಸಾಧಿಸಲಿದೆ ಎಂದು ಹೇಳಿದರು.ತಿದ್ದುಪಡಿಯಂತೆ ಲೋಕಾಯುಕ್ತ ಪೊಲೀಸರು ಶಂಕಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲು, ಪ್ರಕರಣ ಗಳಲ್ಲಿ ಭಾಗಿಯಾದ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುವ ಮೊದಲು ಹೊಸ ಆಯೋಗಕ್ಕೆ ಪೂರ್ಣ ಮಾಹಿತಿ ನೀಡಿ, ಒಪ್ಪಿಗೆ ಪಡೆಯಬೇಕಾಗುತ್ತದೆ. ಎಫ್ಐಆರ್ ದಾಖಲಿಸಲು ಇದನ್ನು ಸರ್ಕಾರಕ್ಕೆ ಮತ್ತು ನ್ಯಾಯಾಲಯಕ್ಕೆ ಸಲ್ಲಿಸುವ ಮೊದಲು ವಿಚಕ್ಷಣ ದಳ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು.ವಿಚಕ್ಷಣ ದಳದ ಅನುಮತಿ ಇಲ್ಲದೆ ಭ್ರಷ್ಟರ ಮಾಹಿತಿಯನ್ನು ಮಾಧ್ಯಮಗಳ ಮುಂದೆ ಬಹಿರಂಗ ಪಡಿಸುವಂತಿಲ್ಲ. ಲೋಕಾಯುಕ್ತರು ದಾಳಿ ಮಾಡಿದ ಭ್ರಷ್ಟರ ವಿಚಾರಣೆ ನಡೆಸಬೇಕೆ? ಬೇಡವೇ? ನಡೆಸಿ ದರೂ ಯಾವ ಮಟ್ಟದಲ್ಲಿ ನಡೆಸಬೇಕೆಂಬ ಅಂಶ ಗಳನ್ನು ಹೊಸದಾಗಿ ರಚಿತವಾಗಿರುವ ವಿಚಕ್ಷಣ ದಳ ಐಎಎಸ್ ಅಧಿಕಾರಿಗಳನ್ನು ಒಳಗೊಂಡ ಆಯೋಗ ತೀರ್ಮಾನಿಸಬೇಕಾಗುತ್ತದೆ ಎಂದಿದ್ದಾರೆ.ಮುಂದಿನ ದಿನಗಳಲ್ಲಿ ಲೋಕಾಯುಕ್ತ ಸಂಸ್ಥೆ ನಾಮಕಾ ವಾಸ್ತೆ ಆಗಲಿದ್ದು, ತನಿಖೆ ದಿಕ್ಕು ತಪ್ಪಿಸಿ, ಸಿಕ್ಕಿಬಿದ್ದ ಸರ್ಕಾರಿ ಅಧಿಕಾರಿಗಳ, ರಾಜಕಾರಣಿಗಳನ್ನು ರಕ್ಷಿಸಲು ಪರವಾನಗಿ ಸಿಕ್ಕಿದಂತಾಗುತ್ತದೆ. ಸರ್ಕಾರದ ಈ ಹುನ್ನಾರವನ್ನು ವೇದಿಕೆ ಖಂಡಿಸುತ್ತದೆ ಎಂದು ತಿಳಿಸಿದರು.ಲೋಕಾಯುಕ್ತರಿಗೆ ವಿಚಾರಣಾ ಅಧಿಕಾರಿ ನೀಡಿ, ಲೋಕಾಯುಕ್ತ ಸಂಸ್ಥೆಯನ್ನು ಈಗಿರುವ ಕಾಯ್ದೆ ಅಡಿಯಲ್ಲಿ ಇನ್ನಷ್ಟು ಬಲಗೊಳಿಸಿ ಸ್ವಾಯತ್ತ ಸಂಸ್ಥೆಯ ನ್ನಾಗಿಸಿ, ಮುಖ್ಯಮಂತ್ರಿಗಳಾದಿಯಾಗಿ ಎಲ್ಲರೂ ಲೋಕಾಯುಕ್ತ ವಿಚಾರಣಾ ವ್ಯಾಪ್ತಿಗೆ ಒಳಪಡಬೇಕೆಂದು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.