‘ಮಕ್ಕಳಲ್ಲಿ ಒಳ್ಳೆಯ ಮೌಲ್ಯಗಳನ್ನು ಬೆಳೆಸಿ’

7

‘ಮಕ್ಕಳಲ್ಲಿ ಒಳ್ಳೆಯ ಮೌಲ್ಯಗಳನ್ನು ಬೆಳೆಸಿ’

Published:
Updated:

ಬೆಂಗಳೂರು: ‘ಸಮಾಜದಲ್ಲಿ ಬದಲಾ­ವಣೆ­­ಯಾಗಬೇಕಾದರೆ  ಮಕ್ಕಳಲ್ಲಿ ಒಳ್ಳೆಯ ಮೌಲ್ಯಗಳನ್ನು ಬೆಳೆಸ ಬೇಕಾದ ಅಗತ್ಯವಿದೆ’ ಎಂದು ಹುಬ್ಬಳ್ಳಿ­ಯ ಆರ್ಷವಿದ್ಯಾ ಗುರುಕುಲದ ಸ್ವಾಮಿ ಚಿದ್ರೂಪಾನಂದ ಸರಸ್ವತಿ ಹೇಳಿದರು.ವಿವೇಕಾನಂದ ಯೋಗ ಅನು­ಸಂಧಾನ ಸಂಸ್ಥಾನದ ವತಿಯಿಂದ ಭಾನು­ವಾರ ನಗರದಲ್ಲಿ ಆಯೋಜಿಸಿದ್ದ 20ನೇ ಅಂತರರಾಷ್ಟ್ರೀಯ ಯೋಗ ಸಮ್ಮೇಳನದ ಸಮಾರೋಪ ಸಮಾ­ರಂಭ ಮತ್ತು ಭಗವದ್ಗೀತಾ ಪುನರ್‌­ಮನನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಎಲ್ಲರೂ ನಮ್ಮ ಮುಂದಿನ ಪೀಳಿಗೆ ಉತ್ತಮವಾಗಿರಬೇಕು, ಮಕ್ಕಳಿಗೆ ಭವ್ಯ ಭವಿಷ್ಯವನ್ನು ಕಲ್ಪಿಸಬೇಕು ಎಂದು ಬಯಸುತ್ತಾರೆ. ಆದರೆ, ತಾವೇ ಸಾಮಾಜಿಕ, ನೈತಿಕ, ರಾಷ್ಟ್ರೀಯ ಮೌಲ್ಯ­ಗ­ಳನ್ನು  ಮರೆತಿರುತ್ತಾರೆ. ಇದರಿಂದ ಸಮಾಜದಲ್ಲಿ ಬದಲಾವಣೆ    ಸಾಧ್ಯವಿಲ್ಲ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry