ಗುರುವಾರ , ಜೂನ್ 17, 2021
21 °C

‘ಮಕ್ಕಳಿಗೂ ಸಮಯ ಮೀಸಲಿಡಿ’

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪುರ: ಒತ್ತಡದ ಬದುಕಿನ ನಡುವೆ ಪೋಷಕರು ತಮ್ಮ ಮಕ್ಕಳ ಜತೆ ಹೆಚ್ಚಿನ ಸಮಯವನ್ನು ಮೀಸಲಿಡಲು ಆಗುತ್ತಿಲ್ಲ. ಆದರೆ ಮಕ್ಕಳ ಭವಿಷ್ಯ ದೃಷ್ಟಿ­ಯಿಂದ ಮನೆಯೇ ಮೊದಲ ಪಾಠಶಾಲೆ ಆಗಬೇಕು ಎಂದು ಕೇಂಬ್ರಿಜ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಕೆ.ಮೋಹನ್ ಹೇಳಿದರು.ಬಸವನಪುರ ಕೇಂಬ್ರಿಜ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಏರ್ಪಡಿಸಿದ್ದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರವೇಶ ಕೋರಿ ಸುಮಾರು 208 ಅರ್ಜಿಗಳು ಬಂದಿದ್ದವು. ವಾರ್ಡ್ 53ರ ವ್ಯಾಪ್ತಿಯಲ್ಲಿ 93 ಅರ್ಜಿಗಳನ್ನು ಪರಿಗಣಿಸಲಾಯಿತು. ಅವುಗಳಲ್ಲಿ 42 ಮಕ್ಕಳಿಗೆ ಲಾಟರಿ ಎತ್ತಿಸುವ ಮೂಲಕ ದಾಖಲಾತಿ ನೀಡಲಾಗಿದೆ ಎಂದು ಅವರು ವಿವರಿಸಿದರು.ಮೌಂಟ್ ಸಿನೋರಿಯಾ ಶಾಲೆಯ ಪ್ರಾಚಾರ್ಯೆ ರೀಬಕಾ ಚೆರಿಯನ್, ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಎಂ. ಶೀತಲಾ, ಪ್ರಾಚಾರ್ಯೆ ಈಸ್ಟರ್ ಪಿಳ್ಳೈ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.