ಭಾನುವಾರ, ಜೂನ್ 20, 2021
25 °C

‘ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜರಾಜೇಶ್ವರಿನಗರ: ಬಾಲ್ಯದ­ಲ್ಲಿಯೇ ಮಕ್ಕಳಿಗೆ ಸರಿಯಾದ ಸಂಸ್ಕಾರ­ವನ್ನು ಕಲಿಸಬೇಕು. ದೊಡ್ಡವರಾದಾಗ ಅವರು ಸಮಾಜದ ಆಸ್ತಿಯಾಗಿ ಬೆಳೆಯುತ್ತಾರೆ ಎಂದು ದೇವಿಶ್ರೀ ಫೌಂಡೇಶನ್‌ನ ಶ್ರೀ ಶ್ರೀ ದೇವಿಶ್ರೀ ಅವರು ಹೇಳಿದರು.ಬಾಲಕೃಷ್ಣ ಬಯಲು ರಂಗಮಂದಿರ­ದಲ್ಲಿ ಹಮ್ಮಿಕೊಂಡಿದ್ದ ಸಮಾರಂಭ­ದಲ್ಲಿ ವಿದ್ಯಾಚಕ್ರ ವಿತರಣೆ ಮಾಡಿ ಅವರು ಮಾತನಾಡಿ, ಮಕ್ಕಳು ದುಶ್ಚಟ­ಗಳಿಗೆ ಬಲಿಯಾಗ­ದಂತೆ ನೋಡಿ­ಕೊಳ್ಳ­ಬೇಕು. ಆಗ ಅವರು ದೇಶ, ನಾಡು, ಸಂಸ್ಕೃತಿ, ಧರ್ಮವನ್ನು ಉಳಿಸುತ್ತಾರೆ ಎಂದರು.ಸಾವಿ­ರಾರು ವಿದ್ಯಾರ್ಥಿಗಳಿಗೆ ವೈಯ­ಕ್ತಿ­ಕ­­ವಾಗಿ ವಿದ್ಯಾಚಕ್ರ ನೀಡುವುದರಿಂದ ಸಂ ಸ್ಕಾರ ಬೆಳೆಯಲು ಸಹಕಾರಿ­ಯಾ­ಗಿದ್ದಾರೆ ಎಂದು ಕಾರ್ಯ­ಕ್ರಮದ ಆಯೋ­ಜಕ ತಿಬ್ಬೇ­ಗೌಡ, ರಾಜ­ರಾಜೇಶ್ವರಿನಗರ ವಿಧಾನ­­ಸಭಾ ಕಸಾಪ ಅಧ್ಯಕ್ಷ ಹೊ.ಬೋ. ಪುಟ್ಟೇಗೌಡ ಮಾತನಾಡಿದರು. ಚಿಕ್ಕಮಗಳೂರು, ಕೋಲಾರ, ರಾಮ­ನಗರ, ಮಂಡ್ಯ, ಮೈಸೂರು, ಚಾಮರಾ­ಜನಗರ, ತುಮಕೂರು ಜಿಲ್ಲೆಗಳಿಂದ ವಿದ್ಯಾರ್ಥಿಗಳು ಬಂದಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.