‘ಮಕ್ಕಳ ಕ್ರೀಡಾ ಭಾವನೆಗೆ ಪ್ರೋತ್ಸಾಹ ಅಗತ್ಯ’

7

‘ಮಕ್ಕಳ ಕ್ರೀಡಾ ಭಾವನೆಗೆ ಪ್ರೋತ್ಸಾಹ ಅಗತ್ಯ’

Published:
Updated:

ಬೆಂಗಳೂರು: ‘ಮಕ್ಕಳಿಗೆ ವಿದ್ಯಾಭ್ಯಾಸದ ಜತೆಗೆ ಕ್ರೀಡೆಯು ಮಹತ್ವವಾಗಿದೆ. ಆದ್ದರಿಂದ, ಮಕ್ಕಳಲ್ಲಿ ಅಡಗಿರುವ ಕ್ರೀಡಾ ಭಾವನೆಗೆ ಪ್ರೋತ್ಸಾಹ ನೀಡ­ಬೇಕು’ ಎಂದು ವಿಧಾನ ಪರಿಷತ್‌ ಶಾಸಕ ರಾಮಚಂದ್ರಗೌಡ ಹೇಳಿದರು.ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್‌, ಕರ್ನಾಟಕ ಕ್ರೀಡಾ ಪ್ರಾಧಿಕಾರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಸೋಮವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಬೆಂಗಳೂರು ಜಿಲ್ಲಾ ಮಟ್ಟದ ದಸರಾ ಮಹಿಳಾ ಮತ್ತು ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.‘ಮಕ್ಕಳು ಕ್ರೀಡೆಯಲ್ಲಿ ಭಾಗವಹಿ­ಸುವುದರಿಂದ ಸ್ವಾಭಿಮಾನ ಬೆಳೆಯುವ ಜತೆಗೆ ಭೌತಿಕವಾಗಿ, ಮಾನಸಿಕವಾಗಿ ಬೆಳೆಯಬಹುದು. ಕ್ರೀಡೆಗಳಲ್ಲಿ ಭಾಗವ­ಹಿಸುವುದು ಮುಖ್ಯ. ಸೋಲು ಗೆಲುವು ಸಹಜ’ ಎಂದು ಅಭಿಪ್ರಾಯಪಟ್ಟರು.ಜಿಲ್ಲಾ ಪಂಚಾಯತ್‌ ಅಧ್ಯಕ್ಷ ತಿರು­ವರಂಗ ವಿ.ನಾರಾಯಣಸ್ವಾಮಿ ಮಾತ­ನಾಡಿ, ‘ಸರ್ಕಾರ ಕ್ರೀಡಾಪ­ಟುಗಳನ್ನು ಉತ್ತೇಜಿಸುವ ಸಲುವಾಗಿ ಶಿಕ್ಷಣ, ಉದ್ಯೋಗದಲ್ಲಿ ಪ್ರತ್ಯೇಕ ಮೀಸಲಾತಿ ಇಟ್ಟಿದೆ.  ನಮ್ಮ ಕ್ರೀಡಾಪಟುಗಳು ಅದನ್ನು ಸದುಪಯೋ­ಗಪ­ಡಿ­ಸಿಕೊಂಡು, ಸ್ಫರ್ಧಾ ಮನೋ­ಭಾವದಿಂದ ಕ್ರೀಡೆ­ಯಲ್ಲಿ ಭಾಗವಹಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry