ಗುರುವಾರ , ಜೂನ್ 17, 2021
28 °C

‘ಮಠಗಳಿಗೆ ಶೀಘ್ರದಲ್ಲಿ ಬಂಪರ್‌ ಕೊಡುಗೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ): ರಾಜ್ಯ ಸರ್ಕಾರ ಮಠಗಳ ವಿರೋಧಿಯಲ್ಲ, ಎರಡು–ಮೂರು ದಿನದ ಒಳಗಾಗಿ ಹಲವು ಮಠಗಳಿಗೆ ಭಾರಿ ಬಂಪರ್‌ ಕೊಡುಗೆ ಪ್ರಕಟಿಸ ಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಹೇಳಿದರು.ತಾಲ್ಲೂಕಿನ ಸಿದ್ದಯ್ಯನಕೋಟೆ ವಿಜಯ ಮಹಾಂತೇಶ್ವರ ಶಾಖಾಮಠದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಗಡಿನಾಡ ಉತ್ಸವದಲ್ಲಿ ಮಾತನಾಡಿ, ಮೂಢನಂಬಿಕೆ ವಿರೋಧಿ ವಿಧೇಯಕ ಮಂಡನೆಗೆ ರಾಜ್ಯಸರ್ಕಾರ ಸಿದ್ಧವಿದೆ.ಲೋಕಸಭೆ ಚುನಾವಣೆ ನಂತರ ಮಸೂದೆ ಜಾರಿ ಕುರಿತು ಕ್ರಮಕೈಗೊಳ್ಳಲಾಗುವುದು. ಮೂಢನಂಬಿಕೆ ಹೆಸರಿನಲ್ಲಿ ಅಮಾಯಕರಿಗೆ ಆಗುತ್ತಿರುವ ತೊಂದರೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸಚಿವರು  ಚಿತ್ರದುರ್ಗ ಶಿವಮೂರ್ತಿ ಮುರುಘಾ ಶರಣರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.