ಭಾನುವಾರ, ಜೂನ್ 13, 2021
20 °C

‘ಮತಗಟ್ಟೆಗಳಲ್ಲಿ ಮೂಲ ಸೌಲಭ್ಯ ಇರಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಣ: ರೋಣ ಮತಕ್ಷೇತ್ರದ ವ್ಯಾಪ್ತಿಯೊಳಗಿನ ಎಲ್ಲಾ ಮತಗಟ್ಟೆಗಳಲ್ಲಿ ಚುನಾವಣೆಯ ಕಾರ್ಯ­ನಿರ್ವಹಿಸಲು ಬರುವ ಸಿಬ್ಬಂದಿ ಅನುಕೂಲ ಹಾಗೂ ಸುವ್ಯಸ್ಥೆಗಾಗಿ ಮತಗಟ್ಟೆಗಳಲ್ಲಿ ವಿದ್ಯುತ್, ಕುಡಿಯುವ ನೀರು, ಶೌಚಾಲಯ ಮತ್ತು ರ್‍ಯಾಂಪ್ ಕಡ್ಡಾಯವಾಗಿ ಇರುವಂತೆ ಅಲ್ಲಿನ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಹಾಗೂ ಸೆಕ್ಟರ್ ಅಧಿಕಾರಿಗಳು ಮುತುವರ್ಜಿ ವಹಿಸಿ ಚುನಾವಣಾ ಕಾರ್ಯಕ್ಕೆ ಯಾವುದೇ ತೊಂದರೆ­ಯಾಗದಂತೆ ಕಾರ್ಯಗಳನ್ನು ನಿಗದಿತ ಅವಧಿಯೊಳಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿ.ಪಂ. ಉಪ ಕಾರ್ಯದರ್ಶಿ ಹಾಗೂ ಚುನಾವಣೆಯ ಎ.ಆರ್.ಒ ಷಡಕ್ಷರಪ್ಪ ಸೂಚಿಸಿದರು.ಅವರು ಭಾನುವಾರ ಪಟ್ಟಣದ ತಾಲ್ಲೂಕು ಪಂಚಾ­ಯಿತಿ ಸಭಾಭವನದಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾ­ರಿಗಳ, ವಿವಿಧ ಸಮಿತಿಗಳ ತಂಡದ ಹಾಗೂ ಹಿರಿಯ ಅಧಿಕಾ­ರಿಗಳ ಸಭೆಯನ್ನು ನಡೆಸಿ ಈ ವಿಷಯ ತಿಳಿಸಿದರು.ಮಾದರಿ ಮತಗಟ್ಟೆ: ರೋಣ ವಿಧಾನಸಭಾ ಮತಕ್ಷೇ­ತ್ರದ ವ್ಯಾಪ್ತಿಯೊಳಗಿನ 5 ಮತಗಟ್ಟೆಗಳನ್ನು ಅಂದರೆ ಮುಂಡರಗಿ ತಾಲ್ಲೂಕಿನ 2, ರೋಣ ತಾಲ್ಲೂಕಿನಲ್ಲಿ 3 ಒಟ್ಟು 5 ಮಾದರಿಯ ಮತಗಟ್ಟೆಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದ್ದು, ಈ ಮತಗಟ್ಟೆಗಳಲ್ಲಿ ಶಾಮಿ­­ಯಾನಾ, ಕುರ್ಚಿ, ದಿನಪತ್ರಿಕೆ, ವಿವಿಧ ಮೂಲ  ಸೌಕರ್ಯ ಮೂಲಕ ಇವುಗಳನ್ನು ಮಾದರಿಯ ಮತ­ಗಟ್ಟೆ­ಗಳನ್ನಾಗಿ ಮಾಡುತ್ತೇವೆ.ಒಂದು ಗ್ರಾಮದಲ್ಲಿ ಒಂದೇ ಮತಗಟ್ಟೆಯಿರುವ ಬಗ್ಗೆ ತಕ್ಷಣವೇ ಮಾಹಿತಿ ನೀಡಿ ಮತ್ತು ಮತದಾನಕ್ಕೆ ಬರುವ ಮತದಾರರಿಗೆ ನೆರ­ಳಿನ ವ್ಯವಸ್ಥೆ ಇರದಿದ್ದರೆ ಅಲ್ಲಿನ ವಾಸ್ತವವನ್ನು ಅರಿತು­ಕೊಂಡು ಶಾಮಿಯಾನಾ ಹಾಕಿಸಬೇಕು ಎಂದರು.6 ವಾಹನ: ಚುನಾವಣೆಯ ಕಾರ್ಯದಲ್ಲಿ ತೊಡಗುವ ಅಧಿಕಾರಿಗಳಿಗೆ ಇಲ್ಲಿ ವಾಹನದ ತೊಂದರೆ ಇರುವದು ಕಂಡು ಬಂದಿರುವುದರಿಂದ ವಿವಿಧ ರೀತಿಯಲ್ಲಿ ರೋಣ ಮತಕ್ಷೇತ್ರಕ್ಕೆ 6 ವಾಹನಗಳನ್ನು ನೀಡುತ್ತಿದ್ದು ಇವುಗಳಲ್ಲಿ 2 ಮುಂಡರಗಿ ತಾಲ್ಲುಕಿನ ವ್ಯಾಪ್ತಿಗೆ ಇನ್ನೂ 4 ರೋಣ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸಲು ಬಳಸಿಕೊಳ್ಳಬೇಕು ಎಂದರು.ಮತಗಟ್ಟೆಗಳ ಮೇಲೆ ನಿಗಾ: ರೋಣ ಮತಕ್ಷೇತ್ರದಲ್ಲಿ 25 ವಲ್ನರಬಲ್‌, 11 ಕ್ರಿಟಿಕಲ್, ಸೂಕ್ಷ್ಮ 77, ಅತಿಸೂಕ್ಷ್ಮ 68 ಮತಗಟ್ಟೆಗಳೆಂದು  ಗುರುತಿಸಲಾಗಿದ್ದು ಇವುಗಳ ಮೇಲೆ ಸಂಪೂರ್ಣ ನಿಗಾವಹಿಸಬೇಕು ಮತ್ತು ಇವುಗಳಲ್ಲಿ ವಿಡಿಯೊ ಚಿತ್ರಣ, ಮೈಕ್ರೋಆಜ್ಬವರ್, ಪೋಟೋಗ್ರಾಫಿಗಳನ್ನು ಅಳವಡಿಸಿಕೊಳ್ಳುವ ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದರು.ಹಣದ ಕೊರತೆ ನೆಪಬೇಡ: ಚುನಾವಣೆಯ ವಿವಿಧ ಕಾರ್ಯಗಳ ಮತ್ತು ಮತಗಟ್ಟೆಗಳ ಮೂಲ ಸೌಕರ್ಯಗಳ ವ್ಯವಸ್ಥೆಗೆ ಹಣದ ಅಡಚಣೆಯ ನೆಪ ಮಾಡಿ ಮತದಾನದಲ್ಲಿ ಅಂತಹ ತೊಂದರೆ ಕಂಡುಬಂದರೆ ಆಯಾ ಅಭಿವೃದ್ಧಿ ಅಧಿಕಾರಿಗಳೇ ನೇರ ಹೊಣೆಯಾಗಬೇಕಾಗುತ್ತದೆ ಎಮದು ಎಚ್ಚರಿಸಿದರು.ಈ ಸಮಯದಲ್ಲಿ ರೋಣ ತಹಶೀಲ್ದಾರ್‌ ಎ.ಜಿ. ಪಂಡಿತ, ಮುಂಡರಗಿ ತಹಶೀಲ್ದಾರ್‌ ಹೆಗ್ಗೊಂಡ, ರೋಣ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಮ್. ಪಿಡಶೆಟ್ಟರ, ಮುಂಡರಗಿ ಇಒ ಡಾ.ಡಿ. ಮೋಹನ, ಜಿ.ಪಂ. ಎಇಇ ಕೆ.ಎಲ್. ಕಟ್ಟಿಮನಿ, ಉಪ ತಹಶೀಲ್ದಾರ್‌ ಎನ್.ಎಸ್. ಕೂಡಲ ಸೇರಿದಂತೆ ಹಲವರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.