‘ಮತಬ್ಯಾಂಕ್‌ ರಾಜಕಾರಣಕ್ಕೆ ಆಕ್ರೋಶ’

7

‘ಮತಬ್ಯಾಂಕ್‌ ರಾಜಕಾರಣಕ್ಕೆ ಆಕ್ರೋಶ’

Published:
Updated:

ಆಲಮಟ್ಟಿ: ಮುಸ್ಲಿಂರನ್ನು ಮತಬ್ಯಾಂಕ್‌ ಮಾಡಿಕೊಂಡು ರಾಜಕೀಯ ಮಾಡು ತ್ತಿರುವ ಕಾಂಗ್ರೆಸ್‌ನಿಂದ ಮುಸ್ಲಿಂರಿಗೆ ಅನ್ಯಾಯವಾಗಿದೆ ಎಂದು ಕರ್ನಾಟಕ ಮುಸ್ಲಿಂ ಕೌನ್ಸಿಲ್‌ನ ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ಕೆ.ಎಂ. ರಿಸಾಲ್ದಾರ ಹೇಳಿದರು.ಆಲಮಟ್ಟಿಯಲ್ಲಿ ಈಚೆಗೆ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿ. ರಾಜ್ಯದಲ್ಲಿ 50 ವರ್ಷಕ್ಕೂ ಹೆಚ್ಚಿನ ಕಾಲ ಕಾಂಗ್ರೆಸ್‌ ಪಕ್ಷ ಆಳಿದರೂ ವಿಜಾಪುರ–ಬಾಗಲ ಕೋಟೆ ಜಿಲ್ಲೆಯ ಯಾವೊಬ್ಬ ಮುಸ್ಲಿಂ ಮುಖಂಡರಿಗೆ ವಿಧಾನಪರಿಷತ್‌ ಸದಸ್ಯ ಸ್ಥಾನವಾಗಲಿ, ನಿಗಮ ಮಂಡಳಿ ಸ್ಥಾನ ವನ್ನಾಗಲಿ ನೀಡಿಲ್ಲ, ಇದು ಮುಸ್ಲಿಂರ ಬಗ್ಗೆ ಕಾಂಗ್ರೆಸ್‌ಗಿರುವ ಅಸಡ್ಡೆಯನ್ನು ಎತ್ತಿತೋರಿಸುತ್ತದೆ ಎಂದು ಅವರು ಆರೋಪಿಸಿದರು.12 ರಂದು ಸಭೆ: ಕಾಂಗ್ರೆಸ್ ಪಕ್ಷದಲ್ಲಿ ರುವ ಎಲ್ಲಾ ಮುಸ್ಲಿಂರೂ ಒಂದೇ ವೇದಿ ಕೆಯಡಿ ಕೂಡಿ ಮುಸ್ಲಿಂ ಸಮುದಾಯದ ಜನತೆಯ ಏಳಿಗೆಯ ಚಿಂತನೆಗಾಗಿ, ಮುಂದಿನ ಹೋರಾಟದ ರೂಪುರೇಷೆ ಗಾಗಿ, ರಾಜಕೀಯ ಸ್ಥಾನಮಾನ ಪಡೆ ಯುವ ಸಲುವಾಗಿ ಆಲಮಟ್ಟಿಯ ಪೆಟ್ರೋಲ್‌ಪಂಪ್‌ನ ಅಶೋಕ ಹೊಟೇಲ್‌ ಸಭಾಭವನದಲ್ಲಿ ಇದೇ ಜ 12 ಭಾನುವಾರ ಸಭೆ ಕರೆಯಲಾಗಿದೆ ಎಂದರು.ಈ ಸಭೆಯಲ್ಲಿ ಅವಳಿ ಜಿಲ್ಲೆಯ ಎಲ್ಲಾ ಮುಸ್ಲಿಂ ಸಮುದಾಯ ಕಾಂಗ್ರೆಸ್ ಮುಖಂಡರು ಪಾಲ್ಗೊಳ್ಳ ಲಿದ್ದು, ಸಮುದಾಯದ ಮುಖಂಡ ರಾದ ಉಸ್ಮಾನಗಣಿ ಹುಮನಾಬಾದ, ಎಸ್.ಎಂ. ಪಾಟೀಲ (ಗಣಿಹಾರ) ಸೇರಿದಂತೆ ಮೊದಲಾದ ಮುಖಂಡರು ಪಾಲ್ಗೊಳ್ಳಲಿದ್ದಾರೆ.ನರೇಂದ್ರ ಮೋದಿ ಪ್ರಧಾನಿಯಾ ದರೇ, ಅಲ್ಪಸಂಖ್ಯಾತರು ಬದುಕುವುದು ಕಷ್ಟ ಎಂದು ಮಾತನಾಡುವ ಕಾಂಗ್ರೆಸ್ ಮುಖಂಡರು, ತಾವು ಮುಸ್ಲಿಂ ಸಮು ದಾಯಕ್ಕೆ ಮಾಡಿದ ಅಭಿವೃದ್ಧಿ ಕಾರ್ಯ ಗಳಾದರೂ ಏನು? ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.ಅದಕ್ಕಾಗಿ ಜ 12 ಭಾನುವಾರ ರಾಜಕೀಯ ಸ್ಥಾನಮಾನಕ್ಕೆ ಆಗ್ರಹಿಸಲು ಕಾಂಗ್ರೆಸ್ ಮುಸ್ಲಿಂ ಮುಖಂಡರ ಸಭೆಯನ್ನು ಕರೆಯಲಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಮುಸ್ಲಿಂ ಕೌನ್ಸಿಲ್‌ನ ಜಿಲ್ಲಾ ಯುವ ಘಟಕದ ಅಧ್ಯಕ್ಷ ಎಂ.ಆರ್. ಮುಲ್ಲಾ, ಎಸ್.ಎ. ಮೋಮಿನ, ಸಲೀಮ್ ಮುಲ್ಲಾ ಮೊದಲಾದವರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry