‘ಮತ್ತೆ ಎದ್ದು ನಿಲ್ಲುವ ತಾಕತ್ತು ಭಾರತಕ್ಕೆ ಇದೆ’

7

‘ಮತ್ತೆ ಎದ್ದು ನಿಲ್ಲುವ ತಾಕತ್ತು ಭಾರತಕ್ಕೆ ಇದೆ’

Published:
Updated:

ನವದೆಹಲಿ (ಪಿಟಿಐ/ಐಎಎನ್‌ಎಸ್‌):  ಭಾರತಕ್ಕೆ ಮತ್ತೊಮ್ಮೆ ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊರ­ಹೊಮ್ಮುವ ಅವಕಾಶ ಇದೆ. ಅದು ಚೀನಾಗೆ ಸರಿಸಾಟಿ­ಯಾಗ­ಬಲ್ಲದು. ಇದಕ್ಕಾಗಿ ನನ್ನ ಬಳಿ ಸ್ಪಷ್ಟವಾದ ರೂಪುರೇಷೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ಭಾರತವನ್ನು ಯಾರೂ ಮಣಿಸಲಾ­ಗದು ಎನ್ನುವ ಭಾವನೆ ಶತಮಾನಗಳ ಹಿಂದೆ ಇತ್ತು. ನಾವು ಆ ಸ್ಥಿತಿಯಿಂದ ಕೆಳಗೆ ಇಳಿದಿದ್ದೇವೆ.

ಆದರೆ ಮತ್ತೊಮ್ಮೆ ಎದ್ದು ನಿಲ್ಲುವ ಅವಕಾಶ ನಮ್ಮ ಮುಂದೆ ಇದೆ.ಇತಿಹಾಸವನ್ನು ಇಣುಕಿ ನೋಡಿ­ದರೆ ಭಾರತ ಹಾಗೂ ಚೀನಾ ಸರಿಸಾ­ಟಿ­ಯಾಗಿ ಬೆಳೆದಿರುವುದು ಗೊತ್ತಾಗು­ತ್ತದೆ’  ಎಂದು ‘ಸಿಎನ್‌ಎನ್‌’ ಸುದ್ದಿವಾಹಿನಿಗೆ ನೀಡಿದ ಸಂದರ್ಶ­ನದಲ್ಲಿ ಅವರು ಹೇಳಿದ್ದಾರೆ. ‘ಭಾರತವು ಬೇರೆ ಏನೂ ಆಗಬೇಕಾ­ಗಿಲ್ಲ.  ಅದು ಭಾರತವೇ ಆಗಬೇಕು. ದೇಶದ ನೂರು ಕೋಟಿಗೂ ಹೆಚ್ಚು ಜನರ ಉದ್ಯಮಶೀಲ ಪ್ರವೃತ್ತಿಯ ಬಗ್ಗೆ ನನಗೆ ಅಪಾರ ನಂಬಿಕೆ ಇದೆ. ಈಗ ಮತ್ತೆ ಏಷ್ಯಾ ಯುಗ ಶುರುವಾಗಿದೆ. ಭಾರತ ಹಾಗೂ ಚೀನಾ ಕ್ಷಿಪ್ರಗತಿಯಲ್ಲಿ  ಬೆಳೆ­ಯುತ್ತಿವೆ’ ಎಂದೂ ಅವರು ತಿಳಿಸಿದ್ದಾರೆ.ಚೀನಾದಲ್ಲಿ ಆಡಳಿತಗಾರರಿಗೆ ಇರು­ವಂತೆ ಪೂರ್ಣ ಅಧಿಕಾರ ಬೇಕು ಎಂದು ನಿಮಗೆ ಯಾವ­ತ್ತಾದರೂ ಅನಿಸಿದೆಯೇ ಎಂಬ ಪ್ರಶ್ನೆಗೆ, ‘ಪ್ರಜಾ­ತಂತ್ರ ದೇಶಗಳು ಕೂಡ ಪ್ರಗತಿ ಸಾಧಿಸಿವೆ. ಪ್ರಜಾತಂತ್ರ ಇರದಿದ್ದಲ್ಲಿ ಬಡ ಕುಟುಂಬದಿಂದ ಬಂದ ನಾನು ಈ ಸ್ಥಾನಕ್ಕೆ ಏರುತ್ತಲೇ ಇರಲಿಲ್ಲ’ ಎಂದಿದ್ದಾರೆ.‘ಇದು ಸಹಭಾಗಿತ್ವದ ಯುಗ. ಚೀನಾ ತನ್ನ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಿದೆ. ತಾನು ಪ್ರತ್ಯೇಕವಾಗಿ ಇರಲು ಇಷ್ಟಪಡು­ವುದಿಲ್ಲ ಎನ್ನುವು­ದನ್ನು ಈ ಮೂಲಕ ತೋರಿಸಿಕೊಟ್ಟಿದೆ’ ಎಂದೂ ಅವರು ಹೇಳಿದ್ದಾರೆ. ಭಾರತ–ಅಮೆರಿಕ ಸಂಬಂಧದ ಬಗ್ಗೆಯೂ ಅವರು ಮಾತನಾಡಿದ್ದಾರೆ. ‘ಈ ಎರಡೂ ದೇಶ­ಗಳಿಗೆ ಪ್ರಾಮಾಣಿಕ ಸಹಭಾಗಿತ್ವ ಬೆಳೆಸಿಕೊಳ್ಳುವ ಶಕ್ತಿ ಇದೆ.  ನಮ್ಮಲ್ಲಿ ಅನೇಕ ಸಾಮ್ಯತೆಗಳು ಇವೆ. ಕಳೆದ ಶತಮಾನದಲ್ಲಿ ನಮ್ಮ ಸಂಬಂಧ­ದಲ್ಲಿ ಏರಿ­ಳಿತಗಳು ಕಂಡುಬಂದಿದ್ದು  ನಿಜ. ಆದರೆ, ೨೧ನೇ ಶತ­ಮಾನದ ಮೊದಲ ದಶಕ­ದಲ್ಲಿ ನಮ್ಮ ಸಂಬಂಧ ಗಟ್ಟಿಯಾ­ಗಿದೆ’ ಎಂದು ಹೇಳಿದ್ದಾರೆ.ಸಾಮೂಹಿಕ ಜವಾಬ್ದಾರಿ

‘ಈ ದೇಶದ ಮಹಿಳೆಯರ ಘನತೆ–ಗೌರವ ಕಾಪಾಡುವುದು ಸಾಮೂಹಿಕ ಹೊಣೆ­ಗಾರಿಕೆ­ಯಾಗಿದೆ.  ಈ ವಿಷಯ­ದಲ್ಲಿ ರಾಜಿ ಮಾಡಿ­ಕೊಳ್ಳ­ಬಾರದು. ಹೆಣ್ಣು ಮಗುವಿನ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆಗ ಮಾತ್ರ ಮಹಿಳಾ ಸಬ­ಲೀಕರಣದ ಸಾಧ್ಯತೆ ಹೆಚ್ಚಾಗುತ್ತದೆ’ ಎಂದು ಮೋದಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry