‘ಮದುವೆಗೆ ಆದ್ಯತೆಯಿಲ್ಲ’

7

‘ಮದುವೆಗೆ ಆದ್ಯತೆಯಿಲ್ಲ’

Published:
Updated:
‘ಮದುವೆಗೆ ಆದ್ಯತೆಯಿಲ್ಲ’

‘ಇನ್ನೂ ಒಂದಷ್ಟು ದಿನ ಹೀಗೆಯೇ ಒಂಟಿಯಾಗಿರಲು ಇಚ್ಛಿಸುತ್ತೇನೆ. ಮದುವೆಯಾಗುವ ಯೋಚನೆ ಸದ್ಯಕ್ಕಿಲ್ಲ. ನಾನು ಯೋಚಿಸಬೇಕಾದ, ಚಿಂತಿಸಬೇಕಾದ ಆದ್ಯತೆಯ ವಿಚಾರಗಳು ಬೇರೆ ಇವೆ. ಹೀಗಾಗಿ ಸದ್ಯಕ್ಕೆ ಮದುವೆಗೆ ಪ್ರಾಶಸ್ತ್ಯ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ ಬಾಲಿವುಡ್‌ ಬೆಡಗಿ ಕಂಗನಾ ರನೋಟ್.ಅವರ ಅಭಿನಯದ ‘ಕ್ವೀನ್‌’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಕಂಗನಾ ಅದಕ್ಕಾಗಿ ಎದುರು ನೋಡುತ್ತಿದ್ದಾರೆ. ‘ಬದುಕಿನಲ್ಲಿ ನನ್ನ ಆದ್ಯತೆಯ ಒಂದಷ್ಟು ವಿಚಾರಗಳತ್ತ ಮೊದಲು ಗಮನ ಕೇಂದ್ರೀಕರಿಸಬೇಕಾಗಿದೆ’ ಎಂಬುದು ಅವರ ಅನಿಸಿಕೆ. ಮದುವೆಯೆಂದರೆ ತಮಾಷೆಯಲ್ಲ. ಲಘುವಾಗಿ ಪರಿಗಣಿಸುವ ಸಂಗತಿಯೂ ಅಲ್ಲ. ಅದೊಂದು ಸಾಂಗತ್ಯ ಮತ್ತು ಬದ್ಧತೆ. ಅಂತಹ ಜವಾಬ್ದಾರಿಯನ್ನು ನಿಭಾಯಿಸಲು ತಮಗೆ ಪುರುಸೊತ್ತಿಲ್ಲ ಎಂದವರು ಪ್ರತಿಕ್ರಿಯಿಸಿದ್ದಾರೆ.‘ಒಂಟಿಯಾಗಿರುವುದನ್ನು ಸಾಕಷ್ಟು ಆನಂದಿಸಿದ್ದೇನೆ. ಮಜವಾಗಿ ಕಳೆದಿದ್ದೇನೆ. ಅಡುಗೆ ಮಾಡುವುದು, ನೃತ್ಯ ಮಾಡುವುದು ನನ್ನ ಏಕಾಂತದ ನೆಚ್ಚಿನ ಚಟುವಟಿಕೆಗಳು’ ಎಂದಿರುವ ಕಂಗನಾ, ಒಂಟಿಯಾಗಿದ್ದು ತಮ್ಮದೇ ಸಾಂಗತ್ಯ ಅನುಭವಿಸಿದವರೆಲ್ಲ ಚೆನ್ನಾಗೇ ಇದ್ದಾರೆ ಎಂದೂ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.ಮಹಿಳಾ ಪ್ರಧಾನ ಚಿತ್ರವಾಗಿರುವ ‘ಕ್ವೀನ್‌’ನಲ್ಲಿನ ಪಾತ್ರವನ್ನು ಮೆಚ್ಚಿರುವ ಕಂಗನಾ, ಈ ವರ್ಷ ನಟಿಸಲಿರುವ ಹೊಸ ಚಿತ್ರ ‘ರಿವಾಲ್ವರ್‌ ರಾಣಿ’ ಕೂಡ ಅಂತಹುದೇ ಕಥೆಯನ್ನೊಳಗೊಂಡಿದೆಯಂತೆ. ಆದರೆ ಈ ಬಗ್ಗೆ ಕಂಗನಾಗೆ ಬೇಸರವಿಲ್ಲವಂತೆ. ‘ಈ ಎರಡೂ ಚಿತ್ರಗಳು ಇತರ ಯಾವುದೇ ಚಿತ್ರಗಳಿಗಿಂತ ಭಿನ್ನವೆಂದು ನಾನು ಭಾವಿಸುತ್ತೇನೆ. ಯಾಕೆಂದರೆ, ಇತರ ಚಿತ್ರಗಳಲ್ಲಿ ಒಬ್ಬ ನಟಿಯಾಗಿ ಮಾತ್ರ ದುಡಿಸಿಕೊಳ್ಳುತ್ತಾರೆ. ಆದರೆ ನನ್ನ ಈ ಎರಡು ಚಿತ್ರಗಳಲ್ಲಿ ಒಬ್ಬ ನಟಿಗಿಂತ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳಲು ಅವಕಾಶವಿತ್ತು.ಹೀಗಾಗಿ ನಾನು ಇಂತಹ ಇನ್ನಷ್ಟು ಚಿತ್ರಗಳಲ್ಲಿ ನಟಿಸಲು ನಾನು ಬಯಸುತ್ತೇನೆ’ ಎಂದು ವಿವರಿಸಿದ್ದಾರೆ. ‘ಕ್ವೀನ್‌’ ವಿಕಾಸ್‌ ಬೆಹೆಲ್‌ ನಿರ್ದೇಶನದ ಚಿತ್ರ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry