‘ಮನುಷ್ಯನ ವಿಕಾಸಕ್ಕೆ ಶಿಕ್ಷಣ ಅಗತ್ಯ’

7
ತಾಲ್ಲೂಕು ಮಟ್ಟದ ಕಲಿಕೋತ್ಸವಕ್ಕೆ ಚಾಲನೆ

‘ಮನುಷ್ಯನ ವಿಕಾಸಕ್ಕೆ ಶಿಕ್ಷಣ ಅಗತ್ಯ’

Published:
Updated:
‘ಮನುಷ್ಯನ ವಿಕಾಸಕ್ಕೆ ಶಿಕ್ಷಣ ಅಗತ್ಯ’

ಹಾವೇರಿ: ‘ಮನುಷ್ಯನ ವಿಕಾಸ ಮತ್ತು ಅಭಿವೃದ್ಧಿಗೆ ಶಿಕ್ಷಣ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಬೌದ್ಧಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಜಗತ್ತಿನ ಬೇರೆ ವಿಷಯ ಗಳನ್ನು ತಿಳಿದುಕೊಳ್ಳಲು ಮುಂದಾಗ ಬೇಕು’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ ಹೇಳಿದರು.ನಗರದ ಸೇಂಟ್‌ ಆನ್ಸ್‌ ಶಾಲೆಯಲ್ಲಿ ಗುರುವಾರ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ, ಸಾರ್ವಜನಿಕರ ಶಿಕ್ಷಣ ಇಲಾಖೆ,

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಕಲಿಕೋತ್ಸವ ಹಾಗೂ ವಿಶೇಷ ಮಕ್ಕಳಿಗೆ ಸಾಧನಗಳ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.‘ಮಕ್ಕಳ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸಲು ಗುಣಾತ್ಮಕ ಶಿಕ್ಷಣದಡೆಗೆ ನಮ್ಮ ನಡುಗೆ ಕಾರ್ಯಕ್ರಮದಡಿ ಆಯೋಜಿಸುವ ಪಠ್ಯವಿಷಯ ಆಧಾರಿತ ಕಲಿಕೋತ್ಸವ ಕಾರ್ಯಕ್ರಮ ಪೂರಕವಾ ಗಿದ್ದು, ಮಕ್ಕಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಸಮಾಜ ದಲ್ಲಿ ಉನ್ನತ ಸ್ಥಾನ ಹೊಂದಬೇಕು’ ಎಂದು ಸಲಹೆ ಮಾಡಿದರು.ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸಾವಿತ್ರಮ್ಮ ರಾಮನಗೌಡ್ರ ಮಾತನಾಡಿ, ಶಿಕ್ಷಕರು ಮಕ್ಕಳಲ್ಲಿ ಯಾವುದೇ ಭಿನ್ನತೆ ಅನುಸರಿ ಸದೇ, ಎಲ್ಲರು ನಮ್ಮ ಮಕ್ಕಳೆಂದು ತಿಳಿದು ಅವರ ಶ್ರೇಯೋಭಿವೃದ್ಧಿಗೆ ಶ್ರಮಿ ಸಬೇಕು. ವಿಷಯಗಳ ಬೋಧನೆ ಜತೆಗೆ ಪಠ್ಯೇತರ ಚಟುವಟಿಕೆ ಆಯೋಜಿಸುವ ಮೂಲಕ ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಬೇಕು ಎಂದರು.ಇದೇ ಸಂದರ್ಭದಲ್ಲಿ ಅಂಗವಿಕಲರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾ ಲಯದ ವತಿಯಿಂದ ಟ್ರೈಸಿಕಲ್‌ ಹಾಗೂ ಇತರ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.ಸಮಾರಂಭದಲ್ಲಿ ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜವ್ವ ಆಡಿನ, ಸದಸ್ಯರಾದ ಯಲ್ಲವ್ವ ಚಪ್ಪರದ, ವಸಂತ ಕಳಸಣ್ಣ ನವರ, ತಾ.ಪಂ. ಅಧ್ಯಕ್ಷೆ ಲಕ್ಷ್ಮವ್ವ ಮೇಲ್ಮುರಿ, ಡಯಟ್‌ ಕಾಲೇಜಿನ ಪ್ರಾಚಾರ್ಯ ಎಂ.ಡಿ.ಬಳ್ಳಾರಿ, ಸಮನ್ವ ಯಾಧಿಕಾರಿ ಕೆ.ಎಫ್‌,ಭಜಂತ್ರಿ, ಸೇಂಟ್‌ ಆನ್ಸ್‌ ಶಾಲೆಯ ಮುಖ್ಯ ಶಿಕ್ಷಕಿ ಶರ್ಲಿನ್‌ ಥಾಮಸ್‌, ಶಿಕ್ಷಣ ಪ್ರೇಮಿ ನಿಜಲಿಂಗಪ್ಪ ಬಸೇಗಣ್ಣಿ, ಆರ್‌.ಎನ್‌.ಕರ್ಜಗಿ ಸೇರಿ ದಂತೆ ಅನೇಕರು ಪಾಲ್ಗೊಂಡಿದ್ದರು.ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ದೈಹಿಕ ಶಿಕ್ಷಣಾಧಿಕಾರಿ ಎನ್‌.ಐ.ಇಚ್ಚಂಗಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ದೇಸಳ್ಳಿ ನಿರೂಪಿಸಿದರು. ವಿ.ವಿ.ಕಮತರ ವಂದಿಸಿದರು.ನಂತರ ಕ್ಲಷ್ಟರ ಮಟ್ಟದಿಂದ ತಾಲ್ಲೂ ಕು ಮಟ್ಟದ ಕಲಿಕೋತ್ಸವ ಕಾರ್ಯ ಕ್ರಮಕ್ಕೆ ಆಯ್ಕೆಯಾದ 30 ವಿದ್ಯಾರ್ಥಿ ಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯ ಕ್ರಮಗಳು ಜರುಗಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry