‘ಮಹಾಭಾರತದ ಮೌಲ್ಯ ಮಾರ್ಗದರ್ಶಕ’

7

‘ಮಹಾಭಾರತದ ಮೌಲ್ಯ ಮಾರ್ಗದರ್ಶಕ’

Published:
Updated:

ಗುಲ್ಬರ್ಗ: ‘ಮಹಾಭಾರತದ ಮೌಲ್ಯ­ಗಳು ನಮ್ಮ ನಡವಳಿಕೆಗಳಿಗೆ ಮಾರ್ಗ­ದರ್ಶಕವಾಗಬಲ್ಲವು. ಆದ್ದರಿಂದ ಆ ಗ್ರಂಥವನ್ನು ಪೂಜಿಸುವ ಬದಲು ಅದನ್ನು ಜನಸಾಮಾನ್ಯರ ಬಳಿಗೂ ತಲುಪಿಸುವ ಕೆಲಸ ಆಗಬೇಕು” ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಎಸ್‌. ಎಸ್‌. ಮೂರ್ತಿ ಅಭಿ ಪ್ರಾಯಪಟ್ಟರು. ವಿಶ್ವ­ವಿ­ದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ), ಹಾಗೂ ಶ್ರೀ ಸ್ವಾಮಿ­ನಾರಾಯಣ ಗುರುಕುಲ ಸಂಸ್ಕೃತ ಮಹಾಪಾಠಶಾಲೆಯ ಪ್ರಾಯೋಜಕ­ತ್ವದಲ್ಲಿ ನಗರದ ನೂತನ ವಿದ್ಯಾಲಯದಲ್ಲಿ ಮಹಾಭಾರತದ ಕುರಿತು ಹಮ್ಮಿಕೊಂಡ ಎರಡು ದಿವಸಗಳ ವಿಚಾರಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.‘ಇಂದಿನ ಸಮಾಜದಲ್ಲೂ ಅರ್ಜುನ, ಏಕಲವ್ಯರಂತವರು ಬರಬೇಕಾದರೆ ಉತ್ತಮ ದ್ರೋಣಾಚಾರ್ಯರ ಅಗತ್ಯ­ವಿದೆ. ಆ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಸಮರ್ಥ ಅಧ್ಯಾಪಕರನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ವಿದ್ಯಾರ್ಥಿ­ಗಳನ್ನು ರೂಪಿಸಿ­ಕೊಳ್ಳ­ಬಹುದು’ ಎಂದು ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಎನ್‌. ಧರ್ಮಸಿಂಗ್‌, ‘ಹೈದರಾಬಾದ್‌ ಕನಾರ್ಟಕದಲ್ಲಿ 100ವರ್ಷ­ಗಳಿಂ­ದಲೂ ಶಿಕ್ಷಣ ಸೇವೆ ನಡೆಸುತ್ತಿರುವ ನೂತನ ವಿದ್ಯಾಲಯ ಸಂಸ್ಥೆಯ ಕಾರ್ಯ ಶ್ಲಾಘನೀಯ. ಶಿಕ್ಷಣ ಸಂಸ್ಥೆಯ ಬೇಡಿಕೆಗಳನ್ನು ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ತರುತ್ತೇನೆ’ ಎಂದು ಭರವಸೆ ನೀಡಿದರು.‘ಇಂದಿನ ಸಂಘರ್ಷಮಯ ರಾಜಕೀಯ ಸ್ಥಿತಿಯಲ್ಲಿ ಮಹಾಭಾರತ ಪ್ರಸ್ತುತ. ನಮ್ಮ ಬದುಕಿನಲ್ಲಿ ಬರುವ ಸಂಕಷ್ಟಗಳನ್ನು ಹೇಗೆ ಮೀರಿ ಜೀವಿಸಬೇಕೆನ್ನುವ ಕುರಿತು ಅದು ಮಾರ್ಗದರ್ಶನ ನೀಡುತ್ತದೆ. ಯುವ ಜನತೆಗೆ ಇದರ ಕುರಿತು ಅರಿವು ಮೂಡಿಸಬೇಕಾದ ಅಗತ್ಯ ಇದೆ’ ಎಂದರು.ಬೆಂಗಳೂರು ಸ್ವಾಮಿನಾರಾಯಣ ಗುರುಕುಲದ ಕೃಷ್ಣಚರಣದಾಸ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.  ಸಂಸ್ಥೆಯ ಅಧ್ಯಕ್ಷ ಡಾ. ಮುರಲಿೀಧರ ಎಸ್‌. ರಾವ ಅಧ್ಯಕ್ಷತೆ ವಹಿಸಿದ್ದರು. ಶ್ರುತಿ ಪ್ರಕಾಶ ಸ್ವಾಮೀಜಿ, ಆರ್‌. ಆರ್‌. ಜಾಗೀರ್‌ದಾರ್‌, ಕೃಷ್ಣಾಜಿ ಕುಲಕರ್ಣಿ, ದೇವರಾಯ ದೇಶಮುಖ, ಶಾಮರಾವ ಖಣಗೆ, ನಾರಾಯಣರಾವ ಕಾಳೆ, ಡಾ.ಗುರುಮಧ್ವಾಚಾರ್ಯ ನವಲಿ ಮತ್ತಿತರು ಇದ್ದರು. ಸ್ವಾಮಿರಾವ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಎಸ್‌. ಕುಲಕರ್ಣಿ ಸ್ವಾಗತಿಸಿದರು.ವಿನೋದ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.ಕಟ್ಟಡ ಉದ್ಘಾಟನೆ: ಕಾರ್ಯಕ್ರಮದ ಮೊದಲು ಇನ್ಫೊಸಿಸ್‌ ಫೌಂಡೇಷನ್‌ ಆರ್ಥಿಕ ಸಹಕಾರದಲ್ಲಿ ನಿರ್ಮಿಸಿರುವ ಸಂಸ್ಥೆಯ ಬಿ.ಎ. ಹಾಗೂ ಎಂ.ಎ. ಸಂಗೀತ ವಿಭಾಗಗಳ ನೂತನ ಕಟ್ಟಡ ಸಮುಚ್ಚಯವನ್ನು ಸಂಸದ ಎನ್‌. ಧಮರ್ಸಿಂಗ್‌ ಉದ್ಘಾಟಿಸಿದರು. ಮನವಿ: ಶತಮಾನ ಕಂಡ ನೂತನ ವಿದ್ಯಾಲಯ ಸಂಸ್ಥೆಯ ಪದವಿ ಮಹಾವಿದ್ಯಾಲಯಲ್ಲಿ ಕೌಶಲಾಭಿವೃದ್ಧಿ ಕೇಂದ್ರ ಯೋಜನೆ ಆರಂಭಿಸಲು ಧನ ಸಹಾಯ ಒದಗಿಸಬೇಕು ಹಾಗೂ ಅನುದಾನ ರಹಿತ ವಿಭಾಗದಲ್ಲಿ ಸೇವೆಸಲ್ಲಿ ಸುತ್ತಿರುವ ಉದ್ಯೋಗಿಗಳ ಹುದ್ದೆಯನ್ನು ಅನುದಾನದಡಿ ತರಬೇಕೆಂದು ಒತ್ತಾಯಿಸಿ ಸಂಸ್ಥೆಯ ಅಧ್ಯಕ್ಷ ಡಾ. ಮುರಲೀಧರ ಎಸ್‌. ರಾವ ಇದೇ ಸಂದಭರ್ದಲ್ಲಿ ಸಂಸದ ಎನ್‌. ಧರ್ಮಸಿಂಗ್‌ ಮುಖಾಂತರ ಉನ್ನತ ಶಿಕ್ಷಣ ಸಚಿವ ಆರ್‌.ವಿ. ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry