ಗುರುವಾರ , ಜೂನ್ 24, 2021
28 °C

‘ಮಹಿಳಾ ಶೋಷಣೆ ತಡೆಗೆ ಜಾಗೃತಿ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ: ‘ಜನಸಾಮಾನ್ಯರು ಎಲ್ಲ ಕಾನೂನು­ಗಳನ್ನು ಅರಿಯಲು ಸಾಧ್ಯವಾ­ಗ­­ದಿದ್ದರೂ ದಿನನಿತ್ಯದ ವ್ಯವಹಾರಕ್ಕೆ ಬೇಕಾದ ಕಾನೂ­ನು­ಗಳನ್ನು  ತಿಳಿದು­ಕೊ­ಳ್ಳ­ಬೇಕು’ ಎಂದು ಸ್ಥಳೀಯ ನ್ಯಾಯಾಲ­ಯದ ನ್ಯಾಯಾ­­ಧೀಶರಾದ ಎಚ್.ವಿ.­ಅನಿತಾ ಹೇಳಿದರು.ಅಂತರರಾಷ್ಟ್ರೀಯ ಮಹಿಳಾ ದಿನಾ­ಚ­ರಣೆ ಅಂಗವಾಗಿ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘದ ಆಶ್ರಯದಲ್ಲಿ ಶುಕ್ರವಾರ ಹಮ್ಮಿ­ಕೊಂಡಿದ್ದ ‘ಕಾನೂನು ಅರಿವು ನೆರವು’ ಕಾರ್ಯ­ಕ್ರಮವನ್ನು ಉದ್ಘಾಟಿಸಿ ಮಾತ­ನಾ­ಡಿದ ಅವರು ‘ದೌರ್ಜನ್ಯ ಹಾಗೂ ಶೋಷಣೆ­ಯಿಂದ ಮುಕ್ತರಾ­ಗಲು ಮಹಿ­ಳೆ­ಯರು ಜಾಗೃತರಾಗ­ಬೇಕು’ ಎಂದರು.ವಕೀಲರ ಸಂಘದ ಅಧ್ಯಕ್ಷ ಹರೀಂದ್ರ ಮಾತನಾಡಿ, ‘ರಾಜ್ಯದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚು­ತ್ತಿವೆ.  ನಾಪತ್ತೆ ಪ್ರಕರಣಗಳ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ’ ಎಂದು ಆರೋಪಿಸಿದರು. ಸಂಘದ ಉಪಾಧ್ಯಕ್ಷ ವೆಂಕಟಸ್ವಾಮಿ, ಎಚ್.ವಿ.ರಾಮಚಂದ್ರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಈರಸ್ವಾಮಿ, ಸಂಪನ್ಮೂಲ ವ್ಯಕ್ತಿಗಳಾದ ಶೋಭಾ, ಅನಿತಾ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.