ಮಂಗಳವಾರ, ಜೂನ್ 15, 2021
27 °C

‘ಮಹಿಳೆಯರು ಉದ್ಯಮಶೀಲರಾಗಬೇಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಮಹಿಳೆಯರು ಉದ್ಯಮ­ಶೀಲರಾಗಿ ಬೆಳೆದರೆ ಸಮಾಜದಲ್ಲಿ ಸಮಾ­ನತೆ ಸಾಧಿಸಲು ಸಾಧ್ಯವೆಂದು ಬಜ್ ಇಂಡಿಯಾ ಟ್ರಸ್ಟ್‌ನ ಚಂದ್ರ­ಶೇಖರ್ ಹೇಳಿದರು.  ಕಸಬಾ ಹೋಬಳಿ ಕೂನೂರು ಗ್ರಾಮದಲ್ಲಿ ಬೆಂಗ­ಳೂರಿನ ಆಕ್ಸ­ಫರ್ಡ್ ಕಲಾ ಕಾಲೇಜಿನ ಸಮಾಜ ಸೇವಾ­ಕಾರ್ಯ ವಿಭಾಗದ ವತಿ­ಯಿಂದ ಹಮ್ಮಿಕೊಂಡಿ­ರುವ ಗ್ರಾಮೀಣ ಶಿಬಿರದಲ್ಲಿ ಮಹಿಳೆ­ಯರಿಗೆ ಆರ್ಥಿಕ ಅಭಿವೃದ್ಧಿಯ ಬಗ್ಗೆ ತರಬೇತಿ ನೀಡಿ ಮಾತನಾಡಿದರು.  ಮೊದಲು ನಿಮ್ಮ ಶಕ್ತಿಯನ್ನು ತಿಳಿದು ನಂತರ ನಿಮಗೆ ಸೂಕ್ತವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಉದ್ಯಮಶೀಲ­ರಾಗಿ. ಯಾವುದೇ ಅಂಜಿಕೆ ಹಾಗೂ ಟೀಕೆಗಳಿಗೆ ಕಿವಿ ಕೊಡಬೇಡಿ ಎಂದರು.ಬೆಂಗಳೂರು ಆಕ್ಸ್‌ಫರ್ಡ್ ಕಲಾ ಕಾಲೇಜಿನ ಎಂ.ಎಸ್.ಡಬ್ಲೂ ವಿಭಾ­ಗದ ಮುಖ್ಯಸ್ಥ ಮತ್ತು ಶಿಬಿರ ಸಂಯೋಜಕ ಶಶಿಧರ್ ಹಾಗೂ ಸಹ ಶಿಬಿರ ಸಂಯೋಜಕ ಅಮೃತ ಮುಖರ್ಜಿ ಮತ್ತು ಎಂ.­ಎಸ್.­ಡಬ್ಲೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.