ಮಂಗಳವಾರ, ಜೂನ್ 15, 2021
27 °C

‘ಮಹಿಳೆ ಆರೋಗ್ಯವಾಗಿದ್ದಲ್ಲಿ ಸದೃಢ ಸಮಾಜ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರು: ‘ಮಹಿಳೆ ಅಬಲೆಯಲ್ಲ, ಸಬಲೆ ಎಂಬುದನ್ನು ಗಮನದಲ್ಲಿರಿಸಿ ಕೊಂಡು ಸ್ವಸಹಾಯ ಸಂಘಗಳ ಮೂಲಕ ಸ್ವಯಂ ಉದ್ಯೋಗವನ್ನು ಕಂಡುಕೊಂಡು, ಕುಟುಂಬದ ಆರ್ಥಿಕ ಸುಧಾರಣೆ ಕಡೆಗೆ ಗಮನ ಹರಿಸುವುದು ಸೂಕ್ತ’ ಎಂದು ಸಿಂಡಿಕೇಟ್ ಮಾಜಿ ಸದಸ್ಯೆ ಸಂಗೀತಾ ಕಟ್ಟಿಮನಿ ಹೇಳಿದರು.ಇಲ್ಲಿನ ವೀರಭದ್ರೇಶ್ವರ ದೇವಸ್ಥಾನ ದಲ್ಲಿ ಈಚೆಗೆ ನಡೆದ ನವಜ್ಯೋತಿ ಸ್ವ–-ಸಹಾಯ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಏರ್ಪಡಿಸಿದ್ದ ‘ಸ್ವಸ್ಥ ಮಹಿಳೆ ಸಶಕ್ತ ಭಾರತ’ ವಿಷಯದ  ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಹಿಳೆ ಆರೋಗ್ಯವಾಗಿದ್ದಲ್ಲಿ ಸದೃಢ ಸಮಾಜ ನಿರ್ಮಾಣವಾಗುತ್ತದೆ, ಅಂತಹ ಸಮಾಜವನ್ನು ನೀಡುವ ಗುರುತರ ಜವಾಬ್ದಾರಿ ಅವರ ಮೇಲಿದೆ, ಮಾನವ ಶಕ್ತಿ ಸಂಪೂರ್ಣ ಬಳಕೆಯಾದಲ್ಲಿ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕಟ್ಟಿಮನಿ ವಿಷಾದ ವ್ಯಕ್ತ ಪಡಿಸಿದರು.ಡಾ. ಜಾಗೃತಿ ದೇಶಮಾನೆ ಮಾತ ನಾಡಿ, ದೇಶದ ಇತಿಹಾಸದಲ್ಲಿ ರೈತ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿಲ್ಲ, ಅವಳಿಗೆ ಮಾತ್ರ ಕಷ್ಟಗಳನ್ನು ಸಹಿಸಿಕೊಳ್ಳುವ ಶಕ್ತಿ ಇದ್ದು, ಪುರುಷರಿಗೂ ಆ ಶಕ್ತಿ ಬರಬೇಕಾಗಿದೆ ಎಂದರು.ನಿಶಾರ್ಡ್‌ ಅಧ್ಯಕ್ಷೆ ರುಕ್ಮಿಣಿ ಸಾವು ಕಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಣ ಪ್ರೇಮಿ ಜಾಹಿದ್ ಆಹ್ಮದ್‌ ಜಾಗೀರದಾರ, ನಗರಸಭಾ ಸದಸ್ಯೆ ಫಾತಿಮಾಭಿ ಶೇಖ, ಮಾಜಿ ಸದಸ್ಯೆ ನೂರಜಾನ್‌ ನಂದ್ಯಾಲ, ಅಮೀರ್‌ ಅಹ್ಮದ್ ನಾರಂಗಿ, ಡಾ.ಮನೋಜ ಸಾವುಕಾರ  ಉಪಸ್ಥಿತರಿದ್ದರು.ಸ್ವಸಹಾಯ ಸಂಘಗಳ ನೂರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.