‘ಮಾಗಡಿಗೆ ಹೇಮಾವತಿ ನೀರು ಶತಃಸಿದ್ಧ’

7

‘ಮಾಗಡಿಗೆ ಹೇಮಾವತಿ ನೀರು ಶತಃಸಿದ್ಧ’

Published:
Updated:

ಮಾಗಡಿ: ರಾಜ್ಯದಲ್ಲಿ ಕುಡಿಯುವ ನೀರು ಸರಬರಾಜಿಗೆ ರೂ.10 ಸಾವಿರ ಕೋಟಿ ಮೀಸಲು ಇಡಲಾಗಿದ್ದು ಮಾಗಡಿಗೆ ಹೇಮಾವತಿ ನೀರನ್ನು ಹರಿಸುವುದು ಶತಃಸಿದ್ಧ ಎಂದು ಗೃಹಸಚಿವ ಕೆ.ಜೆ.ಜಾರ್ಜ್ ವಿಶ್ವಾಸ ವ್ಯಕ್ತಪಡಿಸಿದರು.ಅವರು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ನೂತನ ಸಂಸದ ಡಿ.ಕೆ.ಸುರೇಶ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.ರಾಮನಗರ ಜಿಲ್ಲೆಯಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿರುವ ರೈತರಿಗೆ ಶೀಘ್ರವೇ ಭೂಮಿ ಮಂಜೂರು ಮಾಡಿಕೊಡುವ ಭರವಸೆ ನೀಡಿದರು.ಕೃಷಿ ಸಚಿವ ಕೃಷ್ಣಭೈರೇಗೌಡ ಜನರ ಸಮ ಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಮಾಗಡಿ ಕ್ಷೇತ್ರಕ್ಕೆ ಹೆಚ್ಚಿನ ನೆರವು ನೀಡುವ ಭರವಸೆ ನೀಡಿದರು.ಕನಕಪುರದ ಶಾಸಕ ಡಿ.ಕೆ.ಶಿವಕುಮಾರ್ ಮಾತನಾಡಿ, ಸಹೋದರ ಡಿ.ಕೆ.ಸುರೇಶ್‌ ಅವರನ್ನು ಆಯ್ಕೆ ಮಾಡಿರುವುದಕ್ಕೆ ಕ್ಷೇತ್ರದ ಜನತೆಗೆ ಚಿರ ಋಣಿಯಾಗಿದ್ದೇನೆ ಎಂದರು.ಸಂಸದ ಡಿ.ಕೆ.ಸುರೇಶ್ ನಿಮ್ಮ ಋಣ ತೀರಿಸಲು ನಿಮ್ಮ ನಂಬಿಕೆಯಂತೆ ಕೆಲಸ ಮಾಡುತ್ತಾರೆ. ತಾಲ್ಲೂಕಿನ ಜನತೆಯ ಧ್ವನಿಯಾಗಿ  ಕೆಲಸ ಮಾಡಲಿದ್ದಾರೆ ಎಂದರು.ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಕೇಂದ್ರ ಮತ್ತು ರಾಜ್ಯದ ನಡುವಿನ ಸಂಪರ್ಕ ಸೇತುವೆಯಾಗಿ ನೂತನ ಸಂಸದರು ಕೆಲಸ ಮಾಡಲಿದ್ದಾರೆ  ಎಂದರು.ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಸಂಸದ ಡಿ.ಕೆ.ಸುರೇಶ್ ಮಾಜಿ ಸಚಿವ ಎಚ್.ಎಂ.ರೇವಣ್ಣ ಮುಂದಾಳತ್ವದಲ್ಲಿ ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರನ್ನು ಹರಿಸುತ್ತೇವೆ ಎಂದು ಭರವಸೆ ನೀಡಿದರು.ಕೆ.ಪಿ.ಸಿ.ಸಿ ಸದಸ್ಯ ಎ.ಮಂಜುನಾಥ, ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಡಾ.ಎಚ್. ಎಂ.ಕೃಷ್ಣಮೂರ್ತಿ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಜಮೀರ್ ಪಾಷಾ ಮಾತನಾಡಿದರು.ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಪ್ಪ, ಮಾಜಿ ಶಾಸಕ ಎಸ್.ರವಿ, ಬೆಂಗಳೂರು ಡೈರಿ ನಿರ್ದೇಶಕ ಪಿ.ನಾಗರಾಜು, ಕಮಲಮ್ಮ, ಪುರಸಭಾ ಮಾಜಿ ಅಧ್ಯಕ್ಷ ಪಿ.ವಿ.ಸೀತಾರಾಂ, ರಂಗ ಹನು ಮಯ್ಯ, ಕಲ್ಪನಾ ಶಿವಣ್ಣ, ಟಿ.ಭೋಗೇಶ್, ನಯಾಜ್, ಪುರಸಭಾ ಸದಸ್ಯರಾದ ಎಂ.ಎನ್. ಮಂಜು, ಕೆ.ವಿ.ಬಾಲು, ಮಹೇಶ್, ಜಯಲಕ್ಷ್ಮಮ್ಮ ರೇವಣ್ಣ, ನರಸಿಂಹಮೂರ್ತಿ, ನಿರ್ಮಲಸೀತಾರಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ಕಾಂಗ್ರೆಸ್ ಮುಖಂಡರಾದ ಬಿ.ವಿ.ಜಯರಾಂ, ಜಿ.ಪಂ.ಮಾಜಿ ಅಧ್ಯಕ್ಷ ನರಸಿಂಹಮೂರ್ತಿ,  ಗೊಲ್ಲರಹಟ್ಟಿ ಜಯರಾಂ, ಕೆ.ಬಿ.ಬಾಲರಾಜು, ಎಸ್.ಸುಹೇಲ್, ಕುದೂರು ಪುರುಷೋತ್ತಮ, ತಾ.ಪಂ.ಮಾಜಿ ಸದಸ್ಯ ಸಿ.ಜಯರಾಂ, ಮಂಜೇಶ್ ಕುಮಾರ್, ದೊಡ್ಡಯ್ಯ ಇತರರು ವೇದಿಕೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry