ಸೋಮವಾರ, ಜೂನ್ 21, 2021
30 °C

‘ಮಾಧ್ಯಮ ಪರಿಣಾಮಕಾರಿ ಶಿಕ್ಷಣ ನೀಡಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯಡಕ: ‘ಪ್ರಜಾಪ್ರಭುತ್ವ ರಾಷ್ಟ್ರ ವಾದ ಭಾರತದಲ್ಲಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದಂತೆ ಮಾಧ್ಯಮ ರಂಗವು ಪ್ರಮುಖ ಅಂಗವಾ ಗಿದ್ದು, ಜನರಿಗೆ ಅವಶ್ಯವಿರುವ ಮಾಹಿತಿ, ಪರಿಣಾಮಕಾರಿಯಾದ ಶಿಕ್ಷಣ ಹಾಗೂ ಮನೋರಂಜನೆ ನೀಡು ವುದು ಮಾಧ್ಯಮದ ಬಹು ಮುಖ್ಯ ಜವಾಬ್ದಾರಿ’ ಎಂದು ಮಂಗಳೂರು ಆಕಾಶವಾಣಿ ಕೇಂದ್ರದ ನಿರ್ದೇಶಕ ವಸಂತ್ ಕುಮಾರ್ ಪೆರ್ಲ ಹೇಳಿದರು.ಅವರು  ಶನಿವಾರ ಮಣಿಪಾಲ ಮಾಧವ ಪೈ ಮೆಮೋರಿಯಲ್ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ಹಮ್ಮಿಕೊಂಡ ವಾರಾಂತ್ಯ ಪತ್ರಿಕೋದ್ಯಮ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಅವರು ಮಾತನಾಡಿದರು. ‘ಇಂದು ಮಾಧ್ಯಮ ರಂಗವು ವಿಶಾಲ ವಾಗಿ ಬೆಳೆದಿದೆ.ಪತ್ರಿಕೋದ್ಯಮ ಎಂಬುದು ಇಂದು ಉದ್ಯೋಗವನ್ನು ಗಳಿಸಿ ಕೊಡುವ ವಿಷಯವಾಗಿದೆ. ಪತ್ರಿ ಕೋದ್ಯಮ ವಿಷಯವನ್ನು ಅಭ್ಯಾಸ ಮಾಡುವ ಆಸಕ್ತ ವಿಧ್ಯಾರ್ಥಿಗಳು ಮುಖ್ಯವಾಗಿ ಪತ್ರಿಕೋದ್ಯಮದ ಇತಿಹಾಸ, ನಡೆದು ಬಂದ ದಾರಿ, ಅದರ ಆಶಯವನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ ಎಂದರು.ವಿಶಿಷ್ಟ ತರಬೇತಿಯನ್ನು 9 ತಿಂಗಳ ಡಿಪ್ಲೊಮಾ ಕೋರ್ಸನ್ನಾಗಿ ಪರಿವರ್ತಿಸಿ ದಲ್ಲಿ ಕಾಲೇಜಿನ ವಿಧ್ಯಾರ್ಥಿಗಳೊಂದಿಗೆ, ಸ್ಥಳೀಯ ಪರಿಸರದ ಇತರ ಆಸಕ್ತ ವಿದ್ಯಾರ್ಥಿಗಳಿಗೂ ಪತ್ರಿಕೋದ್ಯಮ ವಿಷ ಯವನ್ನು ಅಭ್ಯಾಸ ಮಾಡಲು  ಒಂದು ಉತ್ತಮ ಅವಕಾಶವನ್ನು ನೀಡಿದಂತಾ ಗುತ್ತದೆ. ಆಕಾಶವಾಣಿಯ ವ್ಯಾಪ್ತಿ ಬಹಳ ವಿಶಾಲ. ಮಾಹಿತಿ, ಶಿಕ್ಷಣ. ಮನೋರಂಜನೆ ಈ ಮೂರನ್ನು ಆಕಾಶ ವಾಣಿಯು ಜನರಿಗೆ ನೀಡು ತ್ತಿದ್ದು, ಭಾರತದಲ್ಲಿ ರೇಡಿಯೊ ಪ್ರಸಾರವನ್ನು ಉತ್ತೇಜಿಸಲು ಎರಡನೇ ಹಂತದಲ್ಲಿ ಪ್ರಾರಂಭಗೊಂಡ ಕಮ್ಯೂನಿಟಿ ರೇಡಿಯೊ ಕೇಂದ್ರಗಳು ಶಿಕ್ಷಣಕ್ಕೆ ಸೀಮಿತ ವಾದರೆ, ಖಾಸಗಿ ರೇಡಿಯೊ ಕೇಂದ್ರ ಗಳು ಮನೋರಂಜನೆಗೆ ಮಾತ್ರ ಸೀಮಿತ ವಾಗಿದೆ’ ಎಂದರು.ಕಾಲೇಜಿನ ಪ್ರಾಂಶುಪಾಲ ಪ್ರೊ. ದಯಾನಂದ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ದೊಂಬಯ್ಯ ಇಡ್ಕಿದು, ಉಪನ್ಯಾಸಕ ಸಚೇಂದ್ರ ಪಣಿಯೂರು ಉಪಸ್ಥತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.