ಗುರುವಾರ , ಫೆಬ್ರವರಿ 25, 2021
25 °C

‘ಮಾನವೀಯ ಮೌಲ್ಯಗಳಿಂದ ಬದುಕು ಸಾರ್ಥಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮಾನವೀಯ ಮೌಲ್ಯಗಳಿಂದ ಬದುಕು ಸಾರ್ಥಕ’

ವಿಜಾಪುರ: ‘ಅಣ್ಣ ಬಸಣ್ಣ ಅವರ ಸತ್ಯ, ದಾಸೋಹ, ನಂಬಿಕೆ, ಹಂಚಿಕೊಂಡು ಬದುಕುವ ನೀತಿ ಎಂದೆಂದೂ ಪ್ರಸ್ತುತ. ಮಾನವೀಯ ಮೌಲ್ಯಗಳ ಅಳವಡಿಕೆ ಯಿಂದ ಜೀವನವನ್ನು ಅರ್ಥಪೂರ್ಣ ಗೊಳಿಸಬೇಕು’ ಎಂದು ಭಾಲ್ಕಿ ಹಿರೇ ಮಠದ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.ನಗರದ ಕಂದಗಲ್ ಹಣಮಂತ ರಾಯ ರಂಗಮಂದಿರದಲ್ಲಿ ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಹಾಗೂ ಫೆಡಿನಾ ಸಂಸ್ಥೆಯ ಸಹಯೋ ಗದಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಉತ್ಸವದ ಮೂರನೆಯ ದಿನ ‘ಬಸವ ಧರ್ಮ  ಮತ್ತು ಮೌಲ್ಯಗಳು’ ಕುರಿತ ಚಿಂತನ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.ಬಸವಣ್ಣನವರು ನೊಂದವರ ಜೀವನದಲ್ಲಿ ಉತ್ಸಾಹ ಮತ್ತು ಭರವಸೆ ತುಂಬಿದರು. ಚಿಕ್ಕ ಚಿಕ್ಕ ವರ್ಗಗಳನ್ನು ಪ್ರೀತಿಸಿ ಅವರನ್ನು ಗೌರವದಿಂದ ಕಾಣುವಂತೆ ಸಂದೇಶ ನೀಡಿದರು. ಆ ದಾರಿಯಲ್ಲಿ ತಾವೇ ನಡೆದರು ಎಂದು ಸ್ಮರಿಸಿದರು.ಹರಿಹರ ಸಮೀಪದ ಎರೆಹೊಸಳ್ಳಿ ವೇಮನಾನಂದ ಗುರುಪೀಠದ ವೇಮ ನಾನಂದ ಸ್ವಾಮೀಜಿ, ನಾವು ಜೀವನದ ಸತ್ಯಗಳನ್ನು ಮರೆತು ಬದುಕುತ್ತಿದ್ದೇವೆ. ಬದುಕು ನಿಸರ್ಗದ ಜೊತೆಗೆ ಹೊಂದಿಕೆಯಾಗಬೇಕು. ಕುಟುಂಬದ ಸದಸ್ಯರೆಲ್ಲರೂ ನಂಬಿಕೆಯಿಂದ ಬದುಕಬೇಕು. ದುಡಿದ ಶ್ರಮದ ಹಣ  ದಾಸೋಹ ಮತ್ತು ಬಡವರ ಕಲ್ಯಾಣಕ್ಕೆ ವಿನಿಯೋಗಿಸಿದಾಗ ಮಾತ್ರ ಮಾನವೀಯ ಜೀವನದ ಮೌಲ್ಯಗಳು ಜೀವಂತ ಉಳಿಯಲು ಸಾಧ್ಯ ಎಂದರು.ಸಮಾರಂಭ ಉದ್ಘಾಟಿಸಿದ ನಾಗಠಾಣ  ಶಾಸಕ ರಾಜು ಆಲಗೂರ, ಬಸವಣ್ಣನವರ ಸಿದ್ಧಾಂತಗಳು ಭಾಷಣಗಳಿಗೆ ಮಾತ್ರ ಸೀಮಿತವಾಗದೇ ಆಚರಣೆಗೆ ತರುವಂತಾಗಬೇಕು. ಅಂದಾಗ ಇಂತಹ ಕಾರ್ಯಕ್ರಮಗಳ ಶ್ರಮ ಸಾರ್ಥಕ. ಸಮಾಜದ ಬದಲಾವಣೆಗೆ ಬಸವಣ್ಣನವರ ಚಿಂತನೆಗಳು ದಾರಿದೀಪ ಎಂದರು.ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ,  ಮಹಿಳಾ ವಿಶ್ವವಿದ್ಯಾಲಯದ ಡಾ.ಎಂ.ಬಿ. ದಿಲ್‌ಷಾದ್‌, ಡಾ.ಎಸ್.ಎಂ. ಶಿವಪ್ರಕಾಶ ಮಾತನಾಡಿದರು. ಚಿತ್ರದುರ್ಗ ಚಲವಾದಿ ಗುರುಪೀಠದ ಬಸವನಾಗಿದೇವ, ಬುರಣಾಪುರದ ಯೋಗೇಶ್ವರಿ, ಕೆಂಚಪ್ಪ ಬಿರಾದಾರ, ಅಶೋಕ ಚಲವಾದಿ, ಕಾಶೀಂ ಪಟೇಲ್‌ ಪಾಟೀಲ, ಕೆ.ಸುನಂದಾ, ಹಾಸಿಂಪೀರ ವಾಲಿಕಾರ, ಪ್ರಭುಗೌಡ ಪಾಟೀಲ, ದಾದಾಪೀರ ಚಿತ್ರದುರ್ಗ ವೇದಿಕೆಯಲ್ಲಿದ್ದಾರೆ.ಮಹಾದೇವ ರೆಬಿನಾಳ, ಸುಭಾಸ ಕನ್ನೂರ, ಮುರುಗೇಶ ಸಂಗಮ, ಸಿದ್ರಾಮಪ್ಪಾ ಉಪ್ಪಿನ, ನರಸಿಂಹಯ್ಯ, ಎಂ.ಜಿ. ಯಾದವಾಡ, ವಿ.ಸಿ. ನಾಗಠಾಣ, ಜಯವಂತ ಗುಂಡಿ, ಶರಣಗೌಡ ಪಾಟೀಲ, ವಿರೇಶ ವಾಲಿ, ಅಬ್ದುಲ್‌ಸುಕುರು ಇನಾಮದಾರ, ರಫೀಕ್‌ ಖಾನೆ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.