‘ಮಾಮು ಟೀ ಅಂಗಡಿ’ ಚಿತ್ರೀಕರಣ

7

‘ಮಾಮು ಟೀ ಅಂಗಡಿ’ ಚಿತ್ರೀಕರಣ

Published:
Updated:

ಮಾಮು ಟೀ ಅಂಗಡಿ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಬೆಂಗಳೂರು ಸುತ್ತ ಮುತ್ತ ನಡೆಯಿತು. ಈ ಚಿತ್ರದಲ್ಲಿ ವರುಣ್ ಸಿಂಗಮ್, ಅಭಿಷೇಕ್, ರಿತೇಶ್, ಮಹೇಶ್ ಜೊತೆ ನಾಯಕಿಯರಾಗಿ ಸಂಗೀತಾ ಭಟ್, ರಾಶಿ ಸಿಂಗ್, ಅರ್ಚನಾ ಸಿಂಗ್ ಅಭಿನಯಿಸಿದ್ದಾರೆ.

ಶ್ರೀನಗರ ಕಿಟ್ಟಿ, ಅಜಯ್ ರಾವ್, ಪ್ರೇಮ್ ಹಾಗೂ ಪ್ರಜ್ವಲ್ ದೇವರಾಜ್ ಗೌರವ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ನಾಲ್ವರು ಸ್ನೇಹಿತರ ಪ್ರೀತಿಯಲ್ಲಿನ ಆಸಕ್ತಿ, ಭಿನ್ನಾಭಿಪ್ರಾಯ, ಒಂಟಿತನ ಹೀಗೆ ಜೀವನದ ಆಯಾಮಗಳ ಮೇಲೆ ‘ಮಾಮು ಟೀ ಅಂಗಡಿ’ ಕಥೆಯನ್ನು ಹೆಣೆಯಲಾಗಿದೆ. ಹೊನ್ನವಳ್ಳಿ ಕೃಷ್ಣ, ಬ್ಯಾಂಕ್ ಜನಾರ್ದನ್, ರೇಖಾ ದಾಸ್ ಇತರರು ತಾರಾಗಣದಲ್ಲಿ ಇದ್ದಾರೆ. ರಾಜೇಶ್ ರಾಮನಾಥ್ ಸಂಗೀತ, ನಂದಕುಮಾರ ಛಾಯಾಗ್ರಹಣ ಚಿತ್ರಕ್ಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry