ಬುಧವಾರ, ಜನವರಿ 29, 2020
28 °C

‘ಮಾಯವಾಗುತ್ತಿರುವ ಕನ್ನಡ ಅಂಕಿಗಳು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ನಿರಂತರ ಅಭ್ಯಾಸ ಹಾಗೂ ಹಾಸ್ಯ ಪ್ರವೃತ್ತಿ ರೂಢಿಸಿಕೊಳ್ಳಬೇಕು ಎಂದು ರೈತ ಜನಜಾಗೃತಿ ಸಂಘದ ಅಧ್ಯಕ್ಷ ಮಂಗಳವಾರಪೇಟೆಯ ಟಿ. ರಮೇಶ್ ಕಿವಿಮಾತು ಹೇಳಿದರು.ತಾಲ್ಲೂಕಿನ ಬ್ರಹ್ಮಣಿಪುರ ಸರ್ಕಾರಿ ಪ್ರೌಢಶಾಲೆಯಲ್ಲಿ 58ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಚನ್ನಪ ಟ್ಟಣ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಿದ್ದ `ಕನ್ನಡ ಭಾಷಾ ರಸ ಪ್ರಶ್ನೆ ಕಾರ್ಯಕ್ರಮ ಹಾಗೂ ಚುಟುಕು ಕಾವ್ಯವಾಚನ ಕಾರ್ಯಕ್ರಮ'ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚುಟುಕು ಕಾವ್ಯದಲ್ಲಿ ಬರುವ ಹಾಸ್ಯ ನುಡಿ ಗಟ್ಟುಗಳು ಮಕ್ಕಳ ಮನೋಲ್ಲಾಸಕ್ಕೆ ಸಹಕಾರಿಯಾಗಲಿವೆ ಎಂದು ಅವರು ಹೇಳಿದರು.ಚುಟುಕು ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಡಿ.ಪುಟ್ಟಸ್ವಾಮಿ ಗೌಡ ಮಾತನಾಡಿ, ಈತನಕ ಸರ್ಕಾರಿ ದಾಖಲೆಗಳಲ್ಲಿ ಕಂಡು ಬರುತ್ತಿದ್ದ ಕನ್ನಡ ಅಂಕಿಗಳು ಇತ್ತೀಚೆಗೆ ಮಾಯವಾಗು ತ್ತಿರುವುದು ದೊಡ್ಡ ದುರಂತ ಎಂದು ಆತಂಕ ವ್ಯಕ್ತಪಡಿಸಿದರು.‘ಕನ್ನಡ ಭಾಷೆ ಅಳವಡಿಕೆಯ ಜೊತೆಜೊತೆಗೆ ಕನ್ನಡ ಅಂಕಿಗಳ ಬಳಕೆಗೂ ಒತ್ತುಕೊಡಬೇಕು. ಈ ನಿಟ್ಟಿನಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಮುಂದಿನ ದಿನಗಳಲ್ಲಿ `ಕನ್ನಡ ಅಂಕಿಗಳಿಗಾಗಿ ಹೋರಾಟ' ಎಂಬ ವಿನೂತನ ಕಾರ್ಯಕ್ರಮ ರೂಪಿಸಲಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕ ಕುಮಾರ್ ಮಾತನಾಡಿ, ರಸಪ್ರಶ್ನೆಗಳಂತಹ ಕಾರ್ಯಕ್ರಮಗಳು ಮಕ್ಕಳ ಪರೀಕ್ಷಾ ಪೂರ್ವ ಅಭ್ಯಾಸಕ್ಕೆ ಸಹಕಾರಿಯಾಗಲಿವೆ. ಇಂತಹ ಕಾರ್ಯ ಕ್ರಮಗಳು ಹೆಚ್ಚುಹೆಚ್ಚಾಗಿ ನಡೆಯ ಬೇಕು ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಿಕ್ಕಪ್ಪಾಜಿ, ಚುಟುಕು ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಮಾದುಗೌಡ, ಕಾರ್ಯದರ್ಶಿಗಳಾದ ಹೇಮಾವತಿ, ಶಶಿಕುಮಾರ್, ಶಿಕ್ಷಕ ರಾದ ಪ್ರಮೀಳಮ್ಮ, ಶುಭಾ, ರುಕ್ಸಾನ, ಟಿ.ರವಿಂದ್ರ ಸೇರಿದಂತೆ ಇತರರು ಭಾಗವಹಿಸಿದ್ದರು.ಕನ್ನಡ ಶಿಕಕ್ಷ ಚಿಕ್ಕೇಗೌಡ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಸ್ಪರ್ಧೆ ಯಲ್ಲಿ ಮನೋಜ್ ಹಾಗೂ ಉಮಾ (ಪ್ರಥಮ), ಭಾನುಮತಿ ಹಾಗೂ ಬಿ.ಟಿ.ಸಂಧ್ಯಾ (ದ್ವಿತೀಯ), ಶಶಿಕಲಾ, ಟಿ.ವಿ.ಸುಚಿತ್ರಾ (ತೃತೀಯ) ಬಹು ಮಾನ ಪಡೆದುಕೊಂಡರು.ಚುಟುಕು ಸಾಹಿತಿಗಳಾದ ಎಂ.ಟಿ.ನಾಗರಾಜು, ಡಿ.ಪುಟ್ಟ ಸ್ವಾಮಿಗೌಡ ಸ್ವರಚಿತ ಚುಟುಕು ಕಾವ್ಯವಾಚನ ಮಾಡಿದರು.

ಪ್ರತಿಕ್ರಿಯಿಸಿ (+)