ಸೋಮವಾರ, ಜೂನ್ 21, 2021
28 °C

‘ಮಾರುಕಟ್ಟೆಯಲ್ಲಿ ಕಿಡ್ನಿ, ಯಕೃತ್ತು ಖರೀದಿ ದೂರವಿಲ್ಲ’

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮುಂದೊಂದು ದಿನ ಕಿಡ್ನಿ, ಯಕೃತ್ತು ಸೇರಿದಂತೆ ಮನುಷ್ಯನ ವಿವಿಧ ಅಂಗಾಂಗಗಳು ಮಾರುಕಟ್ಟೆಯಲ್ಲಿ ದೊರೆತರೆ ಆಶ್ಚರ್ಯವಿಲ್ಲ ಎಂದು ತುಮಕೂರು ವಿವಿ ಕುಲಪತಿ ಪ್ರೊ. ಎ.ಎಚ್‌. ರಾಜಾಸಾಬ್‌ ಹೇಳಿದರು.ಗುಲ್ಬರ್ಗ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಹಯೋಗದಲ್ಲಿ ಹಮ್ಮಿ ಕೊಂಡ ಎರಡು ದಿನಗಳ ‘ಜೈವಿಕ ವಿಜ್ಞಾನದಲ್ಲಿ ಬೆಳವಣಿಗೆ’ ವಿಶೇಷ ಉಪನ್ಯಾಸ ಕಾರ್ಯಕ್ರಮ ಸೋಮವಾರ ಉದ್ಘಾಟಿಸಿ ಮಾತನಾಡಿದರು.21ನೇ ಶತಮಾನವು ಜೈವಿಕ ವಿಜ್ಞಾನದ ಯುಗ. ಮನುಷ್ಯನ ಬದುಕಿನ ಗುಣಮಟ್ಟ ಅಭಿವೃದ್ಧಿಗಾಗಿ ಜೈವಿಕ ವಿಜ್ಞಾನ ಕ್ಷೇತ್ರದಲ್ಲಿ ವೈದ್ಯಕೀಯ, ಕೃಷಿ ಹಾಗೂ ತಂತ್ರಜ್ಞಾನ ಸಂಬಂಧಿತ ಸಂಶೋಧನೆಗಳು ನಡೆಯುತ್ತಿವೆ. ಈ ಪೈಕಿ ಕ್ಲೋನಿಂಗ್‌ ವಿಜ್ಞಾನ ಬಳಸಿ ಬದಲಿ ಅಂಗಾಂಗಗಳು ಸೃಷ್ಟಿಸುವ ಸಂಶೋಧ ನೆಗಳು ಪ್ರಮುಖವಾಗಿವೆ. ಇವು ಯಶಸ್ವಿಯಾದರೆ ಮನುಷ್ಯನ ಅಂಗಾಂಗ ಮಾರುಕಟ್ಟೆಯಲ್ಲಿ ಸಿಗಲು ಸಾಧ್ಯ. ಆಗ ಮಾನವ ಕಳ್ಳಸಾಗಣೆ ದುಷ್ಕೃತ್ಯಕ್ಕೆ ಕಡಿವಾಣ ಬೀಳಲಿದೆ ಎಂದರು.ಭೂ ಗರ್ಭದಿಂದ ತೆಗೆಯುವ ತೈಲೋತ್ಪನ್ನ ಗಳು ಈ ಶತಮಾನದಲ್ಲಿ ಮುಗಿಯಲಿವೆ. ಹೀಗಾಗಿ ಹಸಿರು ತಂತ್ರಜ್ಞಾನದ ಬೆಳವಣಿಗೆ ನಮ್ಮ ಮುಂದಿರುವ ಸವಾಲು. ಇದಕ್ಕಾಗಿ ಜೈವಿಕ ಇಂಧನ ಹಾಗೂ ಜಲಜನಕದ ವಿಭಜನೆ ಮೂಲಕ ಶಕ್ತಿ ಉತ್ಪಾದಿಸುವ ಪ್ರಯತ್ನಗಳು ಮುಂದುವರಿ ದಿವೆ. ಇನ್ನೊಂದೆಡೆ ಆಹಾರ ಮತ್ತು ಶುದ್ಧ ನೀರಿನ ಅವಶ್ಯಕತೆ ಪೂರೈಸುವ ಸವಾಲು ಮುಂದಿವೆ.ಗುಲ್ಬರ್ಗ, ತುಮಕೂರು, ಕೋಲಾರ, ರಾಯಚೂರು ಮತ್ತಿತರ ಜಿಲ್ಲೆಗಳು ಈಗಾಗಲೇ ಈ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಮಳೆ ನೀರಿನ ಸಂಗ್ರಹ, ಪರಿಸರ ಸಂರಕ್ಷಣೆ, ಪರಿಸರ ಪೂರಕ ವಾಗಿ ಆಹಾರ ಉತ್ಪಾದನೆ ಹೆಚ್ಚಳವನ್ನು ನಾವು ಸಾಧಿಸಬೇಕಾಗಿದೆ ಎಂದರು.ಮ್ಯಾನ್‌ಹೋಲ್‌ಗೆ ಮನುಷ್ಯನೇ ಇಳಿದು ಸ್ವಚ್ಛಗೊಳಿಸುವ ಪದ್ಧತಿ ಜಾರಿ ಯಲ್ಲಿರುವುದು ವಿಷಾದನೀಯ ಎಂದ ಅವರು, ಪ್ರತಿ ಮನುಷ್ಯನ ಬದುಕಿನ ಘನತೆ ಕಾಪಾಡುವ ಕಾರ್ಯ ಆಗ ಬೇಕು. ಈ ನಿಟ್ಟಿನಲ್ಲಿ ಮ್ಯಾನ್‌ಹೋಲ್‌ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ, ತ್ಯಾಜ್ಯ ಪುನರ್‌ ಬಳಕೆ, ಸ್ವಚ್ಛತೆ ಮತ್ತಿತರ ಕಾರ್ಯಗಳಿಗೆ ತಂತ್ರಜ್ಞಾನದ ಬಳಕೆ ಹೆಚ್ಚಬೇಕು ಎಂದು ಆಶಿಸಿದರು.ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸದಸ್ಯ ಡಾ.ಪಿ.ಎಸ್‌. ಶಂಕರ್‌್ ಮಾತನಾಡಿ, ವಿಜ್ಞಾನ ಕ್ಷೇತ್ರದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಗೆ ಅಕಾಡೆಮಿ ಹಲವು ಸ್ಪರ್ಧೆ, ಪ್ರಶಸ್ತಿ, ವಿದ್ಯಾರ್ಥಿ ವೇತನ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಿದೆ ಎಂದು ತಿಳಿಸಿದರು.ಗುಲ್ಬರ್ಗ ವಿವಿ ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪ್ರಾಧ್ಯಾಪಕರಾದ ಸಿ.ಆರ್‌. ನಾಗೇಂದ್ರನ್‌, ಜಿ.ಆರ್.ನಾಯ್ಕ್‌, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಜಿ.ಎಂ. ವಿದ್ಯಾಸಾಗರ್‌ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.