ಶನಿವಾರ, ಜನವರಿ 18, 2020
20 °C

‘ಮೂಢನಂಬಿಕೆಯಿಂದ ಮನುಷ್ಯ ಬಲಹೀನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಮೂಢನಂಬಿಕೆ ಆಚರಣೆ­ಯಿಂದ ಮನುಷ್ಯ ಬಲಹೀನ ಆಗುತ್ತಿದ್ದಾನೆ. ಕಂಪ್ಯೂಟರ್ ಯುಗ­ದಲ್ಲಿಯೂ ಜನತೆ ಅಂಧವಿಶ್ವಾಸಕ್ಕೆ ಬಲಿ ಆಗುತ್ತಿರುವುದು ವಿಷಾದನೀಯ ಎಂದು ಹುಮನಾಬಾದ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಅಜೇಂದ್ರ ಸ್ವಾಮಿ ಹೇಳಿದರು.ಇಲ್ಲಿನ ಬಸವೇಶ್ವರ ದೇವಸ್ಥಾನದಲ್ಲಿ ಈಚೆಗೆ ಹಮ್ಮಿಕೊಂಡ ಮಾಸಿಕ ಶರಣ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವಣ್ಣನವರು ಅಂಧಾನುಕರಣೆ ವಿರೋಧಿಸಿ ದೇವರನ್ನು ಇಷ್ಟಲಿಂಗದ ರೂಪದಲ್ಲಿ ಜನಸಾಮಾನ್ಯರ ಕೈಗೆ ತಂದು ಕೊಟ್ಟರು ಎಂದು ಹೇಳಿದರು.ಬೀದರ ಬಸವಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಮಾತನಾಡಿ, ಒಳ್ಳೆಯದನ್ನು ಮಾಡುತ್ತಾ ಹೋಗಬೇಕು ಆದರೆ ಪ್ರತಿಫಲ ಬಯಸಬಾರದು. ಆಸೆಯೇ ದುಃಖಕ್ಕೆ ಮೂಲವಾಗಿದೆ ಎಂದರು. ಬಸವೇಶ್ವರ ದೇವಸ್ಥಾನ ಸಮಿತಿ ಉಪಾಧ್ಯಕ್ಷ ವೀರಣ್ಣ ಹಲಶೆಟ್ಟೆ ಮಾತನಾಡಿದರು.ಅಧ್ಯಕ್ಷ ಮಲ್ಲಪ್ಪ ಲಾತೂರೆ, ವಿಶ್ವನಾಥಪ್ಪ ಬೇಲೂರೆ, ಕಾಶಪ್ಪ ಸಕ್ಕರಬಾವಿ, ಅಶೋಕ ನಾಗರಾಳೆ, ಬಸವರಾಜ ಬಾಲಿಕಿಲೆ, ಶಿವಶರಣಪ್ಪ ಮಾಮಾ, ಸೋಮಶೇಖರ ವಸ್ತ್ರದ, ಮಲ್ಲಿಕಾರ್ಜುನ ವಾಂಜರಖೇಡೆ ಇದ್ದರು. ಸುಭಾಷ ಹೊಳಕುಂದೆ ಸ್ವಾಗತಿ­ಸಿದರು. ಮಾಯಾ ಮುರಾಳೆ ನಿರೂಪಿಸಿ­ದರು. ಜ್ಯೋತಿ ತೂಗಾವೆ ವಂದಿಸಿದರು. ರಾಜಕುಮಾರ ಹೂಗಾರ ಮದಕಟ್ಟಿ ಮತ್ತು ನವಲಿಂಗಕುಮಾರ ಪಾಟೀಲ ವಚನ ಗಾಯನ ನಡೆಸಿಕೊಟ್ಟರು.

ಪ್ರತಿಕ್ರಿಯಿಸಿ (+)