ಗುರುವಾರ , ಜೂನ್ 24, 2021
25 °C

‘ಮೂಲಸೌಲಭ್ಯ: ಉ.ಕ. ಜಿಲ್ಲೆಗೆ ಆದ್ಯತೆ ಸಿಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲ್ಲಾಪುರ (ಉ.ಕ. ಜಿಲ್ಲೆ):  ‘ರಾಜ್ಯಕ್ಕೇ ಶಕ್ತಿ ತುಂಬಿದ ಮತ್ತು ಅತ್ಯು­ತ್ತಮ ನಿಸರ್ಗ ಸಂಪತ್ತು ಹೊಂದಿರುವ ಉತ್ತರ ಕನ್ನಡ ಜಿಲ್ಲೆಗೆ ಮೂಲಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ ಆದ್ಯತೆ ನೀಡಬೇಕು’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು.ಶಿರಸಿಯ ‘ಮಿಯಾರ್ಡ್ಸ್’ ಮೇದಿನಿ ರಂಗ ಅಧ್ಯಯನ ಕೇಂದ್ರ, ಬೀಗಾರದ ನವೋದಯ ಯುವಕ ಸಂಘ ಮತ್ತು ವಜ್ರಳ್ಳಿಯ ಸರ್ವೋದಯ ಶಿಕ್ಷಣ ಸಂಸ್ಥೆ ತಾಲ್ಲೂಕಿನ ತಾರಗಾರಿನ ಅಜ್ಜಿಗುಂಡಿ ಜಲಪಾತ ಬಳಿ ಶನಿವಾರ

ಹಮ್ಮಿಕೊಂಡಿದ್ದ ನಾಟಕ ಪ್ರದರ್ಶನ ಮತ್ತು ‘ಕೆ.ಆರ್.ಪ್ರಕಾಶ ರಂಗ ಪ್ರಶಸ್ತಿ­–­2014’ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಉತ್ತರ ಕರ್ನಾಟಕದ ನಿಸರ್ಗದ ಮಧ್ಯೆ ಚಲನಚಿತ್ರ ನಿರ್ಮಾಣಕ್ಕೆ ಆದ್ಯತೆ ನೀಡಬೇಕಾಗಿದೆ. ನಿಸರ್ಗವನ್ನು ರಂಗ ಭೂಮಿಯನ್ನಾಗಿಸಿ ನಾಟಕ ಪ್ರಸ್ತುತಪಡಿಸುತ್ತಿರುವ ಸಂಘಟಕರ ಸೇವೆ ನಿಜಕ್ಕೂ ಪ್ರಶಂಸನೀಯ’ ಎಂದು ಕುಂ. ವೀರಭದ್ರಪ್ಪ ಹೇಳಿದರು.ಪ್ರಶಸ್ತಿ ವಿತರಣೆ: ನಾಟಕಕಾರ ಡಾ. ಡಿ.ಎಸ್. ಚೌಗಲೆ ಅವರಿಗೆ ‘ಕೆ.ಆರ್.­ಪ್ರಕಾಶ ರಂಗ ಪ್ರಶಸ್ತಿ–2014’ ಪ್ರದಾನ ಮಾಡಿ ಮಾತನಾಡಿದ ‘ಪ್ರಜಾವಾಣಿ’ ಸಂಪಾದಕ ಕೆ.ಎನ್.ಶಾಂತ­ಕುಮಾರ್‌, ‘ಪ್ರಾಕೃತಿಕ ರಂಗ ಮಂಚದ ಮೇಲೆ ನಿಸರ್ಗದ ಮಕ್ಕಳಾಗಿ ಪರಿಸರ ನಾಟಕವನ್ನು ವಿನೂ­ತನ ಶೈಲಿಯಲ್ಲಿ ಪ್ರಸ್ತುತಪಡಿಸು­ತ್ತಿರುವುದು ಶ್ಲಾಘನೀಯ’ ಎಂದರು.‘ಉದಯೋನ್ಮುಖ ಲೇಖಕರನ್ನು ಪ್ರೋತ್ಸಾಹಿ­ಸುವ ಕಾರ್ಯವನ್ನು ‘ಪ್ರಜಾ­ವಾಣಿ’ ಪತ್ರಿಕೆ ಮಾಡುತ್ತಿದೆಯ­ಲ್ಲದೇ , ರಂಗಭೂಮಿ ಕಲೆಯನ್ನು ಎತ್ತ­ರಕ್ಕೆ ಕೊಂಡೊಯ್ಯುವ ಕಾರ್ಯ ಸಹ ಮಾಡುತ್ತಿದೆ’ ಎಂದು ಪ್ರಶಸ್ತಿ ಸ್ವೀಕರಿ­ಸಿದ ಡಾ.ಡಿ.ಎಸ್. ಚೌಗಲೆ ಹೇಳಿದರು.‘ಮಿಯಾರ್ಡ್ಸ್’ ಮೇದಿನಿ ರಂಗ ಅಧ್ಯಯನ ಕೇಂದ್ರದ ಅಧ್ಯಕ್ಷ ನಾರಾಯಣ ಹೆಗಡೆ ಗಡಿಕೈ ಅಧ್ಯಕ್ಷತೆ ವಹಿಸಿದ್ದರು. ಸರ್ವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಟಿ. ಭಟ್ಟ, ಕೆ.ಆರ್.ಪ್ರಕಾಶ ರಂಗ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ರವೀಂದ್ರ ಭಟ್ಟ,  ಧಾರಾವಾಹಿ ನಿರ್ದೇಶಕ ಡಿ.ಎಮ್.ಹೆಗಡೆ ಮುಂತಾದವರು ವೇದಿಕೆಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.