ಶನಿವಾರ, ಜೂನ್ 19, 2021
22 °C

‘ಮೆಗಾ ಲೋಕ ಅದಾಲತ್ ಸದುಪಯೋಗ ಪಡೆದುಕೊಳ್ಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಧೋಳ: ವಿವಿಧ ವ್ಯಾಜ್ಯಗಳನ್ನು ಸೌಹಾರ್ದದಿಂದ ಬಗೆ ಹರಿಸಿಕೊಳ್ಳಲು  ಮೆಗಾ ಲೋಕ ಅದಾಲತ್ಅನ್ನು  ಏ. 12 ರವರೆಗೂ  ವಿಸ್ತರಿಸಲಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾ­ಧೀಶ ಮಧ್ವೇಶ ಡಬೀರ ಹೇಳಿದರು.ಸುದ್ದಿಗಾರರ ಜತೆಗೆ ಮಾತನಾಡಿ ವಿದ್ಯುತ್ ಬಿಲ್, ಬಿಎಸ್ಎನ್ಎಲ್ ಬಿಲ್ ಕುರಿತಂತೆ ಹಾಗೂ ಗಂಡ ಹೆಂಡತಿ ಜಗಳ ಸೇರಿದಂತೆ ಯಾವುದೇ ವ್ಯಾಜ್ಯಗಳನ್ನು ಸೌಹಾರ್ದ­ದಿಂದ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಪರ ಹಾಗೂ ವಿರೋಧ ಪಕ್ಷಗಾರರು, ವಕೀಲರು ಮತ್ತು ಇಲಾಖೆಯ ಅಧಿಕಾರಿ ಹಾಗೂ ಗ್ರಾಹಕರು ಬಂದು ಮೆಗಾ ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಳಿಸಿಕೊಳ್ಳಬಹುದು ಎಂದು ಹೇಳಿದರು.ಇದೇ 8 ರಿಂದ ಮೂರು ದಿನಗಳ ವರೆಗೆ ಕಾನೂನು ಸಾಕ್ಷರತಾ ರಥ ಯಾತ್ರೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಾಗಲಕೋಟೆ, ತಾಲ್ಲೂಕು ಕಾನೂನು ಸೇವಾ ಸಮಿತಿ ಮುಧೋಳ,ವಕೀಲರ ಸಂಘ ಮುಧೋಳ ತಾಲ್ಲೂಕು ಆಡಳಿತ ಮುಧೋಳ, ಪೊಲೀಸ್ ಇಲಾಖೆ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಆಶ್ರಯದಲ್ಲಿ ಕಾನೂನು ಸಾಕ್ಷರತಾ ರಥ ಮತ್ತು ಸಂಚಾರಿ ಜನತಾ ನ್ಯಾಯಾಲದ ಕಾನೂನು ಅರಿವು ನೆರವು ಕಾರ್ಯ­ಕ್ರಮಗಳು ಇದೇ 8 ರಿಂದ 10ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. 8 ರಂದು ಮುಂಜಾನೆ 8ಕ್ಕೆ ಮುಧೋಳ ನ್ಯಾಯಾಲಯ ಸಂಕೀರ್ಣದಲ್ಲಿ ರಥಯಾತ್ರೆಗೆ ಹಿರಿಯ ದಿವಾಣಿ ನ್ಯಾಯಾಧಿೀಶ ಮುಧ್ವೇಶ ಡಬಿೇರ, ನ್ಯಾಯಾಧೀಶ ರಾಜೇಶ  ಕಮತೆ ಚಾಲನೆ ನೀಡಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.