ಸೋಮವಾರ, ಮಾರ್ಚ್ 1, 2021
29 °C

‘ಮೊಹೆಂಜೊ ದಾರೊ’ ಹಿಂದಿಕ್ಕಿದ ‘ರುಸ್ತುಮ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮೊಹೆಂಜೊ ದಾರೊ’ ಹಿಂದಿಕ್ಕಿದ ‘ರುಸ್ತುಮ್‌’

ಮುಂಬೈ: ಅಕ್ಷಯ್ ಕುಮಾರ್ ಅಭಿನಯದ ‘ರುಸ್ತುಮ್’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲ ದಿನದ ಗಳಿಕೆಯಲ್ಲಿ ರುಸ್ತುಮ್‌ ಹೃತಿಕ್‌ ರೋಷನ್‌ ಅಭಿನಯದ ‘ಮೊಹೆಂಜೊ ದಾರೊ’ವನ್ನು ಹಿಂದಿಕ್ಕಿದೆ. ರುಸ್ತುಮ್ ಮತ್ತು ಮೊಹೆಂಜೊ ದಾರೊ ಶುಕ್ರವಾರ (ಆಗಸ್ಟ್‌ 12) ತೆರೆಕಂಡಿವೆ. 1,200ಕ್ಕೂ ಕಡಿಮೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ರುಸ್ತುಮ್ ಮೊದಲ ದಿನ  ₹14 ಕೋಟಿ ಗಳಿಸಿದೆ.ರುಸ್ತುಮ್‌ಗಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊಹೆಂಜೊ ದಾರೊ ಮೊದಲ ದಿನದ ಗಳಿಕೆ ಎರಡಂಕಿಯನ್ನು ದಾಟಿಲ್ಲ. ಅದರ ಗಳಿಕೆ ₹ 8.75 ಕೋಟಿ.ಈ ವರ್ಷ ಬಿಡುಗಡೆಯಾದ ಬಾಲಿವುಡ್‌ ಚಿತ್ರಗಳಲ್ಲಿ ಮೊದಲ ದಿನವೇ ಅತಿ ಹೆಚ್ಚು ಗಳಿಸಿದ ನಾಲ್ಕನೇ ಚಿತ್ರ ಎಂಬ ಹಿರಿಮೆಗೆ ‘ರುಸ್ತುಮ್’ ಪಾತ್ರವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.