ಬುಧವಾರ, ಜೂನ್ 16, 2021
27 °C

‘ಮೋದಿಗೆ ರಾಜಕೀಯ ಸಮಾಧಿ ಎನಿಸಲಿದೆ ವಾರಾಣಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ (ಪಿಟಿಐ): ತನ್ನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಉತ್ತರ ಪ್ರದೇಶದ ವಾರಾಣಸಿ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸುವ ಬಿಜೆಪಿ ನಿರ್ಧಾರವನ್ನು ಅಣಕಿಸಿರುವ ಆರ್‌ಜೆಡಿ  ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್‌, ‘ಅದು ಮೋದಿಗೆ ಪಾಲಿಗೆ ರಾಜಕೀಯ ಸಮಾಧಿ ಸಾಬೀತಾಗುವ ಸಾಧ್ಯತೆಗಳಿವೆ’ ಎಂದು ಭಾನುವಾರ  ವ್ಯಂಗ್ಯವಾಡಿದ್ದಾರೆ.

‘ವಾರಾಣಸಿ ಬಗ್ಗೆ ಏನೆಂದುಕೊಂಡಿದ್ದೀರಿ. ಅದು ಸಂಪೂರ್ಣ  ಜಾತ್ಯತೀತ ಪ್ರದೇಶ. ನರೇಂದ್ರ ಮೋದಿ ಅವರು ಅಲ್ಲಿ ಸೋಲು ಕಾಣುತ್ತಾರೆ. ವಾರಾಣಸಿ ಕ್ಷೇತ್ರ ಅವರ ಪಾಲಿಗೆ ರಾಜಕೀಯ ಸಮಾಧಿ ಎನಿಸುವ ಸಾಧ್ಯತೆಗಳಿವೆ’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇದೇ ವೇಳೆ, ಮೋದಿ ಅವರು ತವರು ರಾಜ್ಯ ಬಿಟ್ಟು ಬೇರೆ ಕಡೆಯಿಂದ ಸ್ಪರ್ಧಿಸುತ್ತಿರುವದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.