‘ಮೋದಿ ಪ್ರಧಾನಿಯಾದರೆ ಭಾರತ ಸುಭದ್ರ’

7

‘ಮೋದಿ ಪ್ರಧಾನಿಯಾದರೆ ಭಾರತ ಸುಭದ್ರ’

Published:
Updated:

ನಾಗಮಂಗಲ : ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಮೋದಿ ಪ್ರಧಾನಿಯಾಗ ಬೇಕೆಂಬ ಹೆಬ್ಬಯಕೆ ಇದೆ. ನರೇಂದ್ರಮೋದಿ ಪ್ರಧಾನಿಯಾದರೆ ಭಾರತದೇಶ ಸುಭದ್ರ ಎಂದು ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಡಾ. ಪಾರ್ಥಸಾರಥಿ ಅಭಿಪ್ರಾಯ ಪಟ್ಟರು.ನರೇಂದ್ರಮೋದಿಯವರನ್ನು ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಟಿ.ಮರಿಯಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ ನಂತರ ಅವರು ಮಾತನಾಡಿದರು.ಗುಜರಾತ್‌ನಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯವನ್ನು ಕೇವಲ ಗುಜರಾತ್‌ಗೆ ಮೀಸಲಾಗಿಡದೆ ಇಡೀ ಭಾರತ ದೇಶಕ್ಕೆ ವಿಸ್ತಾರ ಪಡಿಸಲು ಮೋದಿಯವರು ಪ್ರಧಾನಿಯಾಗಬೇಕು. ಮೋದಿಯವರಂತಹ ದೇಶಭಕ್ತ ನಮ್ಮ ದೇಶದ ಪ್ರಧಾನಿಯಾದರೆ ಅದು ನಮ್ಮೆಲ್ಲರ ಸೌಭಾಗ್ಯ. ಅವರು ಭಾರತವನ್ನು ಮಾದರಿ ದೇಶವನ್ನಾಗಿ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ.ಅವರನ್ನು ಪ್ರಧಾನಿಯವರನ್ನಾಗಿ ಮಾಡುವಲ್ಲಿ ಎಲ್ಲರ ಪಾತ್ರ ಅಪಾರ ಎಂದು ನುಡಿದರು. ಮುಖಂಡರಾದ ಬಸವರಾಜು ಕಲ್ಲಿನಾಥಪುರ, ಸೀತಾರಾಮು, ಪ್ರದೀಪ, ಉಮೇಶ, ಚೇತನ್‌, ಕಿರಣ್‌, ದಾಸಪ್ಪ, ಲಕ್ಷ್ಮಣ ಇತರರು  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry