‘ಮೋದಿ ಪ್ರಧಾನಿ ಆಗಲೆಂದು ಹೇಳುತ್ತೇನೆಯೇ?’

7

‘ಮೋದಿ ಪ್ರಧಾನಿ ಆಗಲೆಂದು ಹೇಳುತ್ತೇನೆಯೇ?’

Published:
Updated:

ಕುಮಟಾ: ‘ಮೊನ್ನೆ ನಡೆದ ಸಂಸತ್‌ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದರೂ ಜೆಡಿಎಸ್‌ ಸೋತಿತು. ಆದರೆ ಮುಂದೆ ಈ ದೇಶಕ್ಕೆ ನರೇಂದ್ರ ಮೋದಿ ಪ್ರಧಾನಿ ಅಗಲೆಂದು ನಾನು ಎಂದಾದರೂ ಹೇಳುತ್ತೇನೆಯೇ?’ ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ವ್ಯಂಗ್ಯವಾಡಿದರು.ಕುಮಟಾದಲ್ಲಿ ಗುರುವಾರ ನಡೆದ ಜೆಡಿಎಸ್‌ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.  ಈ ದೇಶದ ಅಧಿಕಾರ, ಸಂಪತ್ತು ಕೇವಲ ವಾಜಪೇಯಿ, ಮೋದಿ, ಸೋನಿಯಾ ಗಾಂಧಿ, ಮನಮೋಹನ ಸಿಂಗ್‌ ಅವರಿಗೆ ಮಾತ್ರ ಸೇರಿದೆಯೇ?’ ಎಂದು ಪ್ರಶ್ನಿಸಿದರು.‘ಹಿಂದೆ ರಾಜ್ಯದಲ್ಲಿ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಸಖ್ಯ ಬೆಳೆಸಿ ಸರ್ಕಾರ ನಡೆಸಿದ ಕಾರಣದಿಂದ ಮುಂದೆ ಮುಸ್ಲಿಂ ಬಾಂಧವರು ಕ್ರಮೇಣ ಜೆಡಿಎಸ್‌ ಕೈ ಬಿಟ್ಟರು. ಪಕ್ಷಕ್ಕೆ ಒಂದು ಸಂಸತ್‌ ಸ್ಥಾನ ತಂದುಕೊಡುವ ಶಕ್ತಿ ಈ ಜಿಲ್ಲೆಗೆ ಖಂಡಿತಾ ಇದೆ.  ಕಾರ್ಯ ಕರ್ತರು ತಮ್ಮ ತಮ್ಮ ಹೃದಯ ತೊಳೆದುಕೊಂಡು ಕೆಲಸ ಮಾಡ ಬೇಕಾದ ಅಗತ್ಯವಿದೆ. ಯುವ ನಾಯಕ ಮಧು ಬಂಗಾರಪ್ಪ ಅವರಿಗೆ ಮುಂದೆ ರಾಜಕೀಯದಲ್ಲಿ ಉಜ್ವಲ ಭವಿಷ್ಯವಿದೆ’ ಎಂದರು.ಪಾದಯಾತ್ರೆಗೆ ಟೀಕೆ:‘ಹಿಂದೆ  ಅರಣ್ಯ ಭೂಮಿ ಸಕ್ರಮಗೊಳಿಸುವುದರ ವಿರುದ್ಧ ಜೆಡಿಎಸ್‌  ್ ಪ್ರತಿಭಟನೆ ನಡೆಸಿದಾಗ ಕಾಂಗ್ರೆಸ್‌ ಸರ್ಕಾರ ಅದರ ಬಗ್ಗೆ ಸಮಿತಿ ರಚನೆ ಮಾಡಿತ್ತು. ಆ ಸಮಿತಿ ಇಂದು ಕೆಲಸ ಮಾಡದ ಬಗ್ಗೆ ಜಿಲ್ಲೆ ಕಾಂಗ್ರೆಸ್‌ ಮುಖಂಡರೇ  ಮುರ್ಡೇಶ್ವರದಿಂದ ಕಾರವಾರ ವರೆಗೆ ಪಾದಯಾತ್ರೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯ ಹೊರಟಿರುವುದು ವಿಪರ್ಯಾ ಸದ ಸಂಗತಿ’ ಎಂದು ಸೊರಬ ಶಾಸಕ ಮಧು ಬಂಗಾರಪ್ಪ  ಟೀಕಿಸಿದರು.ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿದರು. ಮಾಜಿ ಶಾಸಕ ದಿನಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಕ್ಷದ ಇನಾಯತ್‌ ಉಲ್ಲಾ ಶಾಬಂದ್ರಿ, ರಾಜೇಶ್ವರಿ ಹೆಗಡೆ, ಪಿ.ಟಿ. ನಾಯ್ಕ, ಪಿ. ಎಸ್‌. ಭಟ್ಟ ಉಪ್ಪೋಣಿ, ಲಲಿತಾ ರೇವಣಕರ, ವಿ.ಡಿ.ಹೆಗಡೆ  ಉಪಸ್ಥಿತರಿದ್ದರು.ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಆರ್‌.ನಾಯ್ಕ ಸ್ವಾಗತಿಸಿದರು. ಜೈವಿಠ್ಠಲ ಕುಬಲ ನಿರೂಪಿಸಿದರು.

ಮುಸ್ಲಿಂ ಮುಖಂಡರೊಂದಿಗೆ ಸಭೆ: ಕುಮಟಾದ ವನ್ನಳ್ಳಿ ಗ್ರಾಮದಲ್ಲಿ ದೇವೆಗೌಡರು ಮುಸ್ಲಿಂ ಸಮುದಾಯದ  ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು.ಮೂರು ತಾಸು ತಡ: ಬೆಳಿಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಸಮಾ ವೇಶ ಮಧ್ಯಾಹ್ನ ಮೂರು ಗಂಟೆಗೆ ಆರಂಭವಾಯಿತು. ಕಾರ್ಯಕರ್ತರು ಕಾದು ಊಟಕ್ಕೆ ಹೋಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry