ಸೋಮವಾರ, ಜೂನ್ 21, 2021
29 °C

‘ಮೋದಿ ಪ್ರಧಾನಿ ಹುದ್ದೆಗೆ ಅರ್ಹ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗಮಂಗಲ: ನರೇಂದ್ರಮೋದಿ ದೇಶದ ಪ್ರಧಾನಿಯಾಗದ ಹೊರತು ಹದಗೆಟ್ಟಿರುವ ರಾಷ್ಟ್ರದ ಪರಿಸ್ಥಿತಿಯನ್ನು ಸರಿಪಡಿಸಲು ಯಾವುದೇ ಪಕ್ಷದಿಂದ ಸಾಧ್ಯವಿಲ್ಲ ಎಂದು ಚಿತ್ರನಟಿ ಶ್ರುತಿ ಅಭಿಪ್ರಾಯಪಟ್ಟರು.ಅವರು ಪಟ್ಟಣದ ಶಿಕ್ಷಕರ ಭವನದಲ್ಲಿ ಶುಕ್ರವಾರ ಬಿಜೆಪಿ ತಾಲ್ಲೂಕು ಘಟಕ ಆಯೋಜಿಸಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು.ಅಭಿವೃದ್ಧಿಯ ಚಿಂತನೆಗೆ ವಿದ್ಯಾಭ್ಯಾಸ ಪ್ರಮುಖ ಪಾತ್ರ ವಹಿಸುತ್ತದೆ. ಪರಿಸರದ ಸಂರಕ್ಷಣೆಯ ಬಗ್ಗೆ ಹೊರದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿರುವ ಡಾ.ಬಿ. ಶಿವಲಿಂಗಯ್ಯ ರಾಜಕೀಯದಲ್ಲೂ ಆಗಿರುವ ಮಾಲಿನ್ಯದ ನಿರ್ಮೂಲನೆಗೆ ಶ್ರಮಿಸುತ್ತಾರೆ’ ಎಂದು ಹೇಳಿದರು. ಜಿಲ್ಲೆಯ ಮತದಾರರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಧೋರಣೆಯಿಂದ ಬೇಸತ್ತಿದ್ದಾರೆ. ರಾಷ್ಟ್ರದ ಉದ್ದಗಲಕ್ಕೂ ಮೋದಿ ಅಲೆ ಸೃಷ್ಟಿಯಾಗಿದೆ ಎಂದರು.ಡಾ.ಬಿ. ಶಿವಲಿಂಗಯ್ಯ ಮಾತನಾಡಿ ಜಿಲ್ಲೆಗೆ ಅಗತ್ಯವಾಗಿ ಬೇಕಾಗಿರುವ ವಿದ್ಯುತ್, ಕುಡಿಯುವ ನೀರು ಹಾಗೂ ಕಾವೇರಿ ನೀರಿನ ಸಮಸ್ಯೆ ಸೇರಿದಂತೆ ರೈತರ ಸಮಸ್ಯೆ ಹೀಗೆ ಜಿಲ್ಲೆ ಸಮಗ್ರ ಸಮಸ್ಯೆಗಳ ಆಗರವಾಗಿದೆ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಭರವಸೆ ನೀಡಿದರು. ಎಲ್ಲಾ ಪಕ್ಷಗಳು ಮತಗಳ ಓಲೈಕೆಗಾಗಿ ಕೇವಲ ಅಕ್ಕಿ, ರಾಗಿ, ಬಟ್ಟೆ ವಿತರಿಸುವಲ್ಲಿ ಪರಿಣಿತರೇ ವಿನಾ ಬಿಜೆಪಿಯಂತೆ ದೇಶ ಕಟ್ಟುವ ಕೆಲಸ ಮಾಡುವುದಿಲ್ಲ ಎಂದರು.ಕಾರ್ಯಕ್ರಮಕ್ಕೂ ಮುನ್ನ ದೇವಲಾಪುರ ಹ್ಯಾಂಡ್‌ಪೋಸ್ಟ್‌ನಿಂದ ಬೈಕ್‌ ರ್‌್ಯಾಲಿ ನಡೆಯಿತು. ಶ್ರುತಿ ಮೈಸೂರು ರಸ್ತೆ, ಕೆಎಸ್‌ಟಿ ರಸ್ತೆ ಮೂಲಕ ಸೌಮ್ಯಕೇಶವಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಶ್ರೀರಂಗಪಟ್ಟಣ- ಬೀದರ್ ರಾಜ್ಯ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಶಿಕ್ಷಕರ ಭವನದಲ್ಲಿ ಸಭೆ ನಡೆಸಿದರು.ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಪಾರ್ಥಸಾರಥಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಬಿಜೆಪಿ ಮುಖಂಡರಾದ ಡಾ.ಐ. ವಿಷ್ಣುಮೂರ್ತಿ ಭಟ್, ಬಸವಯ್ಯ, ವಕೀಲ ಉಮೇಶ್ ಹಡೇನಹಳ್ಳಿ, ಆರ್ಎಸ್ಎಸ್ ಮುಂಖಡರಾದ ರಾಮು, ವಿನೋದ್, ಶ್ರೀನಿವಾಸ್, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸೋಮಶೇಖರ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.