ಶನಿವಾರ, ಜೂನ್ 19, 2021
23 °C

‘ಮೋದಿ ಸೋಲಿಸುವುದೇ ಪರಮ ಗುರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್‌, ವಾರಾಣಸಿಯಲ್ಲಿ ಮೋದಿ ಅವರನ್ನು ಸೋಲಿಸುವುದೇ  ತಮ್ಮ ಗುರಿ ಎಂದು ಹೇಳಿದರು.‘ವಾರಾಣಸಿಯಿಂದ ಸ್ಪರ್ಧಿಸುವು­ದಾಗಿ ಮೋದಿ ಘೋಷಿಸಿದ್ದಾರೆ. ನಾನು ಕೂಡ ವಾರಾಣಸಿಗೆ ಹೋಗುತ್ತೇನೆ. ಮೋದಿ ವಿರುದ್ಧ ಸ್ಪರ್ಧಿಸಬೇಕೇ ಎಂದು ನಾನು ಅಲ್ಲಿನ ಜನರನ್ನು ಕೇಳುತ್ತೇನೆ. ಅವರು ಹೌದು ಎಂದರೆ ನಾನು ಸ್ಪರ್ಧಿಸುವುದಕ್ಕೆ ಸಿದ್ಧ’ ಎಂದು ಕೇಜ್ರಿವಾಲ್‌ ಹೇಳಿದರು.‘ಇದೊಂದು ಸಾಂಕೇತಿಕ ಹಣಾಹಣಿ ಆಗಲಿದೆ ಎಂದು ಪತ್ರಿಕೆಗಳಲ್ಲಿ ಹಾಗೂ ಕೆಲವು ಅಂತರ್ಜಾಲ ತಾಣಗಳಲ್ಲಿ ನಾನು ಓದಿದ್ದೇನೆ. ನಾವು ಕೇವಲ ಚುನಾ­ವಣೆಯಲ್ಲಿ ಸ್ಪರ್ಧಿಸಲು ಅಲ್ಲಿಗೆ ಹೋಗುತ್ತಿಲ್ಲ. ಮೋದಿ ಅವರನ್ನು ಸೋಲಿಸಲು ಹೋಗುತ್ತೇವೆ’ ಎಂದು ಕೇಜ್ರಿವಾಲ್‌ ತಿಳಿಸಿದರು.ನವದೆಹಲಿಯಲ್ಲಿ ಮಂಗಳವಾರ ನಡೆದ ‘ಭಾರತೀಯ ಮುಸ್ಲಿಮರಿಗೆ ಮಾರ್ಗನಕ್ಷೆ’  ವಿಚಾರ ಸಂಕಿರಣ­ದಲ್ಲಿ ಮಾತನಾಡಿದ ಕೇಜ್ರಿವಾಲ್‌, ವಾರಾಣಸಿ­ಯಲ್ಲಿ ತಮ್ಮ ಜೊತೆ ಕೈಜೋಡಿಸು­ವಂತೆ ಸಂಕಿರಣದಲ್ಲಿ ಭಾಗವಹಿಸಿದ್ದವರಿಗೆ ಮನವಿ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.