ಸೋಮವಾರ, ಮಾರ್ಚ್ 8, 2021
31 °C
ಬಿಜೆಪಿ ಬೂತ್‌ ಮಟ್ಟದ ಸಮಾವೇಶದಲ್ಲಿ ರಾಜನಾಥ್‌ಸಿಂಗ್‌

‘ಯುಪಿಎ ಕಡು ಭ್ರಷ್ಟ ಸರ್ಕಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಯುಪಿಎ ಕಡು ಭ್ರಷ್ಟ ಸರ್ಕಾರ’

ದೊಡ್ಡಬಳ್ಳಾಪುರ: ‘ಹತ್ತು ವರ್ಷಗಳ ಯುಪಿಎ ಆಡಳಿತಾವಧಿಯಲ್ಲಿ  ₨ ೫ ಲಕ್ಷ ಕೋಟಿ ಮೊತ್ತದ ಬೃಹತ್‌ ಪ್ರಮಾ­ಣದ ಭ್ರಷ್ಟಾಚಾರ ನಡೆದಿದೆ. ಆದರೆ ರಾಹುಲ್ ಗಾಂಧಿ ಭ್ರಷ್ಟಾಚಾರ ನಿಗ್ರಹ ವ್ಯವಸ್ಥೆ ಜಾರಿ ಮಾಡುವ ಕುರಿತು ಮಾತ­ನಾಡುತ್ತಿರುವುದು  ಹಾಸ್ಯಾ­ಸ್ಪದ­ವಾಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥಸಿಂಗ್ ಲೇವಡಿ ಮಾಡಿ­ದರು.ಇಲ್ಲಿನ ಭಗತ್‌ಸಿಂಗ್ ಕ್ರೀಡಾಂಗಣ­ದಲ್ಲಿ ಬುಧವಾರ ಜರುಗಿದ ಚಿಕ್ಕಬಳ್ಳಾ­ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ  ಸಮಾ­ವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಸುಗ್ರೀವಾಜ್ಞೆ ಮೂಲಕ ಭ್ರಷ್ಟಾ­ಚಾರ ನಿರ್ಮೂಲನೆ ಕಾಯ್ದೆ ಜಾರಿ ಮಾಡು­ತ್ತೇವೆ ಎಂದು ಯುಪಿಎ ಸರ್ಕಾ­ರ­ದವರು ಹೇಳುತ್ತಿರುವುದು ಖಂಡ­ನೀಯ. ಈ ಸರ್ಕಾರಕ್ಕೆ ಕಾಳಜಿ ಇದ್ದಿದ್ದರೆ ತಮ್ಮ ಆಡಳಿತ ಅವಧಿಯಲ್ಲಿ ಅವರು ಈ ಬಗ್ಗೆ ಏಕೆ ಕ್ರಮ ಕೈಗೊಳ್ಳಲಿಲ್ಲ’ ಎಂದು ಪ್ರಶ್ನಿಸಿದ ಅವರು, ‘ಭ್ರಷ್ಟಾಚಾರ ತಡೆಗೆ ಸುಗ್ರೀವಾಜ್ಞೆ ಜಾರಿ  ದುರುದ್ದೇಶಪೂರಿತವಾಗಿದೆ’ ಎಂದರು.ಕಾಂಗ್ರೆಸ್ ದೇಶದಲ್ಲಿ ಜನರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ ಅವರು, ‘ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾ­ರದ ಆಡಳಿತದಲ್ಲಿ ಜಾತ್ಯಾತೀತ ಮನೋ­ಭಾವ ದೂರವಾಗಿ ದೇಶದ ವಿವಿಧೆಡೆ ಕೋಮು­ಗಲಭೆ, ಅಶಾಂತಿ ಹೆಚ್ಚಾಗಿವೆ’ ಎಂದು ದೂರಿದರು.ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ಎಸ್‌.­ಸದಾನಂದ­ಗೌಡ, ಮಾಜಿ ಸಚಿವರಾದ ಬಿ.ಎನ್‌.­ಬಚ್ಚೇ­ಗೌಡ, ಆರ್‌.ಅಶೋಕ್‌, ಶಾಸಕ ಸಿ.ಟಿ.­ರವಿ, ಎಸ್‌.ಆರ್‌.ವಿಶ್ವನಾಥ್‌, ಮಾಜಿ ಶಾಸಕ ಜೆ.ನರಸಿಂಹಸ್ವಾಮಿ, ನಾಗ­ರಾಜ್‌, ಜಿ.ಚಂದ್ರಣ್ಣ, ವಿಧಾನ ಪರಿಷತ್‌ ಸದಸ್ಯರಾದ ಡಿ.ಎಸ್‌.­ವೀರಯ್ಯ, ವಿಜಯ­ಶಂಕರ್‌, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಬಿಜೆಪಿ ಜಿಲ್ಲಾ ಅಧ್ಯಕ್ಷ ಬಿ.ಸಿ.ನಾರಾ­ಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯ­ದರ್ಶಿ ನಾಗೇಶ್‌, ಪುಷ್ಪಾ­ಶಿವಶಂಕರ್‌, ಬೆಂಗಳೂರು ಗ್ರಾ.ಜಿ.ಪಂ.ಉಪಾಧ್ಯಕ್ಷ ಎನ್‌.ಹನು­ಮಂತೇಗೌಡ, ಬೆಂ.ಹಾ.­ಒಕ್ಕೂಟದ ಅಧ್ಯಕ್ಷ ಮಂಜುನಾಥ್‌, ಜಿ.ಪಂ.ಮಾಜಿ ಅಧ್ಯಕ್ಷ ಟಿ.ವಿ.ಲಕ್ಷ್ಮೀ­ನಾರಾ­ಯಣ್‌, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಆರ್.­ಅಶ್ವತ­ನಾರಾ­ಯಣಗೌಡ, ನಗರ ಅಧ್ಯಕ್ಷ ಶಿವಶಂಕರ್‌ ಮತ್ತಿತರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.