‘ಯುವಕರನ್ನು ಸರಿದಾರಿಗೆ ತರಬೇಕಿದೆ’

7

‘ಯುವಕರನ್ನು ಸರಿದಾರಿಗೆ ತರಬೇಕಿದೆ’

Published:
Updated:

ತುಮಕೂರು: ಗೊತ್ತು ಗುರಿಯಿಲ್ಲದೇ ಹಲವು ಅಪರಾಧ, ಮೋಸ, ವಂಚನೆ­ಗಳಲ್ಲಿ ಸಿಲುಕಿ ಒದ್ದಾಡುತ್ತಿರುವ ಯುವ­ಪೀಳಿಗೆಯನ್ನು ಸರಿದಾರಿಗೆ ತರುವ ಹೊಣೆ ರಾಜ್ಯಶಾಸ್ತ್ರ ಉಪನ್ಯಾಸಕರ ಮೇಲಿದೆ ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಯಪ್ರಕಾಶ್‌ ಹೇಳಿದರು.ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ  ಜಿಲ್ಲಾ ರಾಜ್ಯಶಾಸ್ತ್ರ ಸಂಘ ಹಾಗೂ ಪದವಿ­ಪೂರ್ವ ಶಿಕ್ಷಣ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ರಾಜ್ಯಶಾಸ್ತ್ರ ಶಿಕ್ಷಕರಿಗೆ ಸಂವಿಧಾನದ ಪರಿಚಯವಿದೆ. ಸಂವಿಧಾನದ ಆಶಯ, ಹಕ್ಕು ಮತ್ತು ಕರ್ತವ್ಯಗಳು, ಸ್ವಾತಂತ್ರ್ಯದ ಪರಿಚಯವನ್ನು ಯುವಜನತೆಗೆ ಮನ­ವರಿಕೆ ಮಾಡಿಕೊಡುವ ಮೂಲಕ ಅವರನ್ನು ಜವಾಬ್ದಾರಿಯುತ ನಾಗರಿಕ­ರಾಗಿ ಮಾಡಬೇಕು ಎಂದರು.

ರಾಜ್ಯ ಶಾಸ್ತ್ರ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲ ಸಿ.ರಾಜಣ್ಣ ಪ್ರತಿಭಾ ಪುರಸ್ಕಾರ ನೀಡಿದರು.ಕಾರ್ಯಾಗಾರದಲ್ಲಿ ಪಠ್ಯಪುಸ್ತಕ ರಚನಾ ಸಮಿತಿಯ ಅಧ್ಯಕ್ಷೆ ವಿಜಯ­ಲಕ್ಷ್ಮೀ,  ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಪದಾಧಿಕಾರಿಗಳಾದ ಟಿ.­ರಂಗಪ್ಪ,  ಟಿ.ಕೆ. ದುರ್ಗಾಕುಮಾರಿ, ಪಿ.ಎಚ್‌.­ಮಹೇಂದ್ರಪ್ಪ, ಎಸ್‌.­ಕುಮಾರಯ್ಯ ಇದ್ದರು.

ಪದಾಧಿಕಾರಿಗಳ ಆಯ್ಕೆ: ಇದೇ ವೇಳೆ ಕರ್ನಾಟಕ ರಾಜ್ಯ ಶಾಸ್ತ್ರ ಉಪನ್ಯಾಸಕರ ಸಂಘ ತುಮಕೂರು ಶಾಖೆಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಸಂಘದ ಗೌರವಾಧ್ಯಕ್ಷರಾಗಿ ಜಿ.ಎಸ್‌.­ತಿಮ್ಮಯ್ಯ, ಅಧ್ಯಕ್ಷರಾಗಿ ಮುದ್ದರಂಗಮ್ಮ, ಕಾರ್ಯದರ್ಶಿಯಾಗಿ ಬಿ.ಯು.­ಚಂದ್ರ­ಶೇಖರಯ್ಯ, ಖಜಾಂಚಿಯಾಗಿ ಟಿ.ಜೆ.­ಜ್ಯೋತಿಪ್ರಕಾಶ್‌,  ಉಪಾಧ್ಯಕ್ಷರಾಗಿ ಪಿ.ಎಚ್‌.­ಮಹೇಂದ್ರಪ್ಪ, ಬಿ.ಎಂ.­ಹೇಮಪ್ಪರೆಡ್ಡಿ ಆಯ್ಕೆಯಾಗಿದ್ದಾರೆ.

ಸಹಕಾರ್ಯದರ್ಶಿಗಳಾಗಿ ಬಿ.ಎಸ್‌.­ಶಶಿಧರ್‌, ಎಂ.ವಿ.­ಅಜಯ್‌­ಕುಮಾರ್‌, ವಿಶೇಷ ಆಹ್ವಾನಿತರಾಗಿ ರಾಜಣ್ಣ, ಟಿ.ರಂಗಪ್ಪ, ಎಸ್‌.ಕುಮಾರಯ್ಯ, ಎಸ್‌.­ಆರ್‌.­ಚನ್ನಬಸವಣ್ಣ, ಸಿ.ಬಿ.ಸಿದ್ದಲಿಂಗಯ್ಯ ಆಯ್ಕೆಯಾದರು.ತಾಲ್ಲೂಕು ಪ್ರತಿನಿಧಿಗಳಾಗಿ ತುಮ­ಕೂರು ನಗರಕ್ಕೆ ಚಂದ್ರಶೇಖರ್‌, ಗ್ರಾಮಾಂತರ– ಪುಟ್ಟಸ್ವಾಮಯ್ಯ, ತುರುವೇಕೆರೆ– ಪರಮೇಶ್‌, ತಿಪಟೂರು– ಓಂಕಾರಮೂರ್ತಿ, ಚಿಕ್ಕನಾಯಕನಹಳ್ಳಿ–ಬಿ.ಟಿ.ಗಂಗಾಧರ್‌, ಕೊರಟಗೆರೆ– ಎಂ.ರುದ್ರೇಶ್‌, ಗುಬ್ಬಿ– ಪಿ.ಸಿ.ಲೋಕೇಶ್‌, ಮಧುಗಿರಿ–ವಿ.­ರಮೇಶ್‌, ಪಾವಗಡ–ಸತ್ಯಪ್ರಸಾದ್‌, ಶಿರಾ– ಎಚ್‌.ಎಂ.ಚಂದ್ರಣ್ಣ, ಕುಣಿಗಲ್‌– ಎನ್‌.ಸಿದ್ದಪ್ಪ ಅವರನ್ನು ಆರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry