‘ಯುವಕರು ಸಿಡಿದೇಳಲಿ’

7

‘ಯುವಕರು ಸಿಡಿದೇಳಲಿ’

Published:
Updated:

ಬೆಂಗಳೂರು: ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರ ತನಗೆ ದೊರೆತಿರುವ ಅವಕಾಶ­ವನ್ನು ದುರುಪಯೋಗಪಡಿಸಿಕೊಳ್ಳು­ತ್ತಿದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ದೂರಿದರು.ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿ.ಎಸ್‌.ಯಡಿಯೂರಪ್ಪ ನಡೆಸಿದ ಭ್ರಷ್ಟಾಚಾರದಿಂದ ಬೇಸತ್ತ ಜನತೆ ಕಾಂಗ್ರೆಸ್‌ಗೆ ಅಧಿಕಾರ ನೀಡಿ­ದರು. ಆದರೆ ಅದನ್ನು ಕಾಂಗ್ರೆಸ್‌ ಸರಿಯಾಗಿ ಬಳಸಿ­ಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.ಡಿ.ಕೆ.ಶಿವಕುಮಾರ್‌ ಮತ್ತು ಆರ್.­ರೋಷನ್‌ ಬೇಗ್‌ ಅವರನ್ನು ಸಂಪುಟಕ್ಕೆ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಅವರು,  ಯುವಜನತೆ ಇದರ ವಿರುದ್ಧ ಸಿಡಿದೇಳಬೇಕು ಎಂದು ಕರೆ ನೀಡಿದರು.ಸಂತೋಷ್‌ ಲಾಡ್‌ ವಿರುದ್ಧದ ಆರೋಪಗಳು ಪದೇ ಪದೇ ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ಕೈಬಿಡ­ಲಾಯಿತು. ಈಗ ಅದೇ ರೀತಿ ಆರೋಪ ಇರುವ ಇಬ್ಬರನ್ನು ಸಂಪುಟಕ್ಕೆ ತೆಗೆದು­ಕೊಂಡಿರುವುದು ಸರಿಯಲ್ಲ ಎಂದರು.   ಈ ರೀತಿಯ ಅನ್ಯಾಯಗಳನ್ನು ಜನ ಸಹಿಸಿಕೊಳ್ಳಬಾರದು. ಅಂಚೆ ಕಾರ್ಡ್‌­ಗಳು, ಮಾಧ್ಯಮಗಳ ಮೂಲಕ ವಿರೋಧ­ವನ್ನು ಸೂಚಿಸಬೇಕು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry