‘ಯುವಕರ ಆರೋಗ್ಯಕ್ಕೆ ಕ್ರೀಡೆ ಅವಶ್ಯ’

7

‘ಯುವಕರ ಆರೋಗ್ಯಕ್ಕೆ ಕ್ರೀಡೆ ಅವಶ್ಯ’

Published:
Updated:

ಗಜೇಂದ್ರಗಡ: ವಿದ್ಯಾರ್ಥಿಗಳ ಆರೋ­ಗ್ಯಕ್ಕೆ ಕ್ರೀಡೆ ಅವಶ್ಯ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಆರೋಗ್ಯಯುತ ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳು­ವುದು ಸೂಕ್ತ ಎಂದು ಮುಖ್ಯೋ­ಪಾಧ್ಯಾಯಿನಿ ಎಂ.ಟಿ.­ಕುಲ­ಕರ್ಣಿ ಅಭಿ­ಪ್ರಾಯಪಟ್ಟರು. ಎಸ್‌.ಎಂ.ಭೂಮರಡ್ಡಿ ಸಂಯುಕ್ತ ಪ್ರೌಢ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಬ್ಯಾಡ್ಮಿಂಟನ್‌ ಕ್ರೀಡಾಕೂಟಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಗಜೇಂದ್ರ­ಗಡ ಪುರಸಭೆ ವಿದ್ಯಾರ್ಥಿಗಳಿಗೆ ನೀಡಿದ ಉಚಿತ ಕ್ರೀಡಾ ಸಮವಸ್ತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಅದ್ಭುತ ಪ್ರತಿಭೆಗಳಿವೆ.

ಆದರೆ, ಸೂಕ್ತ ವೇದಿಕೆ, ಪ್ರೋತ್ಸಾಹ ದೊರೆಯದಿರುವುದರಿಂದ ಅಸಂಖ್ಯಾತ ಪ್ರತಿಭೆಗಳು ಕಮರಿ ಹೋಗುತ್ತಿವೆ.  ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾ­ಹಿಸುವ ನಿಟ್ಟಿನಲ್ಲಿ ಜಾತ್ರಾ ಮಹೋ­ತ್ಸವ, ಉತ್ಸವದಂತಹ ವಿಶೇಷ ದಿನ­ಗಳಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಪ್ರತಿಭೆ­ಗಳನ್ನು ಗುರುತಿಸಿ ಸೂಕ್ತ ಪ್ರೋತ್ಸಾಹ ನೀಡಲು ಸಂಘ–ಸಂಸ್ಥೆಗಳು ಮುಂದಾ­ಗಬೇಕು’ ಎಂದರು.ಇತ್ತೀಚಿನ ದಿನಗಳಲ್ಲಿ ಭಾರತೀಯರು ದೇಶಿಯ ಕ್ರೀಡೆಗಳಿಗೆ ಆದ್ಯತೆ ನೀಡುತ್ತಿಲ್ಲ. ಬದಲಾಗಿ ಪಾಶ್ಚಿಮಾತ್ಯ ಕ್ರೀಡೆಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಪರಿ­ಣಾಮ ತಲೆಮಾರುಗಳ ಹಿರಿಮೆಯನ್ನು ಹೊಂದಿರುವ ದೇಶಿಯ ಕ್ರೀಡೆಗಳತ್ತ ಯುವಕರ ಆಸಕ್ತಿ ಕ್ಷೀಣಿಸುತ್ತಿದೆ. ಹೀಗಾಗಿ ದೇಶಿಯ ಕ್ರೀಡೆಗಳಿಗೆ ಅಳಿವು–ಉಳಿವಿನ ಪ್ರಶ್ನೆ ಎದುರಾಗಿದೆ.

ಆದ್ದರಿಂದ ಗ್ರಾಮೀಣ ಕ್ರೀಡಾಪಟುಗಳು ತಮ್ಮತನ­ವನ್ನು ಉಳಿಸಿಕೊಂಡು ಕ್ರೀಡಾ ಕ್ಷೇತ್ರದಲ್ಲಿ ಪ್ರಾಬಲ್ಯ ಮೆರೆಯಬೇಕಿದ್ದರೆ ಯುವ­ಕರು ದೇಶಿಯ ಕ್ರೀಡೆಗಳಲ್ಲಿ ತೊಡಗಬೇಕು ಎಂದರು. ಆರೋಗ್ಯ ನಿರೀಕ್ಷಕ ಎಂ.ಬಿ.ನಿಡಶೇಸಿ, ಕೆ.ಬಿ.ಚಾಗರಿ, ಎಸ್‌.ಎಸ್‌.ನರೇಗಲ್‌, ಇ.ಐ.ಸುಣಗಾರ, ಎಂ.ಎಚ್‌.­ರಂಗಣ್ಣವರ, ಎಂ.ಎನ್‌.­ಕರೆಪುಟ್ಟಣ­ವರ, ಬಿ.ಎಸ್‌.ಭಜಂತ್ರಿ ಮತ್ತಿತರರು ವೇದಿಕೆಯಲ್ಲಿ­ದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry