ಬುಧವಾರ, ಜೂನ್ 16, 2021
28 °C

‘ಯುವಶಕ್ತಿ ಪೋಲಾದರೆ ದೇಶಕ್ಕೆ ಗಂಡಾಂತರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಧನೂರು: ದೇಶದಲ್ಲಿ ಶೇ 50ಕ್ಕಿಂತ ಹೆಚ್ಚು ಇರುವ  ಯುವಶಕ್ತಿಯ ಸದ್ಭಳಕೆ­ಯಾದರೆ ಸದೃಢ ರಾಷ್ಟ್ರ ಕಟ್ಟಬಹುದು. ಆದರೆ ಅದೇ ಯುವಶಕ್ತಿ ಪೋಲಾದರೆ ದೇಶಕ್ಕೆ ಗಂಡಾಂತರ ಒದಗುತ್ತದೆ ಎಂದು ಹಿರಿಯ ರೈತ ಮುಖಂಡ  ಹನು­ಮನಗೌಡ  ಬೆಳಗುರ್ಕಿ ಅಭಿಪ್ರಾಯ­ಪಟ್ಟರು.ತಾಲೂಕಿನ ಸಾಸಲಮರಿ ಗ್ರಾಮ­ದಲ್ಲಿ ನಗರದ ಸರ್ಕಾರಿ ಮಹಾವಿದ್ಯಾ ಲಯದಿಂದ ಈಚೆಗೆ ಹಮ್ಮಿಕೊಂಡಿದ್ದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಭಾರ­ತವು ಉತ್ತಮ ಸಾಹಿತ್ಯ, ಕಲೆ, ಸಾಂಸ್ಕೃತಿಕ ಪರಂಪರೆ ಹೊಂದಿದ ರಾಷ್ಟ್ರ­ವಾಗಿದೆ. ಆದ್ದರಿಂದ ಯುವಕರು ದೇಶದ ಗೌರವ ಹೆಚ್ಚಿಸುವ ಕಾರ್ಯ­ಗಳನ್ನು ಕೈಗೊಳ್ಳುವುದರ ಮೂಲಕ ದೇಶವನ್ನು ಅಭಿವೃದ್ದಿಯತ್ತ ಸಾಗಿಸ­ಬೇಕು ಎಂದು ಕರೆ ನೀಡಿದರು.ಗುಲ್ಬರ್ಗ ವಿಭಾಗದ ಎನ್್ಎಸ್‌ಎಸ್‌ ಸಹಾಯಕ ಸಂಯೋಜನಾಧಿಕಾರಿ ಎಸ್.­ಶಿವರಾಜ್ ಮಾತನಾಡಿ, ಎನ್್ಎಸ್‌ಎಸ್‌ ಭಾವನಾತ್ಮಕ ಕ್ರಿಯಾ ಯೋಜನೆಯಾಗಿದ್ದು, ಇದು ವಿದ್ಯಾರ್ಥಿಗಳಿಗೆ ತಮ್ಮ ಜೀವನದಲ್ಲಿ ಶಿಸ್ತು, ಸಂಯಮ, ಶಾಂತಿ, ಬದ್ಧತೆ­ಯನ್ನು ನೆಲೆಗೊಳಿಸುತ್ತದೆ ಎಂದರು.ಎನ್್ಎಸ್‌ಎಸ್‌ ಕಾರ್ಯ­ಕ್ರಮಾಧಿಕಾರಿ ವೆಂಕಟನಾರಾಯಣ ಎಂ. ಸನ್ಮಾನ ಸ್ವೀಕರಿಸಿ ಮಾತನಾ­ಡಿದರು. ಉಪನ್ಯಾಸಕ ಹನುಮಂತಪ್ಪ ಎಸ್. ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಶಾಲೆಯ ಮುಖ್ಯಗುರು ಶರಣಪ್ಪ ಎಸ್.ಗೌಡರ್, ಮುಖಂಡ­ರಾದ ಅಮರೇಗೌಡ.ಎಂ., ಬಸನಗೌಡ ಮಾಲಿ ಪಾಟೀಲ್, ಎಂ.ರಂಗಾರೆಡ್ಡಿ, ಮಲ್ಲನಗೌಡ ಪೊ.ಪಾ, ಸುರುಳಿ ಹನುಮಂತಪ್ಪ ವೇದಿಕೆಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.