‘ಯುವ ಆಟಗಾರರಿಂದ ಹ್ಯಾಂಡ್‌ಬಾಲ್ ಉತ್ತೇಜನ’

7

‘ಯುವ ಆಟಗಾರರಿಂದ ಹ್ಯಾಂಡ್‌ಬಾಲ್ ಉತ್ತೇಜನ’

Published:
Updated:

ಮೂಡುಬಿದಿರೆ: ಯುವ ಹ್ಯಾಂಡ್‌­ಬಾಲ್ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದಲ್ಲಿ ಹ್ಯಾಂಡ್‌ಬಾಲ್ ಕ್ರೀಡೆಗೆ ಅಂತರರಾಷ್ಟ್ರೀಯ ಮಾನ್ಯತೆ ಸಿಗಲಿದೆ ಎಂದು ಮಂಗಳೂರು ಮಹಾ­ನಗರ ಪಾಲಿಕೆಯ ಕೌನ್ಸಿಲ್ ಸೆಕ್ರಟರಿ ಪ್ರವೀಣ್ ಬಿ.ನಾಯಕ್ ತಿಳಿಸಿದರು.ಅವರು ಮೂಡುಬಿದಿರೆಯ ಸ್ವರಾ­ಜ್ಯ ಮೈದಾನದಲ್ಲಿ ಆಳ್ವಾಸ್ ಕಾಲೇಜು ದೈಹಿಕ ಶಿಕ್ಷಣ ಕಾಲೇಜಿನ ಆಶ್ರಯದಲ್ಲಿ ಮಂಗಳೂರು ವಿ.ವಿ ಅಂತರ್ ಕಾಲೇಜು ಹ್ಯಾಂಡ್‌ಬಾಲ್ ಪಂದ್ಯಾಟವನ್ನು ಉದ್ಘಾ­ಟಿಸಿ ಮಾತ­ನಾಡಿ­ದರು.ಫ್ರಾನ್ಸ್ ದೇಶದಲ್ಲಿ ಉದಯವಾದ 19ನೇ ಶತಮಾನದಿಂದ ಯುರೋಪ್‌­ನಲ್ಲಿ ವಿಶಿಷ್ಠ ಛಾಪು ಮೂಡಿಸಿದ ಕ್ರೀಡೆ ಹ್ಯಾಂಡ್‌ಬಾಲ್. ಇದಕ್ಕೆ  5 ಫೆಡ­ರೇಶ­ನ್‌­ಗಳಿವೆ. ಈ ಫೆಡರೇಶನ್‌ನಲ್ಲಿ ಭಾರತ­ವೂ ಒಂದು.  ಜಾಗತಿಕ ಮಟ­ದಲ್ಲಿ 7.95 ಲಕ್ಷ ನೋಂದಾಯಿತ ತಂಡಳಿವೆ. ಏಷ್ಯಾದಲ್ಲಿ ಭಾರತ, ಪಾಕಿ­ಸ್ತಾನ ಸೇರಿ­ದಂತೆ ಕೆಲವು ಕಡೆ ಮಾತ್ರವಿದೆ. ಹ್ಯಾಂಡ್‌­ಬಾಲ್‌ಗೆ ಸೂಕ್ತ ಪ್ರೋತ್ಸಾಹ ಬೇಕು ಎಂದರು.ಹ್ಯಾಂಡ್‌ಬಾಲ್‌ನಿಂದ ದೈಹಿಕ ದೃಢತೆ­ಯ ಜತೆಗೆ ಮಾನಸಿಕ ಕ್ಷಮತೆ ಸಾಧ್ಯ. ಕ್ರೀಡಾ ಹಿನ್ನೆಲೆಯಿಂದ ಬಂದ­ವರಿಗೆ ಕ್ರೀಡೆಯು ಬದುಕುವ ಕಲೆ­ಯನ್ನು ಕಲಿಸುತ್ತದೆ ಎಂದರು.ಕಾಲೇಜಿನ ಪ್ರಾಂಶುಪಾಲ ಜಯ­ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್ ನಿರೂಪಿಸಿದರು. ಉಪನ್ಯಾ­ಸಕ ಪಂಪಾ­ಪತಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry