ಶುಕ್ರವಾರ, ಮಾರ್ಚ್ 5, 2021
18 °C

‘ಯುವ ಉದ್ಯೋಗಿಗಳಲ್ಲಿ ಬದ್ಧತೆಯ ಕೊರತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಯುವ ಉದ್ಯೋಗಿಗಳಲ್ಲಿ ಬದ್ಧತೆಯ ಕೊರತೆ’

ಉಡುಪಿ: ‘ವಿಜಯ ಬ್ಯಾಂಕ್‌ನಲ್ಲಿ ಯುವ ಉದ್ಯೋಗಿ­ಗಳ ನೇಮಕದಿಂದ ಹೊಂದಾಣಿಕೆ ಕೊರತೆ ಕಾಣು­ತ್ತಿದೆ. ಹೊಸ ಪೀಳಿಗೆಯ ಉದ್ಯೋಗಿಗಳಲ್ಲಿ ಕೆಲಸದ ಬದ್ಧತೆ ಹೆಚ್ಚಿಸುವ ಬಗ್ಗೆ ಆಡಳಿತ ಮಂಡಳಿ ಯೋಜನೆ ರೂಪಿಸಬೇಕು’ ಎಂದು ವಿಜಯ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಮುದ್ದಣ್ಣ ಶೆಟ್ಟಿ ಹೇಳಿದರು.ಇಲ್ಲಿ ಭಾನುವಾರ ನಡೆದ ವಿಜಯ ಬ್ಯಾಂಕ್‌ ನೌಕರರ ಸಂಘ ಮತ್ತು ಅಧಿಕಾರಿಗಳ ಸಂಘದ 13ನೇ ವಲಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಅನ್ಯ ರಾಜ್ಯದಿಂದ ನಮ್ಮಲ್ಲಿಗೆ ಬರುವ ಬ್ಯಾಂಕ್‌ನ ಉದ್ಯೋಗಿಗಳಿಗೆ ಇಲ್ಲಿನ ಸಂಸ್ಕೃತಿಗೆ ಒಗ್ಗಿಸುವ ಕೆಲಸ ನಡೆಯಬೇಕು ಎಂದರು.ಆಗಸ್ಟ್‌ 23 ಮತ್ತು 24ರಂದು ಬೆಂಗಳೂರಿನಲ್ಲಿ ನಡೆಯುವ ಅಖಿಲಭಾರತ ಅಧಿವೇಶನಕ್ಕೆ ಪೂರ್ವಭಾವಿಯಾಗಿ 27 ವಲಯ ಸಂಘಟನೆಗಳ ಅಧಿವೇಶನ ಪೂರ್ಣಗೊಳ್ಳಬೇಕಿದೆ. ಈಗಾಗಲೇ 19 ವಲಯ ಅಧಿವೇಶನ ನಡೆದಿದೆ. ನೌಕರರ ಪರಿಸ್ಥಿತಿ ಮತ್ತು ರಾಜಕೀಯ ಪರಿಸ್ಥಿತಿಗಳ ಬಗ್ಗೆ ಅಧಿವೇಶನಗಳಲ್ಲಿ ಚರ್ಚೆ ನಡೆಯಬೇಕು. ವಿಜಯ ಬ್ಯಾಂಕ್‌ನಲ್ಲಿ ನಡೆಯುವ ಬದಲಾವಣೆಗಳ ವಿದ್ಯಮಾನಗಳ ಬಗ್ಗೆ ಮತ್ತು ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ವಿಜಯ ಬ್ಯಾಂಕ್‌ನ ನಿರ್ದೇಶಕ ವೈ.ಮುರಲಿಕೃಷ್ಣ ಅವರನ್ನು ಸನ್ಮಾನಿಸಲಾಯಿತು. ನೌಕರರ ಸಂಘದ ವಲಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ವಿಜಯ ಬ್ಯಾಂಕ್‌ ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಮುಖ್ಯ ಪ್ರಬಂಧಕಿ ಶಾಲಿನಿ ಎಸ್‌ ಶೆಟ್ಟಿ, ವಿಜಯ ಬ್ಯಾಂಕ್ ಅಧಿಕಾರಿಗಳ ಸಂಘದ ಅಧ್ಯಕ್ಷ ಎಚ್‌.ಚಂದ್ರಶೇಖರ ಶೆಟ್ಟಿ, ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಮಡಿನೂರು, ಸಹಾಯಕ ಪ್ರಧಾನ ಕಾರ್ಯದರ್ಶಿ ಪಿ.ಶಾಂತರಾಮ ಶೆಟ್ಟಿ, ಜಂಟಿ ಕಾರ್ಯದರ್ಶಿ ಡಿ.ಗೋಪಾಲಕೃಷ್ಣ, ಉಡುಪಿ ಜಿಲ್ಲಾ ಬ್ಯಾಂಕ್‌ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಿವರಾಯ, ಎ.ಬಿ.ಶೆಟ್ಟಿ, ಗ್ಯಾಬ್ರಿಯಲ್‌ ಮಹಾತ್ಮ, ಅರುಣ್‌ಪ್ರಕಾಶ್‌ ಶೆಟ್ಟಿ, ಕರುಣಾಕರ ಶೆಟ್ಟಿ, ಸೀತಾಚರಣ್‌ ಉಪಸ್ಥಿತರಿದ್ದರು.

ನೌಕರರ ಸಂಘದ ಕಾರ್ಯದರ್ಶಿ ರಾಜೀವ ಶೆಟ್ಟಿ ಸ್ವಾಗತಿಸಿದರು. ಅಧಿಕಾರಿಗಳ ಸಂಘದ ವಲಯ ಅಧ್ಯಕ್ಷ ಅಮಿತ್‌ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಅಶೋಕ್‌ ಕುಮಾರ್‌ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.