‘ಯೋಜನೆಗಳನ್ನು ತಲುಪಿಸಲು ಶ್ರಮಿಸಿ’

7

‘ಯೋಜನೆಗಳನ್ನು ತಲುಪಿಸಲು ಶ್ರಮಿಸಿ’

Published:
Updated:

ರಾಜರಾಜೇಶ್ವರಿನಗರ: ಸರ್ಕಾರದ ಕಾರ್ಯಕ್ರಮಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪ್ರಾಮಾಣಿಕತೆಯಿಂದ ಮಾಡಬೇಕು, ಆಗಮಾತ್ರ ಸರ್ಕಾರಕ್ಕೆ ಒಳ್ಳೆಯ

ಹೆಸರು ಬರಲು ಸಾಧ್ಯ ಎಂದು ಶಾಸಕ ಎಸ್‌.ಟಿ.ಸೋಮಶೇಖರ್‌ ಸಲಹೆ ನೀಡಿದರು.ರಾಮೋಹಳ್ಳಿಯಲ್ಲಿ ಮತ್ತು ಮಾಳಿಗೊಂಡನಹಳ್ಳಿಯಲ್ಲಿ ನೀರನ ಟ್ಯಾಂಕ್‌ ಉದ್ಘಾಟಿಸಿ ಮಾತನಾಡಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಇಂದ್ರಮ್ಮ ನಾಗರಾಜು, ಸದಸ್ಯೆ ಸರ್ವಮಂಗಳ ಕೃಷ್ಣಪ್ಪ, ಸದಸ್ಯರಾದ ವಿ.ವೇಣುಗೋಪಾಲ್‌, ಎಂ.ಪಾಪಣ್ಣ, ತಮ್ಮಯ್ಯ, ತಾ.ಪಂ. ಮಾಜಿ ಅಧ್ಯಕ್ಷ ಬಿ.ಕೃಷ್ಣಪ್ಪ ಹಾಜರಿದ್ದರು. ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷಬಿ.ಎಲ್‌.ಲಕ್ಷ್ಮಯ್ಯ ವಹಿಸಿದರು.ಇದೇ ಸಂದರ್ಭದಲ್ಲಿ ಸುಮಾರು ₨ 4 ಕೋಟಿ ವೆಚ್ಚದಲ್ಲಿ ಚಳ್ಳಘಟ್ಟದಲ್ಲಿ ಬೃಹತ್‌ ಕುಡಿಯುವ ನೀರಿನ ಟ್ಯಾಂಕ್‌, ಅಂಗನವಾಡಿ ಕಟ್ಟಡ, ಭೀಮನಕುಪ್ಪೆಯಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ  ಶಾಸಕರು ಚಾಲನೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry