ಶುಕ್ರವಾರ, ಜೂನ್ 18, 2021
29 °C

‘ಯೋಜನೆ ಜಾರಿಗೆ ನೌಕರರ ಪಾತ್ರ ಮುಖ್ಯ’

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಥಣಿ: ಸರ್ಕಾರದ ವಿವಿಧ ಜನಪರ ಯೋಜನೆಗಳ ಪ್ರಯೋಜನವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವಲ್ಲಿ ನೌಕರರ ಪಾತ್ರ ನಿರ್ಣಾಯಕವಾಗಿದೆ ಎಂದು ವಕೀಲ ಸಿದ್ಧಾರೂಢ ಸವದಿ ಹೇಳಿದರು, ತಾಲ್ಲೂಕು ನೌಕರರ ಸಂಘದ ವತಿಯಿಂದ ಭಾನುವಾರ ಇಲ್ಲಿಯ ನೌಕರರ ಭವನದಲ್ಲಿ ಹಮ್ಮಿಕೊಳ್ಳ ಲಾಗಿದ್ದ ಸ್ನೇಹ ಸೇತುವೆ ಕಾರ್ಯಕ್ರಮ ದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು,

ಆಡಳಿತ ವ್ಯವಸ್ಥೆಯ ಪ್ರಮುಖ ಭಾಗವಾಗಿರುವ ನೌಕರರು ಒಂದು ವೇಳೆ ಜನಸಾಮಾನ್ಯರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸದಿದ್ದರೆ ಅಂಥ ನಾಡಿನಲ್ಲಿ ಅರಾಜಕ ವಾತಾವರಣ ಉಂಟಾಗುತ್ತದೆ, ಇಂಥ ವೇಳೆ ರಾಜ ಎಷ್ಟೇ ಸಮರ್ಥನಾಗಿದ್ದರೂ ನೌಕರರ ಸಹಕಾರವಿಲ್ಲದ ಕಾರಣ ಆತ ಅಸಹಾಯಕನಾಗಬೇಕಾಗುತ್ತದೆ, ಸದ್ಯ ಅಂಥ ಪರಿಸ್ಥಿತಿ ನಮ್ಮ ತಾಲ್ಲೂಕಿನಲ್ಲಿ ನಿರ್ಮಾಣವಾಗದಿರುವದಕ್ಕೆ ಇಲ್ಲಿಯ ನೌಕರರ ನಿಸ್ವಾರ್ಥ ಮನೋಭಾವ ಕಾರಣವೆಂದರು, ಕೆಲವೊಮ್ಮೆ  ಸಾಮಾ ಜಿಕ ನ್ಯಾಯ ಧಿಕ್ಕರಿಸಿ ಕೆಲವರು ನಡೆದು ಕೊಂಡಿರುವ ಉದಾಹರಣೆಗಳೂ ನಮ್ಮಲ್ಲಿವೆ, ಆದರೆ ಬಲುಬೇಗ ತಪ್ಪಿನ ಅರಿವು ಮೂಡಿಸುವ ಈ ನೆಲದ ಮಹಿಮೆಯ ಕಾರಣದಿಂದ ಅಂತಹ ನಿರಂಕುಶ ವರ್ತನೆಗೆ ತಕ್ಷಣ ಕೊಕ್ಕೆ ಬಿದ್ದಿದೆ ಎಂದರು.ಸಂಘದ ಅಧ್ಯಕ್ಷ ರಾಮ ಧರಿಗೌಡರ ಮಾತನಾಡಿ, ಅಥಣಿಯಂತಹ ತಪೋ ಭೂಮಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರೆತಿರುವದು ಸುಯೋಗವೆಂದರು,   ಈ ಹಿಂದೆ ತಪ್ಪು ಮಾಡಿದ ನೌಕರರಿಗೆ ಶಿಕ್ಷೆಯ ರೂಪವಾಗಿ ಅಥಣಿಗೆ ವರ್ಗ ಮಾಡಲಾಗುತ್ತಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಅಥಣಿಯಲ್ಲಿ ಸೇವೆ ಸಲ್ಲಿಸಲು ನೌಕರರು ಪೈಪೋಟಿಗೆ ಇಳಿಯಬೇಕಾಗಿದೆ, ಈ ಮೊದಲು ಇಂತಹುದೇ ಪ್ರಕರಣಗಳಿಂದಾಗಿ ಇಲ್ಲಿಗೆ ವರ್ಗವಾಗಿ ಬಂದವರು ಈಗ ತಮ್ಮ ಸ್ವಂತ ಊರನ್ನು ಮರೆತು ಶಾಶ್ವತವಾಗಿ ಇಲ್ಲಿ ನೆಲೆಸಿರುವ ಸಾಕಷ್ಟು ಉದಾ ಹರಣೆಗಳು ನಮ್ಮ ಮುಂದಿವೆ, ಇದಕ್ಕೆ ಮುಖ್ಯವಾಗಿ ಇಲ್ಲಿಯ ಜನರ ಸಹಕಾರ ಗುಣ ಮತ್ತು ಈ ನೆಲದ ಋಣ  ಕಾರಣವೆಂದರು, ಈ ವೇಳೆ ಎಸ್.ಎಸ್. ಮಾಕಾಣಿ, ಎಸ್.ಕೆ.ಹುಕ್ಕೇರಿ, ಉದಯ ಪಾಟೀಲ, ಎಸ್.ಎ.ನೇಮಗೌಡ, ಬಿ.ವೈ. ಹೊಸಕೇರಿ, ಬಿ.ಎನ್. ಕಾರೆ, ಶೇಖರ ಕರಬಸಪ್ಪಗೋಳ,ಆರ್.ಆರ್. ಪಾಟೀಲ, ಮಹಾಂತೇಶ ಬಾದವಾಡಗಿ, ಎಸ್.ಎ.ಮರನೂರ,ಎಸ್.ಪಿ. ಅಭ್ಯಂಕರ, ಎಲ್.ವಿ.ಕುಲಕರ್ಣಿ ಭಾಗ ವಹಿಸಿದ್ದರು. ಇದೇ ವೇಳೆ  ಗಣ್ಯರನ್ನು ಸತ್ಕರಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.