‘ಯೋಧರ ತ್ಯಾಗದ ಸ್ಮರಣೆ ಅಗತ್ಯ’

7

‘ಯೋಧರ ತ್ಯಾಗದ ಸ್ಮರಣೆ ಅಗತ್ಯ’

Published:
Updated:

ನರಗುಂದ: ಯೋಧರು ತಮ್ಮ ಜೀವದ ಹಂಗು ತೊರೆದು ದೇಶಕ್ಕಾಗಿ ಪ್ರಾಣಾ ರ್ಪಣೆ ಮಾಡಿದ್ದಾರೆ. ಅಂಥವರ ಸಾಲಿನಲ್ಲಿ ದಿವಂಗತ ಬಸವರಾಜ ಯರಗಟ್ಟಿ ಸೇರುತ್ತಾರೆ. ಉತ್ತರಾಖಂಡ ಪ್ರವಾಹದಲ್ಲಿ ಜನರ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ತ್ಯಾಗ  ಮಾಡಿದ್ದು ಇಂಥ ಸಹಸ್ರಾರು ಯೋಧರ ತ್ಯಾಗ ಬಲಿ ದಾನದ ಸ್ಮರಣೆ ಅಗತ್ಯವಾಗಿದೆ ಎಂದು ಜಿಪಂ ಸದಸ್ಯ ಎಂ.ಎಸ್.ಪಾಟೀಲ ಹೇಳಿದರು.ತಾಲ್ಲೂಕಿನ ಜಗಾಪುರದಲ್ಲಿ ಗುರುವಾರ ವೀರಯೋಧ ದಿವಂಗತ ಬಸವರಾಜ ಯರಗಟ್ಟಿಯವರ  ಸ್ಮಾರಕ ಭವನ  ನಿರ್ಮಾಣಕ್ಕೆ ಜಿಪಂ ಸದಸ್ಯ ಎಂ.ಎಸ್.ಪಾಟೀಲ ಭೂಮಿ ಪೂಜೆ ನೆರವೇರಿಸಿ, ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದರು.ಉತ್ತರಾಖಂಡ ಪ್ರವಾಹದಲ್ಲಿ ಹೆಲಿಕಾಪ್ಟರ್ ಮೂಲಕ ಸಂತ್ರಸ್ತರ ಜೀವ ರಕ್ಷಣೆಗೆ ತೊಡಗಿದಾಗ ಬಸವರಾಜ ಜೀವ ಕಳೆದು ಕೊಳ್ಳಬೇ ಕಾ ಯಿತು. ಇವನ ತ್ಯಾಗದ ಸ್ಮರಣೆ ಎಲ್ಲರೂ ಮಾಡುವ ದೃಷ್ಟಿಯಿಂದ ಜೊತೆಗೆ ಅವರ ನೆನಪು  ನಿತ್ಯ ಉಳಿಯಲಿ ಎಂಬ ದೃಷ್ಟಿಯಿಂದ ಜಿಪಂನ 13ನೇ ಹಣಕಾಸು ಯೋಜನೆಯಡಿ 10 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಈಗ ಅದರ ಮೂಲಕ ಸ್ಮಾರಕ ನಿರ್ಮಾಣಕ್ಕೆ  ಚಾಲನೆ ನೀಡಲಾಗುತ್ತಿದೆ. ಬಸವರಾಜ ಯರಗಟ್ಟಿ ಅವರ ಕುಟುಂಬಕ್ಕೆ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು. ಪೆಟ್ರೋಲ್ ಬಂಕ್ ಹಾಗೂ ಇನ್ನಿತರ ಸೌಲಭ್ಯ ಸೇರಿದಂತೆ ಸಂಸದರ ಜೊತೆ ಚರ್ಚಿಸಲಾಗುವುದು ಎಂದು ಪಾಟೀಲ ಹೇಳಿದರು.ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಮಾತನಾಡಿ ‘ಯೋಧರು ದೇಶಕ್ಕಾಗಿ ಸರ್ವಸ್ವವನ್ನೇ ತ್ಯಾಗ ಮಾಡಿ ಸರ್ವರ ರಕ್ಷಣೆಗೆ ಮುಂದಾಗಿದ್ದಾರೆ. ಅವರ ಜೀವನದ ಬಗ್ಗೆ ನಾವೆಲ್ಲ ತಿಳಿಯಬೇಕಿದೆ. ಬಸವರಾಜ ಉತ್ತರಾಖಂಡ ಪ್ರವಾಹದಲ್ಲಿ ಜನರ ರಕ್ಷಣೆಯಲ್ಲಿ ತನ್ನ ಪ್ರಾಣ ನೀಗಿದ್ದು ಅವರ ದಿಟ್ಟತನಕ್ಕೆ ಸಾಕ್ಷಿಯಾಗಿದೆ ಎಂದರು.    ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷೆ ಶಾಂತಾ ದಂಡಿನ, ತಾಪಂ ಉಪಾಧ್ಯಕ್ಷೆ ಪಾರವ್ವ ಹಡಗಲಿ, ಎಪಿಎಂಸಿ ಅಧ್ಯಕ್ಷ ಆರ್.ಬಿ. ರಾಚನ ಗೌಡ್ರ, ಸದಸ್ಯ ಪರಶುರಾಮ ಜಂಬಗಿ, ಶಾಂತವ್ವ ಅಂಗಡಿ, ಗ್ರಾಪಂ ಸದಸ್ಯ ಗೋವಿಂದರಡ್ಡಿ ಸಿದ್ನಾಳ, ತಾಪಂ ಸದಸ್ಯ ಮಲ್ಲಪ್ಪ ಮೇಟಿ, ಗ್ರಾಪಂ ಅಧ್ಯಕ್ಷ ರಾಮಣ್ಣ ಜಲಗೇರಿ, ಶಂಕ್ರಯ್ಯ ಮಠದ, ಬಿ.ಬಿ.ತಳವಾರ, ಬಸವರಾಜ ತಳವಾರ ಸೇರಿದಂತೆ ಮೊದಲಾದವರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry