‘ಯೋಧರ ಹೋರಾಟದ ಫಲ ಸ್ವಾತಂತ್ರ್ಯ’

7

‘ಯೋಧರ ಹೋರಾಟದ ಫಲ ಸ್ವಾತಂತ್ರ್ಯ’

Published:
Updated:

ಬ್ಯಾಡಗಿ: ‘ಸ್ವಾತಂತ್ರ್ಯ ಯೋಧರ ಹೋರಾಟ ತ್ಯಾಗದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದು, ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದು ಇಂದಿನ ಯುವಕರ ಕರ್ತವ್ಯವಾಗಿದೆ’ ಎಂದು ಮಾಜಿ ಸಚಿವ ಸಿ.ಎಂ.ಉದಾಸಿ ಅಭಿಪ್ರಾಯಪಟ್ಟರು. ಪಟ್ಟಣದ ಮುಪ್ಪಿ­ನ­ಸ್ವಾಮಿ ಮಠದಲ್ಲಿ ಭಾನು­ವಾರ ಏರ್ಪಡಿಸಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಷಡಕ್ಷರಪ್ಪ ಮಹಾ­ರಾಜಪೇಟೆ ಅವರ ಪುಣ್ಯ ಸ್ಮರಣೋ­ತ್ಸವ ಕಾರ್ಯಕ್ರಮದಲ್ಲಿ ಮಾತನಾ­ಡಿದರು.‘ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಯೋಧರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ಅವರ ಆದರ್ಶಗಳು ಇಂದಿನ ಸಮಾ­ಜಕ್ಕೆ ದಾರಿ ದೀಪವಾಗಿವೆ’ ಎಂದರು.ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ‘ಶಾಂತಿ ಅಹಿಂ­ಸೆ­ಯನ್ನು ಮುಂದಿಟ್ಟುಕೊಂಡು ಸತ್ಯಾಗ್ರ­ಹಗಳ ಮೂಲಕ ಬ್ರಿಟೀಷರನ್ನು ದೇಶ­ದಿಂದ ಹೊರಹಾಕಲಾಯಿತು. ಇಂತಹ ಹೋರಾಟ ನಡೆಸಿದವರಲ್ಲಿ ಷಡಕ್ಷರಪ್ಪ ಪ್ರಮುಖರಾಗಿದ್ದರು’ ಎಂದರು.ಉಪನ್ಯಾಸಕ ಡಾ.ಪ್ರೇಮಾನಂದ ಲಕ್ಕಣ್ಣನವರ ನುಡಿ ಸೇವೆ ನೀಡಿದರು. ಸ್ವಾತಂತ್ರ್ಯ ಹೋರಾಟಗಾರ ಪರಮ­ಗೌಡ ಹರಕಂಗಿ, ತಹಶೀಲ್ದಾರ್ ಶಿವಶಂಕರ ನಾಯಕ ಮಾತನಾ­ಡಿದರು.ಸಾನಿಧ್ಯ ವಹಿಸಿದ್ದ ಹೋತನಹಳ್ಳಿ ಶಂಕರಾನಂದ ಸ್ವಾಮೀಜಿ ಮಾತನಾಡಿ, ‘ಹೆರಿಲ್ಲದೆ ಉದರದಲ್ಲಿ ಜನಿಸುವ ಮನುಷ್ಯ ದೇಹವನ್ನು ಬಿಡುವಾಗ ಹೆಸರನ್ನಷ್ಟೆ ಬಿಟ್ಟು ಹೋಗಲಿದ್ದಾನೆ. ಸ್ವಾರ್ಥ ಹಾಗೂ ದ್ವೇಷ ಮನೋ­ಭಾವನೆಗಳು ಎಲ್ಲಿವರೆಗೆ ಮನುಷ್ಯನನ್ನು ಬಿಟ್ಟು ಹೋಗುವು­ದಲ್ಲವೋ ಅಲ್ಲಿಯ­ವರೆಗೆ ಲೌಕಿಕ ಜೀವನದಲ್ಲಿ ನೆಮ್ಮದಿ ಸಿಗುವುದಿಲ್ಲ’ ಎಂದು ಹೇಳಿದರು.ವೇದಿಕೆಯಲ್ಲಿ ಗುಡ್ಡದ ಆನ್ವೇರಿ ಶಿವಯೋಗಿ ಸ್ವಾಮೀಜಿ, ಮಳ್ಳಪ್ಪ ಕೊಪ್ಪದ, ಮಹಾಂತೇಶ ಮೇಲ್ಮುರಿ, ಸಾಹಿತಿಗಳಾದ ಗಂಗಾಧರ ನಂದಿ, ಸಂಕಮ್ಮ ಸಂಕಣ್ಣನವರ, ನಿವೃತ್ತ ಪ್ರಾಚಾ­ರ್ಯರಾದ ಎಸ್‌.ಬಿ.ತವರದ, ಎಸ್‌.ಎ.ಗೌಡರ, ಪ್ರಾಚಾರ್ಯ ಡಾ.­ಆರ್‌.ಎಂ.ಕುಬೇರಪ್ಪ, ಕಾರ್ಯ­ನಿತರ ಪತ್ರಕರ್ತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಿಂಗಪ್ಪ ಚಾವಡಿ, ಗುರುರಾಜ ಶಿರಹಟ್ಟಿ, ಎಸ್‌.ಪಿ.­ಕುಲ್ಕರ್ಣಿ, ಪುರಸಭೆ ಸದಸ್ಯರಾದ ಮರಿಗೆಪ್ಪ ಶೆಟ್ಟರ್, ಪ್ರಶಾಂತ ಯಾದ­ವಾಡ ಹಾಗೂ ಇನ್ನಿತರರು ಉಪಸ್ಥಿ­ತರಿದ್ದರು. ಅಡಿವೆಪ್ಪ ಕುರಿ ಸಂಗೀತ ಸೇವೆ ನೀಡಿದರು. ಶಿಕ್ಷಕ ವೈ.ಟಿ.ಹೆಬ್ಬಳ್ಳಿ ಸ್ವಾಗತಿಸಿದರು. ಜೀವ­ರಾಜ ಛತ್ರದ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry