ಭಾನುವಾರ, ಜೂನ್ 13, 2021
22 °C

‘ರಂಗಭೂಮಿ, ಜಾನಪದ ಕಲೆಗೆ ಒತ್ತು ನೀಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀನಗರ: ರಂಗಭೂಮಿ ಕಲೆ ಮತ್ತು ಜಾನಪದ ಕಲೆಯನ್ನು ಉಳಿಸಲು ಯುವಕರು ಹೆಚ್ಚು ಒತ್ತು ನೀಡಬೇಕು ಎಂದು ಸಿಪಿಐ ಗಂಗಾಧರಸ್ವಾಮಿ ತಿಳಿಸಿದರು.ಭಾರತೀನಗರದಲ್ಲಿ ಸಿ.ಎ. ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘದ 12ನೇ ವಾರ್ಷಿಕೋತ್ಸವದ ಅಂಗವಾಗಿ ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘ, ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮದ್ದೂರು ತಾಲ್ಲೂಕು ಪತ್ರಿಕಾ ವರದಿಗಾರರ ಸಂಘದ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಪೂಜಾಕುಣಿತ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.ಮಾಧ್ಯಮಗಳ ಪ್ರಭಾವದಿಂದಾಗಿ ಜಾನಪದ ಸಂಸ್ಕೃತಿ ನಶಿಸಿಹೋಗುತ್ತಿದ್ದು, ಕಲೆ ಮತ್ತು ರಂಗ ಕಲೆಗಳನ್ನು ಉಳಿಸಿ ಬೆಳೆಸುವ ಅವಶ್ಯಕತೆ ಇದೆ ಎಂದರು.ಜೆಡಿಎಸ್ ತಾಲ್ಲೂಕು ಕಾರ್ಯಧ್ಯಕ್ಷ ಹೊನ್ನಲಗೆರೆ ವೆಂಕಟೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಿ.ಎ. ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡ, ಮಾಂಡವ್ಯ ಶಿಕ್ಷಣ ಮತ್ತು ಗ್ರಾಮೀಣಭಿವೃದ್ಧಿ ಸೇವಾ ಸಮಿತಿಯ ಅಧ್ಯಕ್ಷ ವೆಂಕಟೇಶ್, ಲೇಖಕ ಹೆಮ್ಮನಹಳ್ಳಿ ಪುಟ್ಟಸ್ವಾಮಿ, ಮುಖಂಡರಾದ ಕ್ಯಾತಘಟ್ಟ ಗೀರೀಶ್, ಪ್ರಭಾವತಿ ಬೋರೇಗೌಡ, ಸಿದ್ದರಾಜು, ಸಿದ್ದೇಗೌಡ, ಸಿದ್ದಯ್ಯ, ರಂಗಭೂಮಿ ಕಲಾವಿದರ ಸಂಘದ ಹೋಬಳಿ ಘಟಕದ  ಯಡಗನಹಳ್ಳಿ ಆತ್ಮಾನಂದ, ಕೆಂಚೇಗೌಡ, ಪುಟ್ಟಸ್ವಾಮಿ, ಸತೀಶ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.