‘ರಂಗ ಚಟುವಟಿಕೆ ಕುಂಠಿತ’

7

‘ರಂಗ ಚಟುವಟಿಕೆ ಕುಂಠಿತ’

Published:
Updated:

ಗುಲ್ಬರ್ಗ: ಇಂದು ರಂಗ ಚಟುವಟಿಕೆ­ಗಳು ಕ್ಷೀಣಿಸುತ್ತಿರುವುದು ಖೇದಕರ. ಇಂತಹ ಸಂದರ್ಭದಲ್ಲೂ ರಂಗನಟರ ಅಭಿನಂದನಾ ಕೃತಿ ಬಿಡುಗಡೆ­ಗೊಳ್ಳುತ್ತಿ­ರುವುದು ಹೆಮ್ಮೆಯ ವಿಷಯ. ಮುಂದಿನ ತಲೆಮಾರಿಗೆ ದಾಖಲೆ­ಗಳಾಗಿ ಉಳಿಯುವುದು ಇಂತಹ ಪುಸ್ತಕಗಳೇ ಎಂದು ರಂಗಕರ್ಮಿ ಶ್ರೀಧರ ಹೆಗಡೆ ಅಭಿಪ್ರಾಯಪಟ್ಟರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಗರದ ಕನ್ನಡ ಭವನದಲ್ಲಿ ಭಾನುವಾರ ಏಪರ್ಡಿಸಿದ್ದ ಕಾರ್ಯ­ಕ್ರಮ­ದಲ್ಲಿ ಸಂಸ್ಕೃತಿ ಪ್ರಕಾಶನ ಸೇಡಂ ಪ್ರಕಟಿಸಿರುವ ರಂಗನಟ ಮೈಸೂರು ರಮಾನಂದ ಅಭಿನಂದನಾ ಗ್ರಂಥ ‘ರಂಗಾನಂದ’ವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ರಂಗಭೂಮಿ ಜೀವಂತವಾಗಿ ಉಳಿ­ದರೆ ಮಾತ್ರ ನಾಡಿನ ಸಂಸ್ಕೃತಿ ಉಳಿ­ಯಲು ಸಾಧ್ಯ. ಈ ನಿಟ್ಟಿನಲ್ಲಿ ಗುಲ್ಬರ್ಗ ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊ­ಳ್ಳುತ್ತಿರುವುದು ಶ್ಲಾಘನೀಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು ಮಾತ­ನಾಡಿ, ಮೈಸೂರು ರಮಾನಂದರ ಅಭಿನಂದನಾ ಗ್ರಂಥ ‘ಕವಿರಾಜ­ಮಾರ್ಗ’ದ ನೆಲದಲ್ಲಿ ಬಿಡುಗಡೆ­ಗೊಳ್ಳುತ್ತಿ­ರುವುದು ಖುಷಿಯ ವಿಚಾರ ಎಂದರು. ಮೈಸೂರು ರಮಾನಂದ ಅವರು ಮಾತನಾಡಿ, ನನ್ನ ಬದುಕು ರೂಪಿಸಿದ್ದು ರಂಗಭೂಮಿ, ಮೇರುನಟ ರಾಜಕುಮಾರ ಅವರ ಮುಂದೆಯೂ ನಾಟಕ ಪ್ರದರ್ಶಿಸಿದ್ದೆ. ಬಿ.ವಿ.ಕಾರಂತ ಮೊದಲಾದವರು ನನ್ನ ನಾಟಕ ನೋಡಿ ಪ್ರಶಂಸಿದ್ದಾರೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.ಗುಲ್ಬರ್ಗದ ವಿವಿಧೆಡೆ ನಾಟಕ ಪ್ರದರ್ಶನ ನೀಡಿದ್ದನ್ನು ನೆನಪಿಸಿಕೊಂಡ ಅವರು, ಬೀದಿ ನಾಟಕದ ಮೂಲಕ ನಾನು ಈ ಕ್ಷೇತ್ರಕ್ಕೆ ಕಾಲಿರಿಸಿದ್ದೇನೆ. ಇಂದು ಅಭಿನಂದನಾ ಗ್ರಂಥ ಬಿಡು­ಗಡೆಗೊಳ್ಳುತ್ತಿರುವುದು ಸಂತಸ ತಂದಿದೆ ಎಂದರು. ಪತ್ರಕರ್ತ ಶೇಷಮೂರ್ತಿ ಅವಧಾನಿ ಕೃತಿ ಪರಿಚಯ ಮಾಡಿದರು. ಅಭಿನಂದನಾ ಗ್ರಂಥದ ಸಂಪಾದಕ ಪ್ರಭಾಕರ ಜೋಶಿ ಮಾತನಾಡಿದರು. ಸುರೇಶ ಬಡಿಗೇರ ಸ್ವಾಗತಿಸಿದರು. ಬಿ.ಎಚ್‌. ನಿರಗುಡಿ ವಂದಿಸಿದರು. ರಾಜಶೇಖರ ಮಾಂಗ್‌ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಹೆಜ್ಜೆ ಗೆಜ್ಜೆ ಬೆಂಗಳೂರು ತಂಡದಿಂದ ಮೈಸೂರು ರಮಾನಂದ ಅಭಿನಯದ ‘ಅಪ್ಪ–ಮಗ’ ಹಾಸ್ಯ ನಾಟಕ ಪ್ರದರ್ಶನಗೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry