‘ರಕ್ತದ ಗುಂಪು ತಿಳಿಯುವುದು ಅಗತ್ಯ’

7

‘ರಕ್ತದ ಗುಂಪು ತಿಳಿಯುವುದು ಅಗತ್ಯ’

Published:
Updated:

ಯಾದಗಿರಿ: ಆಧುನಿಕ ಜೀವನ ಶೈಲಿ ಯಲ್ಲಿ ಒತ್ತಡ ಹೆಚ್ಚಾಗುತ್ತಿದೆ. ಈ ಒತ್ತಡದ ಜೀವನದಲ್ಲಿ ಹಲವು ಆಕಸ್ಮಿಕ ಅಪಘಾತಗಳಂತಹ ಘಟನೆಗಳು ಸಂಭವಿ ಸಬಹುದು. ಅಂತಹ ಸಂದರ್ಭದಲ್ಲಿ ಆ ವ್ಯಕ್ತಿಯ ರಕ್ತದ ಗುಂಪು ಗೊತ್ತಿದ್ದರೆ ವೈದ್ಯರು ಶೀಘ್ರದಲ್ಲಿ ಸ್ಪಂದಿಸಲು ಸಹ­ಕಾರಿಯಾಗುತ್ತದೆ ಎಂದು ಡಾ.ಶರಣ­ರಡ್ಡಿ ಕೊಡ್ಲಾ ಹೇಳಿದರು.ಇಲ್ಲಿನ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್‌ನಲ್ಲಿ ಬುಧವಾರ ಸೌಹಾರ್ದ ಸಹಕಾರಿ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಉಚಿತ ರಕ್ತ ಗುಂಪು ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ನಮ್ಮ ರಕ್ತದ ಗುಂಪು ಗೊತ್ತಿದ್ದರೆ ಅನುಕೂಲ. ಸರ್ಕಾರಿ ಯೋಜನೆಗಳ ಉಪಯೋಗ ಸೇರಿದಂತೆ ಜೀವ ವಿಮೆ ಪಡೆಯಲು ಕೂಡ ರಕ್ತದ ಗುಂಪು ಯಾವುದು ಎಂದು ತಿಳಿಯುವುದು ಅವಶ್ಯವಾಗಿದೆ ಎಂದರು.ಶ್ರೀರಾಮ ಚಿಟ್ ಫಂಡ್‌ನ ಶಂಕರ­ಗೌಡ ಪಾಟೀಲ, ಸಹಕಾರಿ ಬ್ಯಾಂಕ್‌­ಗಳು ಗ್ರಾಹಕ ಸ್ನೇಹಿ ಆಗಿರುವು­ದಕ್ಕೆ ಸಾರ್ವಜ­ನಿಕ ರಂಗದಲ್ಲಿ ಬಹು­ದೊಡ್ಡ ಸಂಸ್ಥೆ­ಗಳಾಗಿ ಬೆಳೆಯುತ್ತಿವೆ.­ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್ ಕೂಡ ಆ ನಿಟ್ಟಿನಲ್ಲಿ ಬೆಳೆಯಲಿ ಎಂದು ಹಾರೈಸಿದರು.ನಿರ್ದೇಶಕರಾದ ಸೋಮನಾಥರೆಡ್ಡಿ ಬಾಲಚೇಡಿ, ಡಾ.ರಾಯಣಗೌಡ ಪಾಟೀಲ, ಸಂಜಯ ಬಂಡಿಮನಿ, ಡಾ.ಶಶಿ­ಭೂಷಣ ಪಟೇಲ್‌, ಶಂಕರ­ನಾರಾ­ಯಣ, ಕಾಸೀಂ ಪಟೇಲ್, ಮಹೇಶ ಪಾಟೀಲ, ಶಾಲಿನಿ ಮಾಬೂ­ರಕರ, ಮಹಾಲಕ್ಷ್ಮಿ, ಗೌತಮ  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry