‘ರಾಜನಾಥ್‌ ಮನೆಗೆ ಮುತ್ತಿಗೆ’

7

‘ರಾಜನಾಥ್‌ ಮನೆಗೆ ಮುತ್ತಿಗೆ’

Published:
Updated:

ಮುಂಬೈ (ಪಿಟಿಐ): ‘ಲವ್‌ ಜಿಹಾದ್‌’ ಕುರಿತ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರ ವಿವಾದಿತ ಹೇಳಿಕೆಗೆ ಶುಕ್ರವಾರ ತಿರುಗೇಟು ನೀಡಿರುವ ಶ್ರೀರಾಮ ಸೇನೆ, ಲವ್‌ ಜಿಹಾದ್‌ ಪ್ರಕರಣಗಳ ತನಿಖೆಗೆ ಪ್ರತ್ಯೇಕವಾಗಿ ವಿಶೇಷ ದಳ ರಚಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದೆ.‘ದೇಶದ ಗೃಹ ಸಚಿವರಿಗೆ ‘ಲವ್‌ ಜಿಹಾದ್‌’ ಬಗ್ಗೆ ಗೊತ್ತಿಲ್ಲದಿರುವುದು ನಾಚಿಕೆ­ಗೇಡು. ರಾಜನಾಥ್‌ ತಮ್ಮ ಹೇಳಿಕೆ­ಯನ್ನು ತಕ್ಷಣ ವಾಪಸ್‌ ಪಡೆ­ಯಲಿ.  ಇಲ್ಲದಿದ್ದರೆ ದೆಹಲಿ­ಯಲ್ಲಿ­ರುವ ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಮೂಲಕ ‘ಲವ್‌ ಜಿಹಾದ್‌’ ಬಗ್ಗೆ ತಿಳಿಸಿಕೊಡುತ್ತೇವೆ’ ಎಂದು ಸಂಘಟನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಶುಕ್ರವಾರ ಇಲ್ಲಿ ಎಚ್ಚರಿಕೆ ನೀಡಿದ್ದಾರೆ.ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಗುಜರಾತ್‌ನ ಬಿಜೆಪಿ ನಾಯಕರು ಹಿಂದೂ ಸಮುದಾಯದ ಹೆಣ್ಣು ಮಕ್ಕಳು ಮುಸ್ಲಿಂ ಯುವಕರಿಂದ ದೂರ­ವಿರುವಂತೆ ತಾಕೀತು ಮಾಡಿರುವ ಕುರಿತು ಸೆ.12­ರಂದು ಸುದ್ದಿಗಾರರು ಪ್ರತಿಕ್ರಿಯೆ ಕೇಳಿ­ದಾಗ, ‘ಲವ್‌ ಜಿಹಾದ್‌ ಬಗ್ಗೆ ತಿಳಿಯದು’ ಎಂದು ರಾಜನಾಥ್‌ ಹೇಳಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry