‘ರಾಮಾ’ಭಿಮಾನಕ್ಕೆ ಪ್ರಿಯಾಂಕಾ ದಂಗು

7

‘ರಾಮಾ’ಭಿಮಾನಕ್ಕೆ ಪ್ರಿಯಾಂಕಾ ದಂಗು

Published:
Updated:

ಟಿ ಪ್ರಿಯಾಂಕಾ ಚೋಪ್ರಾ ಹೈದರಾಬಾದ್‌ಗೆ ಭೇಟಿ ನೀಡುವುದಕ್ಕೂ ಮುನ್ನ ‘ಜಂಜೀರ್’ ಚಿತ್ರದ ಸಹ ನಟ ರಾಮ್‌ಚರಣ್ ತೇಜಾ ಅವರಿಗೆ ಈ ಪಾಟಿ ಅಭಿಮಾನಿಗಳಿದ್ದಾರೆ ಎಂಬುದು ತಿಳಿದಿರಲೇ ಇರಲಿಲ್ಲವಂತೆ. ಚಿತ್ರದ ಪ್ರಚಾರಕ್ಕೆಂದು ಹೈದರಾಬಾದ್‌ಗೆ ಬಂದಿದ್ದ ಪ್ರಿಯಾಂಕಾ ಚೋಪ್ರಾ, ಅಲ್ಲಿನ ಜನ ರಾಮ್‌ಚರಣ್‌ ಅವರನ್ನು ಅಡಿಗಡಿಗೂ ಹಿಂಬಾಲಿಸುವುದನ್ನು ಕಂಡು ದಂಗಾಗಿ ಹೋದರಂತೆ.1973ರಲ್ಲಿ ತೆರೆಕಂಡಿದ್ದ ಹಿಂದಿಯ ಆ್ಯಕ್ಷನ್‌, ಥ್ರಿಲ್ಲರ್‌ ಚಿತ್ರ ‘ಜಂಜೀರ್’ನ ಮರುಸೃಷ್ಟಿಯಲ್ಲಿ ರಾಮ್‌ಚರಣ್‌ ತೇಜಾ ಜತೆಗೆ ಪ್ರಿಯಾಂಕಾ ನಟಿಸಿದ್ದಾರೆ. ‘ಜಂಜೀರ್‌ ಚಿತ್ರದಲ್ಲಿ ನಟಿಸುವುದಕ್ಕೂ ಮುನ್ನ ನನಗೆ ರಾಮ್‌ಚರಣ್‌ ಬಗ್ಗೆ ನಿಜಕ್ಕೂ ಏನೂ ತಿಳಿದಿರಲಿಲ್ಲ. ನಾನು ಹೈದರಾಬಾದ್‌ಗೆ ಭೇಟಿ ನೀಡಿದ ಮೇಲೆಯೇ ಅವರಿಗೆ ಇಲ್ಲಿ ಇಷ್ಟೊಂದು ಜನಪ್ರಿಯತೆ ಇದೆ ಎಂದು ಗೊತ್ತಾದದ್ದು.

ಹೈದರಾಬಾದ್‌ನ ವಿವಿಧೆಡೆ ಚಿತ್ರೀಕರಣ ನಡೆಯುವ ಸ್ಥಳಕ್ಕೆಲ್ಲಾ ಅವರ ಕಟ್ಟಾ ಅಭಿಮಾನಿಗಳ ಗುಂಪು ಬರುತ್ತಿದ್ದುದನ್ನು ಕಂಡು ನನಗೆ ಸೋಜಿಗವಾಯಿತು. ನಿಜಕ್ಕೂ ರಾಮ್‌ಚರಣ್‌ ತೇಜಾ ದಕ್ಷಿಣದ ಸೂಪರ್ ಸ್ಟಾರ್‌. ಆತನಿಗೆ ಇಲ್ಲಿ ಪಕ್ಕಾ ಅಭಿಮಾನಿಗಳಿದ್ದಾರೆ’ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry