‘ರೆಡ್ಡಿಗಿಂತ ಡಿಕೆಶಿ ಕಡಿಮೆ ಇಲ್ಲ’

7

‘ರೆಡ್ಡಿಗಿಂತ ಡಿಕೆಶಿ ಕಡಿಮೆ ಇಲ್ಲ’

Published:
Updated:

ಬೆಂಗಳೂರು: ಹಿಂದೆ ಬಿಜೆಪಿ ಸರ್ಕಾರ­ದಲ್ಲಿ ಜಿ.ಜನಾರ್ದನ ರೆಡ್ಡಿ ಮಾಡಿದ ಹಾಗೆ ಡಿ.ಕೆ.ಶಿವಕುಮಾರ್‌ ಅವರೂ ಅವ್ಯವಹಾರ ಮಾಡಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್‌.ಹಿರೇಮಠ ಆರೋಪಿಸಿದರು. ಅಕ್ರಮ ಸಂಪಾದನೆ, ಅವ್ಯವಹಾರ­ಗಳಲ್ಲಿ ರೆಡ್ಡಿ ಅವರಿಗಿಂತ ಶಿವಕುಮಾರ್‌ ಕಿಂಚಿತ್ತೂ ಕಡಿಮೆ ಇಲ್ಲ. ಹಿಮಾಲಯ­ದಷ್ಟೇ ದೊಡ್ಡ ಆಪಾದನೆಗಳಿವೆ ಎಂದರು.ಕಾಂಗ್ರೆಸ್‌ ಪಕ್ಷಕ್ಕೆ ಎಳ್ಳಷ್ಟಾದರೂ ನೈತಿಕತೆ ಇದ್ದಿದ್ದರೆ ಈ ರೀತಿ ಮಾಡುತ್ತಿರಲಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿ.ಎಸ್‌.ಯಡಿಯೂರಪ್ಪ ಮಾಡಿದ ಭ್ರಷ್ಟಾಚಾರಕ್ಕಿಂತ ನಾವು ಯಾವುದರಲ್ಲೂ ಕಡಿಮೆ ಇಲ್ಲ ಎಂಬಂತೆ ಕಾಂಗ್ರೆಸ್‌ನವರು ವರ್ತಿಸುತ್ತಿದ್ದಾರೆ ಎಂದು ದೂರಿದರು.ಶಿವಕುಮಾರ್‌, ರೋಷನ್‌ ಬೇಗ್‌ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಮೂಲಕ ಜನರ ವಿಶ್ವಾಸಕ್ಕೆ ದ್ರೋಹ ಬಗೆಯಲಾಗಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಗೆ ಸುಸಂಸ್ಕೃತ ಸಮಾಜ, ರಾಷ್ಟ್ರ ನಿರ್ಮಾಣದ ಬಗ್ಗೆ ಯಾವುದೇ ಜವಾಬ್ದಾರಿ ಇಲ್ಲ. ಆ ಎರಡೂ ಪಕ್ಷಗಳಲ್ಲಿ ಯಾವುದೇ ಭಿನ್ನತೆ ಕಾಣುತ್ತಿಲ್ಲ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry