ಗುರುವಾರ , ಫೆಬ್ರವರಿ 25, 2021
17 °C
ಚಿತ್ರದುರ್ಗ ಕಾರಾಗೃಹದಲ್ಲಿ ರೈತರನ್ನು ಭೇಟಿ ಮಾಡಿದ ಜಗದೀಶ್‌ ಶೆಟ್ಟರ್‌

‘ರೈತರ ಮೇಲಿನ ಮೊಕದ್ದಮೆ ಹಿಂಪಡೆಯಿರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರೈತರ ಮೇಲಿನ ಮೊಕದ್ದಮೆ ಹಿಂಪಡೆಯಿರಿ’

ಚಿತ್ರದುರ್ಗ: ‘ಮಹಾದಾಯಿ ಹೋರಾಟದ ವೇಳೆ ಬಂಧಿತರಾದ ರೈತರ ಮೇಲಿನ ಪ್ರಕರಣಗಳನ್ನು ಷರತ್ತಿಲ್ಲದೇ ವಾಪಸ್ ಪಡೆಯಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಒತ್ತಾಯಿಸಿದರು.ಚಿತ್ರದುರ್ಗದ ಜೈಲಿನಲ್ಲಿರುವ ಮಹಾದಾಯಿ ಹೋರಾಟಗಾರರು, ರೈತರನ್ನು ಬುಧವಾರ ಭೇಟಿಯಾದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ರೈತರು ಜಾಮೀನಿನ ಮೇಲೆ ಹೊರಬರಹುದು. ಆದರೆ, ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ವರ್ಷಗಟ್ಟಲೆ ಕೋರ್ಟ್‌ಗೆ ಅಲೆಯುವ ಶಕ್ತಿ ರೈತರಲ್ಲಿ ಇಲ್ಲ. ಇದಕ್ಕಾಗಿ ಸಾಕಷ್ಟು ಹಣವೂ ವ್ಯಯವಾಗುತ್ತದೆ. ಕೂಲಿ ಮಾಡಿ ಬದುಕುವ ಅವರಿಗೆ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸುವುದು ಕಷ್ಟವಾಗುತ್ತದೆ ಎಂದು ಅವರು ಹೇಳಿದರು.‘ಪೊಲೀಸ್ ದೌರ್ಜನ್ಯದ ವಿರುದ್ಧ ಖಾಸಗಿ ದೂರು ದಾಖಲಿಸಬಹುದಲ್ಲವೇ?’ ಎಂಬ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ್ ‘ನಮ್ಮ ಪಕ್ಷದ ನಾಯಕರ ಖಾಸಗಿ ದೂರು ದಾಖಲಿಸಲು ವಿಚಾರ ನಡೆಸಿದ್ದಾರೆ. ಜತೆಗೆ ಮಾನವ ಹಕ್ಕುಗಳು, ಮಹಿಳಾ ಆಯೋಗಕ್ಕೆ ದೂರು ನೀಡುವ ಪ್ರಯತ್ನಗಳೂ ನಡೆಯುತ್ತಿವೆ’ ಎಂದರು.ಪೊಲೀಸ್ ದೌರ್ಜನ್ಯದ ಹಿಂದೆ ಯಾರದ್ದಾದರೂ ಕೈವಾಡವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ್‌  ‘ದೊಡ್ಡವರ ಕೈವಾಡವಿಲ್ಲದೇ, ಕಾನ್‌ಸ್ಟೆಬಲ್‌ಗಳು ಮುಂದು ವರಿಯುವುದಿಲ್ಲ. ಈ ಪ್ರಕರಣದಲ್ಲೂ ಯಾರೋ ದೊಡ್ಡವರ ಕೈವಾಡವಿರಬಹುದು. ತನಿಖೆಯಿಂದ ಅದು ಗೊತ್ತಾಗುತ್ತದೆ’ ಎಂದರು.ಸಂಸದರು ಒಗ್ಗಟ್ಟಾಗಿ ಪ್ರಧಾನಿ ಬಳಿ ನಿಯೋಗ ಹೋಗಬಹುದಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ್, ‘ಅದಕ್ಕೂ ಮುನ್ನ ಗೋವಾದ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರ ಜತೆ ಸೌಹಾರ್ದ ಮಾತುಕತೆಯಾಗಬೇಕು. ಆ ನಂತರ ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ ಅಥವಾ ಸಂಸದರ ನಿಯೋಗ ಹೋಗಬಹುದು. ಇದಕ್ಕಾಗಿ ವೇದಿಕೆ ಸಿದ್ದ ಮಾಡಲು ಜಂಟಿಯಾಗಿ ಪ್ರಯತ್ನ ಮಾಡುತ್ತೇವೆ’ ಎಂದರು.ಈ ಸರ್ಕಾರಕ್ಕೆ ಸಿಬಿಐ ಎಂದರೆ ಭಯ!

‘ಈ ಸರ್ಕಾರಕ್ಕೆ ಸಿಬಿಐ ತನಿಖೆ ಎಂದರೆ ಭಯ. ಅದಕ್ಕೆ ನಾವು ರೈತರ ಮೇಲಿನ ದೌರ್ಜನ್ಯ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ಎಂದು ಒತ್ತಾಯಿಸುತ್ತಿದ್ದೇವೆ’ ಎಂದ ವಿರೋಧಪಕ್ಷದ ನಾಯಕ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದರು.

‘ಡಿವೈಎಸ್‌ಪಿ ಗಣಪತಿ ಪ್ರಕರಣದಲ್ಲಿ ನ್ಯಾಯಾಂಗ ತನಿಖೆ ಬೇಡ ಎಂದವರು, ಇಲ್ಲೇಕೆ ಸಿಬಿಐ ತನಿಖೆ ಕೇಳುತ್ತಿಲ್ಲ’ ಎಂಬ ಪ್ರಶ್ನೆಗೆ ಶೆಟ್ಟರ್‌ ಮೇಲಿನಂತೆ ಪ್ರತಿಕ್ರಿಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.