ಮಂಗಳವಾರ, ಜೂನ್ 22, 2021
27 °C

‘ರೋಗಿಗಳನ್ನು ಮಾನವೀಯತೆಯಿಂದ ನೋಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮದುರ್ಗ: ‘ಆಸ್ಪತ್ರೆಗೆ ಬರುವ ರೋಗಿಗಳನ್ನು ಮಾನವೀಯತೆಯಿಂದ ನೋಡಬೇಕೆ ಹೊರತು ಹಣ ದಾಸೆಯಿಂದ ನೋಡಬಾರದು’ ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.ತಾಲ್ಲೂಕಿನ ಶಿವಪೇಠ ಗ್ರಾಮದಲ್ಲಿ ಅಂದಾಜು ₨ 1.52 ಕೋಟಿ ವೆಚ್ಚದ ಸುರೇಬಾನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದ ನವೀಕರಣ, ವೈದ್ಯಾಧಿಕಾರಿಗಳ ಕೊಠಡಿ ಮತ್ತು ಡಿ ಗ್ರೂಪ್ ನೌಕರರ ವಸತಿ ಗೃಹ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಆರೋಗ್ಯ ಕೇಂದ್ರದ ಕಟ್ಟಡ ಚೆನ್ನಾಗಿದ್ದರೆ ಸಾಲದು. ಅಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು ರೋಗಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅಂದಾಗ ಮಾತ್ರ ಸರ್ಕಾರ ಕೋಟ್ಯಂತರ ಹಣ ವ್ಯಯ ಮಾಡಿ ನಿರ್ಮಿ ಸಿರುವ ಕಟ್ಟಡಕ್ಕೆ ಬೆಲೆ ಬರುತ್ತದೆ ಎಂದು ಹೇಳಿದರು.ಸುರೇಬಾನ ಮತ್ತು ಮುಳ್ಳೂರ ಭಾಗದ 26ನೇ ಹಂಚು ಕಾಲುವೆಯ ರಿಮಾಡಲಿಂಗ್ ಕಾಮಗಾರಿ ಲಖನಾಯಕನಕೊಪ್ಪದಿಂದ ರೇವಡಿಕೊಪ್ಪದವರೆಗೆ  ಪ್ರಾರಂಭವಾಗಿದೆ. ಲಖನಾಯಕನಕೊಪ್ಪದಿಂದ ಕಡ್ಲಿಕೊಪ್ಪದ ವರೆಗಿನ ರಿಮಾಡಲಿಂಗ್ ಕಾಮಗಾರಿಗೆ ಅನುದಾನ ಮಂಜೂರಾಗಿದ್ದು ಒಂದು ವಾರದೊಳಗೆ ಕೆಲಸ ಪ್ರಾರಂಭವಾಗಲಿದೆ ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಸದಸ್ಯ ನಿಂಗಪ್ಪ ಮೆಳ್ಳಿಕೇರಿ ಮಾತನಾಡಿ, ಸುರೇಬಾನ ಭಾಗದ ಜನರ ಬಹು ದಿನಗಳ ನಿರೀಕ್ಷೆಯಂತೆ ಆರೋಗ್ಯ ಕೇಂದ್ರದ ನವೀಕರಣ ಮತ್ತು ವೈದ್ಯಾಧಿಕಾರಿಗಳ ಕೊಠಡಿ ವಸತಿ ಗೃಹ ನಿರ್ಮಾಣವಾಗುತ್ತಿದೆ. ಇದರಿಂದ ಜನತೆಗೆ ಉತ್ತಮ ಸೇವೆ ನೀಡಲು ವೈದ್ಯರಿಗೆ ಸಾಧ್ಯ ಎಂದು ಹೇಳಿದರು.ತಾಪಂ ಅಧ್ಯಕ್ಷೆ ಶಾಂತವ್ವ ಬೊಮ್ಮನ್ನವರ, ಪ್ರಕಾಶ ಶಿರಹಟ್ಟಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ರೇಣುಕಾ ಡೊಂಬರ,  ತಾಪಂ ಸದಸ್ಯೆ ನಿಂಗವ್ವ ಪೈಲಿ, ಜಿ.ಪಂ ಮಾಜಿ ಉಪಾಧ್ಯಕ್ಷ ಪರಪ್ಪ ಜಂಗವಾಡ, ಗಿರಿಯಪ್ಪ ಹನಸಿ, ಬಿ. ಪಿ. ಪಾಟೀಲ ಸೇರಿದಂತೆ ಹಲ ವರು ವೇದಿಕೆಯಲ್ಲಿದ್ದರು. ಸುರೇಬಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಶೈಲ ಮೆಳ್ಳಿಕೇರಿ ಅಧ್ಯಕ್ಷತೆ ವಹಿಸಿದ್ದರು. ಡಾ. ಪ್ರವೀಣ ಸ್ವಾಗತಿಸಿದರು. ತಾಲ್ಲೂಕು ವೈದ್ಯಾಧಿಕಾರಿ ಎಚ್‌. ಎಂ. ಮಲ್ಲನಗೌಡರ ಪ್ರಾಸ್ತಾವಿಕ ವಾಗಿ ಮಾತನಾಡಿದರು. ದಯಾನಂದ ಶಿರೂರ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.