ಭಾನುವಾರ, ಜೂನ್ 20, 2021
28 °C

‘ರೌಡಿ’ ಬಿಡುಗಡೆ ಮತ್ತೆ ಮುಂದಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮ್‌ಗೋಪಾಲ್‌ ವರ್ಮಾ ಅವರ ತೆಲುಗು ಚಿತ್ರ ‘ರೌಡಿ’ ಬಿಡುಗಡೆ  ಮತ್ತೆ ಮುಂದಕ್ಕೆ ಹೋಗಿದೆ. ಮಾರ್ಚ್‌ 28ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರ ಏಪ್ರಿಲ್ 4ರಂದು ಅನೇಕ ದೇಶಗಳಲ್ಲಿ ಬಿಡುಗಡೆಯಾಗಲಿದೆ. ‘ರೌಡಿ’ ಚಿತ್ರ ಅನೇಕ ಮಲ್ಟಿಪ್ಲೆಕ್ಸ್‌ಗಳಲ್ಲೂ ಬಿಡುಗಡೆಯಾಗಲಿದೆ’ ಎಂದು ಎ.ವಿ.ಪಿಕ್ಚರ್ಸ್‌ ಹೇಳಿದೆ. ಖ್ಯಾತ ನಟ ಮಂಚು ಮೋಹನ್‌ ಬಾಬು ಮತ್ತು ಅವರ ಪುತ್ರ ವಿಷ್ಣು ಮುಖ್ಯ ಪಾತ್ರವರ್ಗದಲ್ಲಿದ್ದಾರೆ.‘ನಾನು  ನಿಜಕ್ಕೂ ಚಿತ್ರವನ್ನು ಎಂಜಾಯ್‌ ಮಾಡಿದ್ದೇನೆ. ಹೆಚ್ಚು ಶ್ರಮವಹಿಸಿ ಮಾಡಿದ ಈ ಚಿತ್ರ ಪ್ರೇಕ್ಷಕರಿಗೆ ನಿರಾಸೆ ಉಂಟುಮಾಡದು ಎಂದು ನಾನು ನಂಬಿದ್ದೇನೆ’ ಎಂದಿದ್ದಾರೆ ವಿಷ್ಣು. ‘ರೌಡಿ’ ರಾಯಲಸೀಮೆಯ ನೈಜಘಟನೆ ಆಧಾರಿತ ಚಿತ್ರ. ಜಯಸುಧಾ ಮತ್ತು ಸಾನ್ವಿ ಶ್ರೀವಾಸ್ತವ್‌ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.